ETV Bharat / bharat

ಲಾಕ್​​ಡೌನ್​ ಸಮಯದಲ್ಲೂ ಕೆಲ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳ! - ಶಾಲಾ ಶುಲ್ಕ ಹೆಚ್ಚಲ

ಲಾಕ್​ಡೌನ್​ ನಡುವೆಯೂ ಕೆಲವು ಶಾಲೆಗಳು ಶುಲ್ಕ ಹೆಚ್ಚಿಸಿದ್ದು, ಮಕ್ಕಳ ಪೋಷಕರು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಶುಲ್ಕ ಹೆಚ್ಚಿಸದಂತೆ ಆದೇಶಿಸುವಂತೆ ಆನ್​​ಲೈನ್​​ನಲ್ಲಿ ಮನವಿ ಮಾಡಿದ್ದಾರೆ.

covid-19-several-schools-announce-fee-hike-add-to-woes-of-parents
ಲಾಕ್​​ಡೌನ್​ ಸಮಯದಲ್ಲೂ ಶಾಲೆಗಳಲ್ಲಿ ಶುಲ್ಕ ಹೆಚ್ಚಳ!
author img

By

Published : Apr 14, 2020, 5:11 PM IST

ನವವದೆಹಲಿ: ದೇಶದಲ್ಲಿ COVID-19ನಿಂದ ಜಾರಿಯಾಗಿರುವ ಲಾಕ್‌ಡೌನ್ ಸಮಯದಲ್ಲಿ ಪೋಷಕರು ಮಕ್ಕಳ ಶಾಲಾ ಶುಲ್ಕದ ವಿನಾಯ್ತಿಗಾಗಿ ಕಾಯುತ್ತಿದ್ದರೆ, ಹಲವು ಶಾಲೆಗಳು ಶುಲ್ಕ ಹೆಚ್ಚಳ ಮಾಡಿವೆ.

ಈ ಹಿನ್ನೆಲೆ ಲಾಕ್​ಡೌನ್​ ಮುಗಿದು ಶಾಲೆಗಳು ಪುನಃ ಬಾಗಿಲು ತೆರೆಯುವವರೆಗೂ ಶುಲ್ಕ ಹೆಚ್ಚಳ ಮಾಡದಂತೆ ಶಾಲೆಗಳ ಆಡಳಿತ ಮಂಡಳಿಗಳಿಗೆ ನಿರ್ದೇಶಿಸುವಂತೆ ಒತ್ತಾಯಿಸಿ ಮಕ್ಕಳ ಪೋಷಕರು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಆನ್​​ಲೈನ್​​ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಸಿದ್ದಾರೆ.

ಇದರ ಮಧ್ಯೆ ಗುಜರಾತ್​ ಸರ್ಕಾರ ಒಂದು ವರ್ಷದವರೆಗೆ ರಾಜ್ಯದ ಯಾವುದೇ ಖಾಸಗಿ ಶಾಲೆಗಳು ಶುಲ್ಕ ಹೆಚ್ಚುಸುವುದಿಲ್ಲ ಎಂದು ಘೋಷಣೆ ಮಾಡಿದೆ. ಹಾಗೂ ಪಶ್ಚಿಮ ಬಂಗಾಳ ಸರ್ಕಾರವು ಶಾಲೆಗಳಿಗೆ ಶುಲ್ಕ ಹೆಚ್ಚಳ ಮಾಡದಂತೆ ಮನವಿ ಮಾಡಿದೆ.

ಇನ್ನು ಯಾವುದೇ ಶುಲ್ಕ ವಿನಾಯ್ತಿ ಬಗ್ಗೆ ದೆಹಲಿ ಸರ್ಕಾರ ಯಾವುದೇ ನಿರ್ದೇಶನ ನೀಡಿಲ್ಲವಾದರೂ ದೆಹಲಿಯ ಖಾಸಗಿ ಶಾಲೆಗಳು ಸರ್ಕಾರದ ಶುಲ್ಕ ಪರಿಶೀಲನಾ ನಿರ್ವಹಣಾ ಸಮಿತಿಯಿಂದ ಶುಲ್ಕ ಹೆಚ್ಚಳಕ್ಕೆ ಅನುಮತಿ ಪಡೆಯಬೇಕಿದೆ.

ಲಾಕ್​​ಡೌನ್​​ ಸಮಯದಲ್ಲಿ ಶಾಲೆಗಳು ಪೋಷಕರನ್ನು ಶುಲ್ಕ ಪಾವತಿಸುವಂತೆ ಒತ್ತಾಯಿಸಬಾರದು ಎಂದು ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಘೋಷಿಸಿವೆ. ಆದಾಗ್ಯೂ, ಈ ಅವಧಿ ಮುಗಿದ ನಂತರ ಶಾಲಾ ಶುಲ್ಕ ಪಾವತಿಸಬೇಕೇ ಎಂಬ ಬಗ್ಗೆ ಪೋಷಕರಲ್ಲಿ ಸ್ಪಷ್ಟತೆ ಇಲ್ಲ.

ಇನ್ನು ಶಾಲೆಗಳ ಪರಿಸ್ಥಿತಿ ಕೂಡ ನಮಗೆ ಅರ್ಥವಾಗುತ್ತೆ. ಶಾಲೆಗಳಲ್ಲಿ ಸಿಬ್ಬಂದಿಗೆ ಸಂಬಳ ನೀಡಬೇಕು. ಆದ್ರೆ ಕೊರೊನಾ ಇರುವ ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಾವು ಕೂಡ ತೊಂದರೆಯಲ್ಲಿದ್ದೇವೆ. ಹೀಗಾಗಿ ಸರ್ಕಾರ ಶುಲ್ಕವನ್ನು ಹೆಚ್ಚು ಮಾಡದೇ, ಇದ್ದಷ್ಟೇ ಮುಂದುವರಿಸುವಂತೆ ಯಾಕೆ ಶಾಲೆಗಳಿಗೆ ಸರ್ಕಾರ ಆದೇಶ ನೀಡುತ್ತಿಲ್ಲ ಎಂದು ಪೋಷಕರೊಬ್ಬರು ಪ್ರಶ್ನಿಸಿದ್ದಾರೆ.

ಕೊರೊನಾ ವೈರಸ್ ಹರಡುವಿಕೆಯಿಂದಾಗಿ ರಾಷ್ಟ್ರವ್ಯಾಪಿ ಲಾಕ್​​​ಡೌನ್ ಘೋಷಣೆಗೆ ಮುಂಚಿತವಾಗಿ ಮಾರ್ಚ್ ಮಧ್ಯದಲ್ಲಿ ಶಾಲೆಗಳನ್ನು ಮುಚ್ಚಲಾಯಿತು. ಇಂದು ಕೊನೆಗೊಳ್ಳಬೇಕಿದ್ದ 21 ದಿನಗಳ ಲಾಕ್‌ಡೌನ್​​ ಈಗ ಮೇ 3ರವರೆಗೆ ವಿಸ್ತರಿಸಲಾಗಿದೆ. ಆದಾಗ್ಯೂ, ಹಲವಾರು ಶಾಲೆಗಳು ಈಗಾಗಲೇ ಆನ್‌ಲೈನ್‌ನಲ್ಲಿ ಬೋಧನೆ ಮತ್ತು ಕಲಿಕೆಯ ಚಟುವಟಿಕೆಗಳನ್ನು ನಡೆಸಲು ಆರಂಭಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.