ETV Bharat / bharat

ಕೋವಿಡ್​​-19 ವಿರುದ್ಧದ ಹೋರಾಟ: ರಿಲಯನ್ಸ್​​ 500 ಕೋಟಿ ರೂ, ಇನ್ಫೋಸಿಸ್​​ನಿಂದ 100 ಕೋಟಿ ರೂ. ದೇಣಿಗೆ! - ಕೊರೊನಾ ವೈರಸ್​

ಹೆಮ್ಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಲು ಧನ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದು, ಇದೀಗ ರಿಲಯನ್ಸ್​​, ಇನ್ಪೋಸಿಸ್​ ಕೂಡ ಇದಕ್ಕೆ ಕೈ ಜೋಡಿಸಿವೆ.

COVID-19
COVID-19
author img

By

Published : Mar 30, 2020, 9:09 PM IST

Updated : Mar 30, 2020, 9:47 PM IST

ಮುಂಬೈ: ಡೆಡ್ಲಿ ವೈರಸ್​ ಕೊರೊನಾ ವಿರುದ್ಧ ಹೋರಾಡಲು ಎಲ್ಲರೂ ಒಂದಾಗುತ್ತಿದ್ದು, ತಮ್ಮ ಕೈಯಿಂದ ಆದಷ್ಟು ಆರ್ಥಿಕ ಸಹಾಯ ಮಾಡಿ ರಕ್ಕಸ ವೈರಸ್​ ವಿರುದ್ಧ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ.

ಈಗಾಗಲೇ ಪ್ರಧಾನಿ ಮೋದಿ ಮನವಿಗೆ ಅನೇಕ ಕಂಪನಿಗಳು ಸ್ಪಂದಿಸಿ ಹಣ ದೇಣಿಗೆ ನೀಡಿದ್ದು, ಇದೀಗ ರಿಲಯನ್ಸ್​​​ 500ಕೋಟಿ ರೂ ದೇಣಿಗೆ ನೀಡಿದೆ. ಪಿಎಂ ಕೇರ್ಸ್​​ ನಿಧಿಗೆ ಹಣ ನೀಡಿರುವುದಾಗಿ ರಿಲಯನ್ಸ್​ ಹೇಳಿದ್ದು, ಇದರ ಜತೆಗೆ ಮಹಾರಾಷ್ಟ್ರ ಹಾಗೂ ಗುಜರಾತ್​​ ಸರ್ಕಾರಗಳಿಗೆ ತಲಾ 5 ಕೋಟಿ ರೂ ನೀಡಿರುವ ವಿಷಯವನ್ನ ಟ್ವಿಟ್ಟರ್​​ನಲ್ಲಿ ಹಾಕಿಕೊಂಡಿದೆ.

ಇನ್ಫೋಸಿಸ್​​​ ಕಂಪನಿ ಕೂಡ ಒಟ್ಟು 100 ಕೋಟಿ ರೂ ದೇಣಿಗೆ ನೀಡಿದ್ದು, 50 ಕೋಟಿ ರೂ ಪ್ರಧಾನಿ ಮೋದಿಯವರ ಪಿಎಂ ಕೇರ್ಸ್​​ ನಿಧಿಗೆ ಹಾಗೂ ಉಳಿದ ಹಣ ಜನರ ಸಹಾಯಕ್ಕಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಈಗಾಗಲೇ ಟಾಟಾ ಟ್ರಸ್ಟ್‌ ಮತ್ತು ಟಾಟಾ ಗ್ರೂಪ್‌ ಕಂಪನಿ ಬರೋಬ್ಬರಿ 15 ಸಾವಿರ ಕೋಟಿ ರೂ ದೇಣಿಗೆ ನೀಡಿದೆ.

Last Updated : Mar 30, 2020, 9:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.