ಲಖನೌ: ಕೊರೊನಾ ವೈರಸ್ ಲಸಿಕೆ 'ಕೋವಾಕ್ಸಿನ್' 3ನೇ ಹಂತದ ಪ್ರಯೋಗ ಅಕ್ಟೋಬರ್ ನಿಂದ ಲಖನೌ ಮತ್ತು ಗೋರಖ್ಪುರದಲ್ಲಿ ಪ್ರಾರಂಭವಾಗಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಿಸಿದೆ.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಾಕ್ಸಿನ್ 3ನೇ ಹಂತದ ಪ್ರಯೋಗ ಅಕ್ಟೋಬರ್ ನಿಂದ ಲಖನೌ ಮತ್ತು ಗೋರಖ್ಪುರದಲ್ಲಿ ಪ್ರಾರಂಭವಾಗಲಿದೆ ಎಂದು ಉತ್ತರ ಪ್ರದೇಶದ ಪ್ರಧಾನ ಆರೋಗ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ತಿಳಿಸಿದ್ದಾರೆ.
ಕೋವಾಕ್ಸಿನ್ ಅಭಿವೃದ್ಧಿಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಭಾರತ್ ಬಯೋಟೆಕ್ ಜೊತೆ ಸಹಕರಿಸುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಮುಖಂಡ ದೀಪಕ್ ಸಿಂಗ್ ಗುರುವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಉತ್ತರಪ್ರದೇಶದಲ್ಲಿ ಕೋವಿಡ್ -19 ಪರೀಕ್ಷೆಯನ್ನು ಹೆಚ್ಚಿಸುವಂತೆ ಕೋರಿದ್ದಾರೆ.