ETV Bharat / bharat

ತೆಲಂಗಾಣದಲ್ಲಿ ಮೇ 7ರವರೆಗೆ ಲಾಕ್​ಡೌನ್​ ಮುಂದುವರಿಕೆ ಸಾಧ್ಯತೆ - ತೆಲಂಗಾಣದಲ್ಲಿ ಮೇ 7 ರ ವರೆಗೆ ಲಾಕ್​ಡೌನ್

ತೆಲಂಗಾಣದಲ್ಲಿ ಮೇ 7ರವರೆಗೆ ಲಾಕ್​ಡೌನ್ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಂದು ಹೈದರಾಬಾದ್​ನಲ್ಲಿ 17 ಕೊರೊನಾ ಪಾಸಿಟಿವ್​ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 448ಕ್ಕೆ ಏರಿಕೆಯಾಗಿದೆ. ಈವರೆಗೆ 131 ಜನ ಗುಣಮುಖರಾಗಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್
author img

By

Published : Apr 19, 2020, 9:30 PM IST

ಹೈದರಾಬಾದ್​ (ತೆಲಂಗಾಣ): ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮೇ 7ರವರೆಗೆ ರಾಜ್ಯದಲ್ಲಿ ಲಾಕ್​ಡೌನ್ ವಿಸ್ತರಿಸುವ ಸಾಧ್ಯತೆ ಇದೆ. ಕ್ಯಾಬಿನೆಟ್ ಸಭೆ ಮುಗಿದ ನಂತರ ನಿರ್ಧಾರವನ್ನು ಅಧಿಕೃತಗೊಳಿಸಲಾಗುತ್ತದೆ ಎನ್ನಲಾಗುತ್ತಿದೆ.

ಅಸ್ತಿತ್ವದಲ್ಲಿರುವ ಕಂಟೈನ್​ಮೆಂಟ್​ ವಲಯಗಳ ನಿಗಾ ಅವಧಿಯು ಮೇ 7ಕ್ಕೆ ಪೂರ್ಣಗೊಳಿಸಲಾಗುತ್ತದೆ. ಕೋವಿಡ್-19 ಹರಡುವುದನ್ನು ತಡೆಗಟ್ಟುವ ಸಲುವಾಗಿ ಆನ್‌ಲೈನ್ ಮತ್ತು ಮನೆ ಬಾಗಿಲಿಗೆ ಆಹಾರ ಪದಾರ್ಥಗಳ ವಿತರಣೆ ಮತ್ತು ಪಾರ್ಸಲ್ ಮೇಲೆ ನಿಷೇಧ ಹೇರಲು ಪ್ರಸ್ತಾವಿತ ಮಾರ್ಗಸೂಚಿಗಳನ್ನು ಕೆಸಿಆರ್​ ನಿರ್ಧರಿಸಿದ್ದಾರೆ.

ಇನ್ನು ಪ್ರಸ್ತಾವಿತ ಮಾರ್ಗಸೂಚಿಗಳ ಪ್ರಕಾರ, ಮಾರ್ಚ್​ನಿಂದ ಮೂರು ತಿಂಗಳ ಅವಧಿಗೆ ಮನೆ ಮಾಲೀಕರು ಬಾಡಿಗೆದಾರರಿಂದ ಬಾಡಿಗೆ ಸಂಗ್ರಹಿಸುವುದನ್ನು ಮುಂದೂಡಬೇಕು ಎಂದೂ ಹೇಳಲಾಗಿದೆ.

ಇಂದು ಹೈದರಾಬಾದ್​ನಲ್ಲಿ 17 ಕೊರೊನಾ ಪಾಸಿಟಿವ್​ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 448ಕ್ಕೆ ಏರಿಕೆಯಾಗಿದೆ. ಈವರೆಗೆ 131 ಜನ ಗುಣಮುಖರಾಗಿದ್ದಾರೆ. ತೆಲಂಗಾಣದಲ್ಲಿ ಈವರೆಗೂ ಒಟ್ಟು 858 ಕೊರೊನಾ ಸೋಂಕಿತರು ವರದಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.