ಮಾಲಿಹಾಬಾದ್ (ಉತ್ತರ ಪ್ರದೇಶ): ಕೊರೊನಾ ಭೀತಿ ಹಿನ್ನೆಲೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಲಾಗಿದೆ. ಇದರ ಪರಿಣಾಮ, ಮಾಲಿಹಾಬಾದ್‌ನ ಮಾವಿನ ಬೆಳೆಗಾರರು ತಮ್ಮ ವ್ಯವಹಾರದ ಬಗ್ಗೆ ಚಿಂತಿತರಾಗಿದ್ದಾರೆ.
"ಕಳೆದ ವರ್ಷಕ್ಕೆ ಹೋಲಿಸಿದರೆ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಮಳೆಯಾಗಿದ್ದರಿಂದ ಶೇ. 25 ರಷ್ಟು ಕಡಿಮೆ ಉತ್ಪಾದನೆ ಕಂಡುಬಂದಿದೆ. ಈಗ ಲಾಕ್ಡೌನ್ನಿಂದ ಕಾರ್ಮಿಕರ ಕೊರತೆ ಸಹ ಉಂಟಾಗಿದೆ" ಅಲ್ಲದೇ ಮಾರುಕಟ್ಟೆ ಸಮಸ್ಯೆ ತಲೆದೋರಿದೆ ಎಂದು ಮಾವಿನ ಬೆಳೆಗಾರರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ "ಭಾರತ ಮತ್ತು ವಿದೇಶಗಳಿಗೆ ಮಾವಿನಹಣ್ಣನ್ನು ಸುಲಭವಾಗಿ ಸಾಗಿಸಲು ಸರ್ಕಾರ ನಮಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು" ಬೇಡಿಕೆ ಇಟ್ಟಿದ್ದಾರೆ.
"2019 ಕ್ಕೆ ಹೋಲಿಸಿದರೆ ಈ ಬಾರಿ ಉತ್ಪಾದನೆ ಹೆಚ್ಚಿದೆ. ಆದರೆ ಜನರು ಈಗ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು, ಇಲ್ಲದಿದ್ದರೆ ವೈರಸ್ ಮತ್ತಷ್ಟು ಹರಡಿದ್ರೆ, ಅದು ದೊಡ್ಡ ಸಮಸ್ಯೆಯಾಗುತ್ತದೆ" ಎಂದು ಮತ್ತೊಬ್ಬ ರೈತ ಹೇಳುತ್ತಾನೆ. ಮಾಲಿಹಾಬಾದ್‌ನ ಹೊರತಾಗಿ, ಮಹಾರಾಷ್ಟ್ರದ ಪುಣೆಯಲ್ಲೂ ಇದೆ ಪರಿಸ್ಥಿತಿ.
ಪುಣೆಯ ಸಗಟು ವ್ಯಾಪಾರಿ ಬಲರಾಜ್ ಭೋಸ್ಲೆ ಮಾತನಾಡಿ, "ದೇಶಾದ್ಯಂತದ ಲಾಕ್‌ಡೌನ್‌ನಿಂದಾಗಿ ಆಲ್ಫಾನ್ಸೊ ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಗ್ರಾಹಕರು ಇಲ್ಲದ ಕಾರಣ ನಮ್ಮಲ್ಲಿರುವ ಅರ್ಧದಷ್ಟು ಷೇರುಗಳನ್ನು ಮಾರಾಟ ಮಾಡಲಾಗುತ್ತಿಲ್ಲ. ಮಾವಿನ ಬೇಡಿಕೆ ಇದ್ದರೂ ಮಾರುಕಟ್ಟೆಯಲ್ಲಿ, ಕೊರೊನಾ ವೈರಸ್ ಭಯವು ಜನರನ್ನು ತಮ್ಮ ಮನೆಯಿಂದ ಹೊರಗೆ ಹೆಜ್ಜೆ ಹಾಕದಂತೆ ತಡೆಯುತ್ತಿದೆ" ಎಂದರು.
ಪುಣೆಯ ಎಪಿಎಂಸಿ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ರತ್ನಗಿರಿ ಮತ್ತು ಸಿಂಧುದುರ್ಗ್ ಜಿಲ್ಲೆಯ ವಿಶ್ವಪ್ರಸಿದ್ಧ ಅಲ್ಫೊನ್ಸೊ ಮಾವಿನಹಣ್ಣಿಗೆ ಬೇಡಿಕೆ ಇಡುತ್ತಿದ್ದರು. ಆದರೆ ಲಾಕ್‌ಡೌನ್ ಮತ್ತು ಸ್ವಯಂಪ್ರೇರಿತ ಮುಚ್ಚುವಿಕೆಯಿಂದಾಗಿ, ಎಪಿಎಂಸಿ ಮಾರುಕಟ್ಟೆ ಬಂದ್ ಆಗಿದೆ. ಹಾಗಾಗಿ ಮಾವಿನ ಪೆಟ್ಟಿಗೆಗಳು ಗೋಡೌನ್ ಸೇರಿವೆ ಎನ್ನಲಾಗಿದೆ.