ETV Bharat / bharat

ಕೋವಿಡ್​ ಪರಿಸ್ಥಿತಿ ಪರಿಶೀಲನೆಗೋಸ್ಕರ ವೈನಾಡುಗೆ ರಾಹುಲ್​ ಪ್ರಯಾಣ - ರಾಹುಲ್​ ಗಾಂಧಿ ವೈನಾಡು ಸುದ್ದಿ

ಸಂಸದೀಯ ಕ್ಷೇತ್ರ ವೈನಾಡುಗೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದು, ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ.

Rahul Gandhi to visit Wayanad
Rahul Gandhi to visit Wayanad
author img

By

Published : Oct 17, 2020, 4:01 PM IST

ತಿರುವನಂತಪುರಂ: ಕಾಂಗ್ರೆಸ್​ ಮುಖಂಡ ರಾಹುಲ್ ಗಾಂಧಿ ತಮ್ಮ ಸಂಸದೀಯ ಕ್ಷೇತ್ರ ವೈನಾಡುಗೆ ಪ್ರವಾಸ ಕೈಗೊಳ್ಳಲಿದ್ದು, ಕೋವಿಡ್ ಪರಿಸ್ಥಿತಿ ಪರಿಶೀಲನೆಗಾಗಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ.

ಅಕ್ಟೋಬರ್​​ 19ರಿಂದ ಅಕ್ಟೋಬರ್​ 21ರವರೆಗೆ ವೈನಾಡು ಕ್ಷೇತ್ರದಲ್ಲಿ ರಾಹುಲ್​ ಉಳಿದುಕೊಳ್ಳಲಿದ್ದಾರೆ. ಈ ವೇಳೆ ಪ್ರಮುಖವಾಗಿ ಕ್ಷೇತ್ರದಲ್ಲಿನ ಕೋವಿಡ್​ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಅಕ್ಟೋಬರ್​ 19ರಂದು ದೆಹಲಿಯ ವಿಮಾನ ನಿಲ್ದಾಣದಿಂದ ಕೊಯಿಕ್ಕೋಡ್​ ಏರ್​​ಪೋರ್ಟ್​ಗೆ ತಲುಪಲಿದ್ದಾರೆ. ಇದಾದ ಬಳಿಕ ಮಲಪುರಂ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಲಿದ್ದು, ಈ ವೇಳೆ ಕೊರೊನಾ ವೈರಸ್​ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಕ್ಟೋಬರ್​​ 20ರಂದು ವೈನಾಡುವಿನಲ್ಲಿ ಸಭೆ ನಡೆಸಲಿದ್ದು, ಅಲ್ಲಿನ ಸರ್ಕಾರಿ ಗೆಸ್ಟ್​ ಹೌಸ್​ನಲ್ಲಿ ರಾತ್ರಿ ಉಳಿದುಕೊಳ್ಳಲಿದ್ದಾರೆ. ಅಕ್ಟೋಬರ್​ 21ರಂದು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಲಿದ್ದು, ಅಂದು ಸಂಜೆ ವಾಪಸ್ ದೆಹಲಿಗೆ​ ಬರಲಿದ್ದಾರೆ.

ಕೇರಳದಲ್ಲಿ ಶುಕ್ರವಾರ ಒಂದೇ ದಿನ 7,283 ಕೋವಿಡ್ ಕೇಸ್ ಪತ್ತೆಯಾಗಿದ್ದು, 24 ಜನರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 95,008 ಕೇಸ್​​ಗಳಿದ್ದು, ಇಲ್ಲಿಯವರೆಗೆ 1,113 ಜನರು ಸಾವನ್ನಪ್ಪಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.