ETV Bharat / bharat

ಮುಂದುವರಿದ ಕೊರೊನಾ ನಾಗಾಲೋಟ... ರಾಜ್ಯವಾರು ದಾಖಲಾದ ಕೇಸ್​​ಗಳ​ ಸಂಖ್ಯೆ ಇಂತಿದೆ! - ಮಹಾಮಾರಿ ಕೊರೊನಾ

ದೇಶಾದ್ಯಂತ ಅನ್​ಲಾಕ್​ 1.0 ಜಾರಿಗೊಂಡಾಗಿನಿಂದಲೂ ಕೊರೊನಾ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.

COVID-19 news from across the nation
COVID-19 news from across the nation
author img

By

Published : Jun 30, 2020, 9:33 PM IST

ಹೈದರಾಬಾದ್​: ದೇಶಾದ್ಯಂತ ಇದೀಗ ಅನ್​ಲಾಕ್​​ 2.0 ಗೈಡ್​ಲೈನ್​ ಬಿಡುಗಡೆಯಾಗೊಂಡಿದೆ. ಈ ನಡುವೆ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಲೇ ಇರುವುದು ಆತಂಕ ಮೂಡಿಸಿದೆ.

ಕಳೆದ 24 ಗಂಟೆಯಲ್ಲಿ 18,522 ಕೋವಿಡ್​ ಕೇಸ್​​ಗಳು​ ಹೊಸದಾಗಿ ದಾಖಲಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಇದೀಗ 5,66,840 ಆಗಿದೆ. ಇಂದು 418 ಮಂದಿ ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 16,893ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 2,15,125 ಆ್ಯಕ್ಟೀವ್​ ಕೇಸ್​ಗಳಿದ್ದು, 3,34,821 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ.

ದೆಹಲಿಯಲ್ಲಿ ಕೊರೊನಾ ಹರಡುವಿಕೆ ಜೋರಾಗಿರುವ ಕಾರಣ ದೆಹಲಿಯ ಎಎಪಿ ಸರ್ಕಾರ 500 ಬೆಡ್​​ಗಳ ಕೇರ್​ ಸೆಂಟರ್​ಅನ್ನು​ ಕಾಮನ್​ವೆಲ್ತ್​ ಗೇಮ್​ ಗ್ರಾಮದಲ್ಲಿ ನಿರ್ಮಿಸಿದೆ. ನಾಳೆಯಿಂದ ಕಿಲ್ ಕರೊನಾ ಕ್ಯಾಂಪೇನ್ ಆರಂಭಿಸಲು ನಿರ್ಧರಿಸಲಾಗಿದ್ದು, ಪ್ರತಿದಿನ 15ರಿಂದ 20 ಸಾವಿರ ಸ್ಯಾಂಪಲ್​ ಸಂಗ್ರಹ ಮಾಡಲಾಗುತ್ತದೆ ಎಂದು ತಿಳಿಸಿದೆ.​

COVID-19 news from across the nation
ರಾಜ್ಯವಾರು ದಾಖಲಾದ ಕೇಸ್​ಗಳ​ ಚಿತ್ರಣ ಇಂತಿದೆ

ರಾಜ್ಯವಾರು ಚಿತ್ರಣ ಇಂತಿದೆ

ತೆಲಂಗಾಣ: ಇಂದು ಹೊಸದಾಗಿ 946 ಕೋವಿಡ್​ ಕೇಸ್​ಗಳು ಪತ್ತೆಯಾಗಿದ್ದು, 7 ಜನರು ಸಾವನ್ನಪ್ಪಿದ್ದಾರೆ. ಹೈದರಾಬಾದ್​ನಲ್ಲೇ 896 ಕೇಸ್​ಗಳು​ ಕಾಣಿಸಿಕೊಂಡಿದ್ದು, ಈ ಮೂಲಕ ಒಟ್ಟು ಸಂಖ್ಯೆ 16,339 ಆಗಿದೆ.

ಮಹಾರಾಷ್ಟ್ರ: ದಿನದಿಂದ ದಿನಕ್ಕೆ ಹೆಚ್ಚು ಕೋವಿಡ್​ ಪ್ರಕರಣ ದಾಖಲಾಗುತ್ತಿದ್ದು, ಇಂದು ಒಂದೇ ದಿನ 4,878 ಹೊಸ ಕೇಸ್​ ಹಾಗೂ 245 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ 1,74,761 ಒಟ್ಟು ಕೇಸ್​ಗಳಿದ್ದು, ಸಾವಿನ ಸಂಖ್ಯೆ 7,855 ಆಗಿದೆ. ಇದರಲ್ಲಿ 75,979 ಆ್ಯಕ್ಟೀವ್​ ಕೇಸ್​ಗಳಿದ್ದು, 90,911 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ.

ಉತ್ತರಾಖಂಡ್​​: ಉತ್ತರಾಖಂಡ್​ನಲ್ಲಿಂದು 51 ಹೊಸ ಕೇಸ್​ಗಳು​ ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ​ 2,881ಕ್ಕೆ ಏರಿದೆ.

ಕರ್ನಾಟಕ: ರಾಜ್ಯದಲ್ಲೂ ಕೊರೊನಾ ಅಬ್ಬರ ಜೋರಾಗಿದೆ. ಇಂದು ಕೂಡ 947 ಹೊಸ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲೇ 503 ಕೇಸ್​ ಕಾಣಿಸಿಕೊಂಡಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 15,242 ಆಗಿದ್ದು, 246 ಜನರು ಸಾವನ್ನಪ್ಪಿದ್ದಾರೆ.

ತಮಿಳುನಾಡು: ಇಂದು 3,943 ಹೊಸ ಕೇಸ್​ ಹಾಗೂ 60 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ​ 90,167 ಆಗಿದ್ದು, 38,889 ಆ್ಯಕ್ಟೀವ್​ ಕೇಸ್​ ಹಾಗೂ 50,074 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. ತಮಿಳುನಾಡಿನಲ್ಲಿ ಉನ್ನತ ಶಿಕ್ಷಣ ಸಚಿವ ಕೆ.ಪಿ.ಅನ್ಬಾಲಗನ್​ಗೂ ಕೊರೊನಾ ಸೋಂಕು ತಗುಲಿದೆ.

ಮಧ್ಯಪ್ರದೇಶ: ಕಿಲ್​ ಕೊರೊನಾ ಕ್ಯಾಂಪೇನ್​ ನಾಳೆಯಿಂದ ಆರಂಭಗೊಳ್ಳಿದ್ದು, ಪ್ರತಿದಿನ ಸಾವಿರಾರು ಕೊರೊನಾ ಸ್ಯಾಂಪಲ್​ ಸಂಗ್ರಹ ಮಾಡಲು ಮಧ್ಯಪ್ರದೇಶ ಸರ್ಕಾರ ನಿರ್ದರಿಸಿದೆ. ಇಂದು ರಾಜ್ಯದಲ್ಲಿ 184 ಕೇಸ್​​ ಕಾಣಿಸಿಕೊಂಡಿದ್ದು, ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 13,370 ಆಗಿದೆ.

ಉತ್ತರಪ್ರದೇಶ: ಇಂದು 697 ಕೋವಿಡ್​​ ಪ್ರಕರಣ ಕಾಣಿಸಿಕೊಂಡಿದ್ದು, 19 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 23,492ಕ್ಕೇರಿದೆ. ಇದರಲ್ಲಿ 6,711 ಆ್ಯಕ್ಟೀವ್​ ಕೇಸ್​ಗಳಿವೆ.

ಉಳಿದಂತೆ ಗೋವಾದಲ್ಲಿ 64, ಜಮ್ಮು-ಕಾಶ್ಮೀರದಲ್ಲಿ 260, ರಾಜಸ್ಥಾನದಲ್ಲಿ 354, ಗುಜರಾತ್​ನಲ್ಲಿ 620, ಪಶ್ಚಿಮ ಬಂಗಾಳದಲ್ಲಿ 652, ಪಂಜಾಬ್​ನಲ್ಲಿ 150, ಕೇರಳದಲ್ಲಿ 131 ಕೇಸ್​ ಇಂದು ಪತ್ತೆಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.