ETV Bharat / bharat

ರಾಷ್ಟ್ರಾದ್ಯಂತ ಕೊರೊನಾ ಕುಣಿತ : ಇಲ್ಲಿದೆ ಸಂಪೂರ್ಣ ಮಾಹಿತಿ

author img

By

Published : Jun 21, 2020, 12:28 AM IST

ಕೇಜ್ರಿವಾಲ್ ಸರ್ಕಾರದ ವಿರೋಧದ ಹಿನ್ನೆಲೆಯಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್​-19 ರೋಗಿಗಳಿಗೆ ಐದು ದಿನಗಳ ಸಾಂಸ್ಥಿಕ ಕ್ವಾರಂಟೈನ್​ ನೀಡುವ ಇತ್ತೀಚಿನ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ. ಈ ಮಧ್ಯೆ ರಾಜ್ಯಸಭಾ ಚುನಾವಣೆಗೆ ಮತ ಚಲಾಯಿಸಿ, ಪಕ್ಷದ ಸಭೆಗಳಲ್ಲಿ ಭಾಗವಹಿಸಿದ್ದ ಮಧ್ಯಪ್ರದೇಶದ ಹಿರಿಯ ಬಿಜೆಪಿ ಶಾಸಕರೊಬ್ಬರ ಕೊರೊನಾ ವರದಿ ಪಾಸಿಟಿವ್​ ಬಂದಿದ್ದು, ಆತಂಕ ಸೃಷ್ಟಿಸಿದೆ.

ರಾಷ್ಟ್ರಾದ್ಯಂತ ಕೊರೊನಾ ಕುಣಿತ
ರಾಷ್ಟ್ರಾದ್ಯಂತ ಕೊರೊನಾ ಕುಣಿತ

ಹೈದರಾಬಾದ್: ದೇಶದಲ್ಲಿ ಶನಿವಾರ ಕೋವಿಡ್ -19ನಿಂದ ಸಾವನ್ನಪ್ಪಿದವರ ಸಂಖ್ಯೆ 12,948 ಕ್ಕೆ ಏರಿದೆ. ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 3,95,048 ಕ್ಕೆ ಏರಿಕೆಯಾಗಿದ್ದು, 1,68,269 ಸಕ್ರಿಯ ಪ್ರಕರಣಗಳಿವೆ. ಒಟ್ಟು 2,13,830 ರೋಗಿಗಳನ್ನು ಸಹ ಇಲ್ಲಿಯವರೆಗೆ ಬಿಡುಗಡೆ ಮಾಡಲಾಗಿದೆ.

ರಾಷ್ಟ್ರಾದ್ಯಂತ ಕೊರೊನಾ ಕುಣಿತ
ರಾಷ್ಟ್ರಾದ್ಯಂತ ಕೊರೊನಾ ಕುಣಿತ

ದೆಹಲಿ : ಕೇಜ್ರಿವಾಲ್ ಸರ್ಕಾರದ ವಿರೋಧದ ನಂತರ, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ರೋಗಿಗಳಿಗೆ ಐದು ದಿನಗಳ ಸಾಂಸ್ಥಿಕ ಕ್ವಾರಂಟೈನ್​ ನೀಡುವ ಇತ್ತೀಚಿನ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ. ಐದು ದಿನಗಳವರೆಗೆ ಸಾಂಸ್ಥಿಕ ಕ್ವಾರಂಟೈನ್​ ಸೌಲಭ್ಯಕ್ಕೆ ಕಳುಹಿಸಲಾಗುವುದು ಎಂಬ ಭಯದಿಂದ ಜನರು ರೋಗದ ಪರೀಕ್ಷೆಗೆ ಒಳಗಾಗುವುದನ್ನು ತಪ್ಪಿಸುತ್ತಾರೆ ಎಂದು ಮುಖ್ಯಮಂತ್ರಿ ಎಲ್-ಜಿಗೆ ತಿಳಿಸಿದ್ದಾರೆ. ಪ್ರತಿ ಕೋವಿಡ್ -19 ರೋಗಿಗೆ ಐದು ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್​ ಬಳಿಕ ಹೋಂ ಐಸೋಲೇಷನ್​ಗೆ ಒಳಪಡಿಸಲು ಶುಕ್ರವಾರ ಆದೇಶಿಸಿತ್ತು.

ಮಹಾರಾಷ್ಟ್ರ : ಮಹಾರಾಷ್ಟ್ರ ಪೊಲೀಸ್​ ಇಲಾಖೆ ಕಳೆದ 48 ಗಂಟೆಗಳಲ್ಲಿ 140 ಹೊಸ ಕೋವಿಡ್​-19 ಪ್ರಕರಣಗಳನ್ನು ವರದಿ ಮಾಡಿದ್ದಾರೆ. ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯನ್ನು 3,960ಕ್ಕೆ ತಲುಪಿದೆ ಎಂದು ಮಹಾರಾಷ್ಟ್ರ ಪೊಲೀಸರು ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂಬೈನ ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆಯಲ್ಲಿ ಪೊಲೀಸರನ್ನು ದಾಖಲಿಸಲಾಗಿದ್ದು, ಕಳೆದ 10 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 2,925 ಪೊಲೀಸ್ ಸಿಬ್ಬಂದಿ ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಒಟ್ಟು 2,349 ಮುಂಬೈ ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೊನಾ ವೈರಸ್ ಪಾಸಿಟಿವ್​ ಬಂದಿದೆ. ಈವರೆಗೆ 31 ಮಂದಿ ಮಾರಣಾಂತಿಕ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ರಾಷ್ಟ್ರಾದ್ಯಂತ ಕೊರೊನಾ ಕುಣಿತ
ರಾಷ್ಟ್ರಾದ್ಯಂತ ಕೊರೊನಾ ಕುಣಿತ

ಕರ್ನಾಟಕ : ಪ್ರಸಕ್ತ ಕೊರೊನಾ ಹರಡುವಿಕೆಯ ವೇಗವನ್ನು ಆಧರಿಸಿ ರಾಜ್ಯ ಆರೋಗ್ಯ ಇಲಾಖೆ ಆಗಸ್ಟ್ 15 ರ ವೇಳೆಗೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1 ಲಕ್ಷವನ್ನು ಮುಟ್ಟಲಿದೆ ಎಂದು ಸೂಚಿಸಿದೆ. ಈ ಪ್ರಕ್ಷೇಪಣವು ಪ್ರಸ್ತುತ ದರವನ್ನು ಗಣನೆಗೆ ತೆಗೆದುಕೊಂಡ ದ್ವಿಗುಣ ದರವನ್ನು ಆಧರಿಸಿದೆ.

ತಮಿಳುನಾಡು : ಟಿವಿಎಸ್ ಸುಂದ್ರಾಮ್ ಫಾಸ್ಟೆನರ್ಸ್ ಲಿಮಿಟೆಡ್ ಅಧ್ಯಕ್ಷ ನಾರಾಯಣಸ್ವಾಮಿ ಬಾಲಕೃಷ್ಣನ್ ಅವರು ಕೋವಿಡ್​-19 ಕಾರಣ ಶನಿವಾರ ನಿಧನರಾದರು. ರಾಜ್ಯವು ಶನಿವಾರ 2,396 ಕೋವಿಡ್​-19 ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಸೋಂಕಿತರ ಸಂಖ್ಯೆ 56,845 ಕ್ಕೆ ತಲುಪಿದ್ದು, 39 ಸಾವುಗಳು ಸಂಭವಿಸಿವೆ.

ಒಟ್ಟು ಪ್ರಕರಣಗಳಲ್ಲಿ ಇತರ ದೇಶಗಳು ಮತ್ತು ರಾಜ್ಯಗಳಿಂದ ಹಿಂದಿರುಗಿದ 64 ಮಂದಿ ಸೇರಿದ್ದಾರೆ. ಸಕ್ರಿಯ ಪ್ರಕರಣಗಳು 24,822 ಮತ್ತು 1,045 ಶನಿವಾರ ಬಿಡುಗಡೆಯಾಗಿದೆ.

ಮಧ್ಯಪ್ರದೇಶ : ರಾಜ್ಯದಲ್ಲಿ ರಾಜ್ಯಸಭಾ ಚುನಾವಣೆಗೆ ಮತ ಚಲಾಯಿಸಿ ಪಕ್ಷದ ಸಭೆಗಳಲ್ಲಿ ಭಾಗವಹಿಸಿದ ಮಧ್ಯಪ್ರದೇಶದ ಹಿರಿಯ ಬಿಜೆಪಿ ಶಾಸಕರೊಬ್ಬರ ಕೊರೊನಾ ವರದಿ ಪಾಸಿಟಿವ್​ ಬಂದಿದೆ. ಶಾಸಕರ ಪತ್ನಿಗೆ ಸಹ ಸೋಂಕು ದೃಢಪಟ್ಟಿದೆ. ಕೊರೊನಾಗೆ ತುತ್ತಾಗಿರುವ ಮಧ್ಯಪ್ರದೇಶದ ಎರಡನೇ ಶಾಸಕರಾಗಿದ್ದಾರೆ.

ಇದರಿಂದ ಇತರ ಶಾಸಕರಲ್ಲಿ ಆತಂಕವನ್ನು ಉಂಟುಮಾಡಿದೆ. ಅವರಲ್ಲಿ ಕೆಲವರು ತಮ್ಮನ್ನು ತಾವೇ ಕೊರೊನಾ ಪರೀಕ್ಷೆಗೆ ಒಳಪಡಿಸಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಶಾಸಕರೊಂದಿಗೆ ಸಂವಹನ ನಡೆಸಿದ ಐದು ಬಿಜೆಪಿ ಶಾಸಕರು ಮತ್ತು ಅವರ ಚಾಲಕರು ಮತ್ತು ಬಂದೂಕುಧಾರಿಗಳು ಭೋಪಾಲ್‌ನ ಜೆಪಿ ಆಸ್ಪತ್ರೆಯಲ್ಲಿ ಶನಿವಾರ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.

ರಾಜಸ್ಥಾನ : ಖಾಸಗಿ ಪ್ರಯೋಗಾಲಯಗಳು ಮತ್ತು ಆಸ್ಪತ್ರೆಗಳಲ್ಲಿನ ಕೊರೊನಾ ರೋಗಿಗಳ ಕೋವಿಡ್​ ಪರೀಕ್ಷೆ ಮತ್ತು ಚಿಕಿತ್ಸೆಯ ಆರೋಪಗಳನ್ನು ರಾಜಸ್ಥಾನ ಸರ್ಕಾರ ತಳ್ಳಿಹಾಕಿದೆ. ಸರ್ಕಾರ ಖಾಸಗಿ ಲ್ಯಾಬ್‌ಗಳಲ್ಲಿ ಮಾದರಿಗಳ ಪರೀಕ್ಷೆಗೆ 2,200 ರೂ. ಯಾವುದೇ ಖಾಸಗಿ ಆಸ್ಪತ್ರೆಯು ಸಾಮಾನ್ಯ ಹಾಸಿಗೆಗೆ ದಿನಕ್ಕೆ 2,000 ರೂ. ಮತ್ತು ವೆಂಟಿಲೇಟರ್ ಹೊಂದಿರುವ ಐಸಿಯು ಹಾಸಿಗೆಗೆ 4,000 ರೂ. ದರ ನಿಗದಿಪಡಿಸಿ ಸರ್ಕಾರ ಆದೇಶಿಸಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಆರೋಪಗಳನ್ನು ನಿಯಂತ್ರಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಯಾವುದೇ ಖಾಸಗಿ ಲ್ಯಾಬ್ ಅಥವಾ ಆಸ್ಪತ್ರೆ ಈ ಬೆಲೆಗಳಿಗಿಂತ ಹೆಚ್ಚಿನ ಶುಲ್ಕ ವಿಧಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪರಿಶೀಲನಾ ಸಭೆಯಲ್ಲಿ ಆರೋಗ್ಯ ಸಚಿವ ರಘು ಶರ್ಮಾ, ಮುಖ್ಯ ಕಾರ್ಯದರ್ಶಿ ಡಿ.ಬಿ.ಗುಪ್ತಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಉತ್ತರಾಖಂಡ : ಮುಂಬರುವ ಕನ್ವರ್ ಯಾತ್ರೆ ಕುರಿತು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ವಾಸ್ತವ ಸಭೆ ನಡೆಸಿದರು.

ವರದಿಯ ಪ್ರಕಾರ, ಸಭೆಯಲ್ಲಿ,ಕೊರೊನಾ ವೈರಸ್ ದೇಶದಲ್ಲಿ ವಿನಾಶವನ್ನು ಸೃಷ್ಟಿಸುತ್ತಿರುವುದರಿಂದ ಈ ವರ್ಷ ಯಾತ್ರೆ ಮುಂದೂಡಬೇಕೆಂದು ಸಾಮೂಹಿಕ ಒಪ್ಪಂದವಿತ್ತು. ಕನ್ವರ್ ಸಂಘ ಮತ್ತು ಎಲ್ಲಾ ಸಂತರಿಂದಲೂ ಇದೇ ಪ್ರಸ್ತಾಪವನ್ನು ಸ್ವೀಕರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.