ತಿರುವನಂತಪುರಂ: ಕೇರಳದಲ್ಲಿ ಮತ್ತೆ ಐವರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವೆ ಕೆ. ಕೆ. ಶೈಲಾಜಾ ತಿಳಿಸಿದ್ದಾರೆ.
ಈ ಐದು ಮಂದಿ ಸೋಂಕಿತರು ಪಥನಮತ್ತಟ್ಟ ಜಿಲ್ಲೆಯವರೆಂದು ತಿಳಿದು ಬಂದಿದೆ. ಇವರಲ್ಲಿ ಮೂವರು ಫೆಬ್ರವರಿ 29 ರಂದು ಇಟಲಿಯಿಂದ ಹಿಂದಿರುಗಿದ್ದರೆ, ಇನ್ನಿಬ್ಬರು ಅವರ ಸಂಬಂಧಿಕರು ಎಂದು ಸಚಿವೆ ತಿಳಿಸಿದ್ದಾರೆ. ಸೋಂಕಿತರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದ್ದು ವೈದ್ಯರು ವಿಶೇಷ ನಿಗಾ ವಹಿಸಿದ್ದಾರೆ.