ಹೈದರಾಬಾದ್: ದೇಶದಲ್ಲಿ ಸೋಮವಾರ ಕೋವಿಡ್-19 ನಿಂದ ಸಾವನ್ನಪ್ಪಿದವರ ಸಂಖ್ಯೆ 13,699 ಕ್ಕೆ ಏರಿದೆ ಮತ್ತು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 4,25,282 ಕ್ಕೆ ಏರಿಕೆಯಾಗಿದ್ದು, 1,74,387 ಸಕ್ರಿಯ ಪ್ರಕರಣಗಳಿವೆ. ಒಟ್ಟು 2,37,195 ರೋಗಿಗಳನ್ನು ಸಹ ಇಲ್ಲಿಯವರೆಗೆ ಬಿಡುಗಡೆ ಮಾಡಲಾಗಿದೆ.
![ದೇಶಾದ್ಯಂತ ತಲ್ಲಣ ಸೃಷ್ಟಿಸಿದ ಕೊರೊನಾ](https://etvbharatimages.akamaized.net/etvbharat/prod-images/7723262_uh.jpg)
ದೇಶದಲ್ಲಿ ತಲ್ಲಣ ಸೃಷ್ಟಿಸಿದ ಕೋವಿಡ್ :
ದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ನಗರದಲ್ಲಿ ಹೋಮ್ ಕ್ವಾರಂಟೈನ್ನಲ್ಲಿರುವ ಕೊರೊನಾ ರೋಗಿಗಳಿಗೆ ನಾಡಿ ಆಕ್ಸಿಮೀಟರ್ ನೀಡುವುದಾಗಿ ಘೋಷಿಸಿದರು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.
ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ತಮ್ಮ ಸರ್ಕಾರದ ಪ್ರಯತ್ನಗಳ ಕುರಿತು ಮಾತನಾಡಿದ ಕೇಜ್ರಿವಾಲ್, ನಗರದಲ್ಲಿ ಈಗ ಪ್ರತಿದಿನ 18,000 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಹೋಮ್ ಕ್ವಾರಂಟೈನ್ನಲ್ಲಿ ಸುಮಾರು 12,000 ಜನರಿದ್ದಾರೆ ಮತ್ತು ಅವರಿಗೆ ಆಮ್ ಆದ್ಮಿ ಪಕ್ಷದ ಸರ್ಕಾರವು ನಾಡಿ ಆಕ್ಸಿಮೀಟರ್ ನೀಡಲಿದೆ ಎಂದು ಹೇಳಿದರು.
ಮಹಾರಾಷ್ಟ್ರ : ಕಳೆದ 24 ಗಂಟೆಗಳಲ್ಲಿ 55 ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿ ಕೊರೊನಾ ವರದಿ ಪಾಸಿಟಿವ್ ಬಂದಿದೆ. ವೈರಸ್ ಸೋಂಕಿತ ಪೊಲೀಸರ ಒಟ್ಟು ಸಂಖ್ಯೆ ಸೋಮವಾರ 4,103 ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‌ನಿಂದಾಗಿ 48 ಪೊಲೀಸರು ಮೃತಪಟ್ಟಿದ್ದಾರೆ.
ಕೋವಿಡ್ ಕಾರಣದಿಂದಾಗಿ ರಾಜ್ಯ ರಿಸರ್ವ್ ಪೊಲೀಸ್ ಪಡೆ (ಎಸ್‌ಆರ್‌ಪಿಎಫ್) ಸಿಬ್ಬಂದಿಯ ಮೊದಲ ಸಾವು ಮುಂಬೈನಲ್ಲಿ ವರದಿಯಾಗಿದೆ. ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ದಾಖಲಾದ ಎಸ್‌ಆರ್‌ಪಿಎಫ್ ಸಿಬ್ಬಂದಿ ಜೂನ್ 21 ರಂದು ನಿಧನರಾದರು. ಸಾಂಕ್ರಾಮಿಕ ರೋಗದಿಂದ ಮಹಾರಾಷ್ಟ್ರದಲ್ಲಿ 1,32,075 ಕೊರೊನಾ ಪ್ರಕರಣಗಳು ಮತ್ತು 6170 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಗುಜರಾತ್ : ಗುಜರಾತ್‌ನ ಸೂರತ್ ನಗರದಲ್ಲಿ ಸುಮಾರು 300 ವಜ್ರ ಘಟಕಗಳ ಕಾರ್ಮಿಕರು ಕಳೆದ 10 ದಿನಗಳಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯಮದ ಕಾರ್ಯಾಚರಣೆಗಳಿಗೆ ಹೊಸ ನಿರ್ಬಂಧಗಳನ್ನು ವಿಧಿಸಲಾಗಿದೆ.
ಹೊಸ ನಿರ್ಬಂಧಗಳ ಭಾಗವಾಗಿ, ಮೂರು ಪ್ರಮುಖ ವಜ್ರ ವ್ಯಾಪಾರ ಮಾರುಕಟ್ಟೆಗಳು ವಾರಕ್ಕೆ ಎರಡು ಬಾರಿ ಮುಚ್ಚಲ್ಪಡುತ್ತವೆ. ಆದರೆ ಎಲ್ಲಾ ವಜ್ರ ಹೊಳಪು ಘಟಕಗಳ ಕ್ಯಾಂಟೀನ್‌ಗಳು ಎಲ್ಲಾ ದಿನಗಳಲ್ಲಿ ಮುಚ್ಚಲ್ಪಡುತ್ತವೆ.
ಕರ್ನಾಟಕ : ಕಳೆದ ಎರಡು ದಿನಗಳಲ್ಲಿ 322 ಹೊಸ ಪ್ರಕರಣಗಳು ಮತ್ತು 6 ಸಾವುಗಳು ವರದಿಯಾದ ನಂತರ ಬೆಂಗಳೂರಿನಲ್ಲಿ 142 ಕಂಟೇನ್ಮೆಂಟ್ ವಲಯಗಳನ್ನು ಸ್ಥಳೀಯ ನಾಗರಿಕ ಸಂಸ್ಥೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುರುತಿಸಿದೆ.
ಬಿಬಿಎಂಪಿ ಕೋವಿಡ್ -19 ವಾರ್ ರೂಮ್ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ, ಸೋಮವಾರದಂದು ನಗರದಲ್ಲಿ ಒಟ್ಟು ಕಂಟೇನ್ಮೆಂಟ್ ವಲಯಗಳ ಸಂಖ್ಯೆ 440ಕ್ಕೆ ಏರಿದೆ. ಕರ್ನಾಟಕ ರಾಜಧಾನಿಯಲ್ಲಿ 919 ಪ್ರಕರಣಗಳು ಸಕ್ರಿಯವಾಗಿವೆ.
ರಾಜಸ್ಥಾನ: ಕೊರೊನಾ ವೈರಸ್ ರಾಜ್ಯಾದ್ಯಂತ ಆತಂಕ ಸೃಷ್ಟಿಸಿದ್ದು, ಈ ಮಾರಕ ಕಾಯಿಲೆಯಿಂದ ಸಾವಿನ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ಬಿಕನೇರ್‌ನ ಪಿಬಿಎಂ ಆಸ್ಪತ್ರೆಯಲ್ಲಿ ಸೋಮವಾರ ನಾಲ್ಕು ಕೊರೊನಾ ಸೋಂಕಿತ ರೋಗಿಗಳು ಸಾವನ್ನಪ್ಪಿದ್ದಾರೆ. ಬಿಕನೇರ್‌ನ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಎಲ್ ಮೀನಾ ನಾಲ್ಕು ಜನರ ಸಾವನ್ನು ದೃಢಪಡಿಸಿದ್ದಾರೆ.
ಮಧ್ಯಪ್ರದೇಶ : ಕೋವಿಡ್ ಹರಡುವಿಕೆಯ ಬಗ್ಗೆ ಹೆಚ್ಚುತ್ತಿರುವ ಆತಂಕಗಳ ಮಧ್ಯೆ, ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ 'ಆಧುನಿಕ ಯಂತ್ರ'ವನ್ನು ಸ್ಥಾಪಿಸಿದೆ. ಯಾವುದೇ ಪ್ರಯಾಣಿಕರು ಫೇಸ್‌ಮಾಸ್ಕ್ ಧರಿಸದೆ ನಿಲ್ದಾಣಕ್ಕೆ ಬಂದರೆ ಯಂತ್ರವು ಎಚ್ಚರಿಕೆ ನೀಡುತ್ತದೆ. ರೈಲ್ವೆ ನಿಲ್ದಾಣದಲ್ಲಿ ಸಂಪರ್ಕ ಹೊಂದಿದ ಥರ್ಮಲ್ ಇಮೇಜಿಂಗ್ ಕ್ಯಾಮೆರಾವನ್ನು ಸಹ ಸ್ಥಾಪಿಸಿದೆ ಮತ್ತು ಈ ಕ್ಯಾಮೆರಾ ಮೂಲಕ ಥರ್ಮಲ್ ಸ್ಕ್ರೀನಿಂಗ್ ಸಹ ಮಾಡಲಾಗುತ್ತಿದೆ.
ಬಿಹಾರ : ಬಿಹಾರದ ಬಿಜೆಪಿ ಶಾಸಕರೊಬ್ಬರ ಕೋವಿಡ್-19 ವರದಿ ಪಾಸಿಟಿವ್ ಬಂದಿದೆ. ಚಿಕಿತ್ಸೆಗಾಗಿ ಪಾಟ್ನಾದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ದರ್ಭಂಗಾ ಜಿಲ್ಲೆಯ ಜೇಲ್ ಅಸೆಂಬ್ಲಿ ವಿಭಾಗವನ್ನು ಪ್ರತಿನಿಧಿಸುವ ಜಿಬೇಶ್ ಕುಮಾರ್ ಮಿಶ್ರಾ ಅವರು ಸೋಂಕಿನ ಲಕ್ಷಣಗಳನ್ನು ಹೊಂದಿದ್ದರು ಮತ್ತು ಅವರ ಪರೀಕ್ಷಾ ಫಲಿತಾಂಶವು ಸಕಾರಾತ್ಮಕವಾಗಿದೆ ಎಂದು ಹೇಳಿತಿಳಿಸಿದ್ದಾರೆ.
ಜಾರ್ಖಂಡ್ : ದಿಯೋಘರ್‌ನಲ್ಲಿ ಶ್ರಾವಣಿ ಮೇಳ ನಡೆಯುವ ಬಗ್ಗೆ ಸಂದೇಹವಿದೆ. ದೇವಾಲಯದ ಬಾಗಿಲುಗಳು ಇನ್ನೂ ಮುಚ್ಚಲ್ಪಟ್ಟಿವೆ ಮತ್ತು ಅನೇಕ ಪುರೋಹಿತ ಸಂಘಟನೆಗಳು ಜಾತ್ರೆಯನ್ನು ಮುಂದೂಡಬೇಕೆಂದು ಒತ್ತಾಯಿಸಿವೆ.
ಆದರೆ, ಗೊಡ್ಡಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಸಿಎಂಗೆ ಪತ್ರ ಬರೆದು, ಬಾಬಧಮ್ ದೇವಸ್ಥಾನ ತೆರೆಯದಿದ್ದರೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವೆ. ಇದು ಕೇವಲ ನಂಬಿಕೆಯ ವಿಷಯವಲ್ಲ. ಲಕ್ಷಾಂತರ ಜನರ ಉದ್ಯೋಗಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಅವರು ಹೇಳಿದರು.
ಛತ್ತೀಸ್‌ಗಢ : ರಾಜನಂದಗಾಂವ್ ಕಾಂಗ್ರೆಸ್ ಶಾಸಕ ದಳೇಶ್ವರ ಸಾಹು ಅವರು ಸೋಮವಾರ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಡಳಿತವು ಈಗ ಅವರ ಸಂಪರ್ಕಗಳ ಬಗ್ಗೆ ವಿವರಗಳನ್ನು ಹುಡುಕುತ್ತಿದೆ.
ಶಾಸಕ ದಳೇಶ್ವರ ಸಾಹು ಎಂಎಂಎ ಡೊಂಗರ್‌ಗಾಂವ್‌ನಲ್ಲಿ ಮೃತಪಟ್ಟ ವ್ಯಕ್ತಿಯ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಮೃತನಿಂದ ಸೋಂಕು ತಗುಲಿರುವ ಸಾಧ್ಯತೆಯಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಯುವಕನಲ್ಲಿ ಕೋವಿಡ್ ಸೋಂಕಿರುವುದು ತಡವಾಗಿ ದೃಢಪಟ್ಟಿದೆ.