ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇದರ ಮಧ್ಯೆ ಸೆಪ್ಟೆಂಬರ್ 14ರಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ.
ಅದಕ್ಕಾಗಿ ಈಗಾಗಲೇ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದ್ದು, ಅಧಿವೇಶನಕ್ಕೆ ಹಾಜರಾಗುವ ಪ್ರತಿ ಸಂಸದರೂ ಕೊರೊನಾ ವೈರಸ್ ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದರ ಮಧ್ಯೆ ಸಂಸದರು ಇದೇ ಮೊದಲ ಸಲ ಮೊಬೈಲ್ ಆ್ಯಪ್ ಮೂಲಕ ತಮ್ಮ ಅಟೆಂಡೆನ್ಸ್ ಹಾಕಲಿದ್ದಾರೆ.
ಅಟೆಂಡೆನ್ಸ್ ರಿಜಿಸ್ಟರ್ ಆ್ಯಪ್ ಎಂಬ ಮೊಬೈಲ್ ಆ್ಯಪ್ ಸಿದ್ಧಗೊಳಿಸಲಾಗಿದ್ದು, ರಾಷ್ಟ್ರೀಯ ಮಾಹಿತಿ ಕೇಂದ್ರ ಈ ಆ್ಯಪ್ ವಿನ್ಯಾಸಗೊಳಿಸಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ಸಲ ಹಾಜರಾತಿ ರಿಜಿಸ್ಟರ್ ಬಳಸುವ ಅವಶ್ಯಕತೆ ಇಲ್ಲ.ಈ ಅಪ್ಲಿಕೇಶನ್ ಸಂಸತ್ತಿನ ಆವರಣದಲ್ಲಿ ಮಾತ್ರ ಕಾರ್ಯನಿರ್ವಹಿಸಲಿದೆ. ತಮ್ಮ ಮುಖದ ಚಿತ್ರ ತೆಗೆದು ಅಪ್ಲೋಡ್ ಮಾಡಬೇಕಾಗುತ್ತದೆ.
ಈ ಅಪ್ಲಿಕೇಶನ್ನಲ್ಲಿ ಹಾಜರಾತಿ, ರಜೆ ಅರ್ಜಿ ಸೇರಿದಂತೆ ಇ-ವರದಿ, ಅರ್ಧ ದಿನ ಹಾಗೂ ಪೂರ್ಣ ದಿನದ ಹಾಜರಾತಿ ಸಹ ಇರಲಿದೆ. ಸೆಪ್ಟೆಂಬರ್ 14ರಿಂದ ಈ ಸಲದ ಅಧಿವೇಶನ ಆರಂಭಗೊಳ್ಳಲಿದ್ದು, ಯಾವುದೇ ರೀತಿಯ ರಜೆ ಇಲ್ಲದೇ ಅಕ್ಟೋಬರ್ 1ರವರೆಗೆ ನಡೆಸಲು ನಿರ್ಧರಿಸಲಾಗಿದೆ.