ETV Bharat / bharat

ಕೊರೊನಾ ಭೀತಿ : ಪ್ರವಾಸಿಗರನ್ನು ತಡೆಯಲು ರಸ್ತೆ ಬ್ಲಾಕ್​ ಮಾಡಿದ ಸ್ಥಳೀಯರು

author img

By

Published : Jun 21, 2020, 11:45 PM IST

ಗೋವಾದ ಸತ್ತಾರಿಯ ಬ್ರಹ್ಮಕರ್ಮಲಿ ಗ್ರಾಮದ ನಿವಾಸಿಗಳು ಮರಗಳನ್ನು ದಾರಿಗೆ ಅಡ್ಡಲಾಗಿ ಹಾಕುವ ಮೂಲಕ ಜಲಪಾತಕ್ಕೆ ಹೋಗುವ ರಸ್ತೆಗಳಿಗೆ ತಡೆಯೊಡ್ಡಿದ್ದಾರೆ

ಪ್ರವಾಸಿಗರನ್ನು ತಡೆಯಲು ರಸ್ತೆ ಬ್ಲಾಕ್​ ಮಾಡಿದ ಸ್ಥಳೀಯರು

ಪಣಜಿ: ಕೋವಿಡ್​-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ತಡೆಯಲು ಗೋವಾದ ಕೆಲವು ಹಳ್ಳಿಗಳ ನಿವಾಸಿಗಳು ರಾಜ್ಯದ ಸುಂದರವಾದ ಜಲಪಾತಗಳಿಗೆ ಹೋಗುವ ರಸ್ತೆಗಳನ್ನು ಬ್ಲಾಕ್​ ಮಾಡಿದ್ದಾರೆ.

ಗೋವಾ ರಾಜ್ಯದ ಸತ್ತಾರಿ, ಸಾಂಗುಯೆಮ್ ಮತ್ತು ಕೆನಕೋನಾ ತಾಲ್ಲೂಕುಗಳಲ್ಲಿ ಹಲವಾರು ಜಲಪಾತಗಳಿವೆ. ಇವು ಮಳೆಗಾಲದಲ್ಲಿ ನಯನ ಮನೋಹರವಾಗಿ ಧುಮ್ಮಿಕುವುದರಿಂದ ಪ್ರವಾಸಿಗರನ್ನು ತಮ್ಮತ್ತ ಆಕರ್ಷಿಸುತ್ತವೆ. ಉತ್ತರ ಗೋವಾ ಜಿಲ್ಲೆಯ ಸತ್ತಾರಿ ತಾಲ್ಲೂಕಿನಲ್ಲಿರುವ ಹೆಚ್ಚಿನ ಜಲಪಾತಗಳು ಮಹಾದೇಯಿ ವನ್ಯಜೀವಿ ಅಭಯಾರಣ್ಯ ಪ್ರದೇಶದ ವ್ಯಾಪ್ತಿಗೆ ಬರುತ್ತವೆ.

ಭಾನುವಾರ, ಸತ್ತಾರಿಯ ಬ್ರಹ್ಮಕರ್ಮಲಿ ಗ್ರಾಮದ ನಿವಾಸಿಗಳು ಮರಗಳನ್ನು ದಾರಿಗೆ ಅಡ್ಡಲಾಗಿ ಹಾಕುವ ಮೂಲಕ ಜಲಪಾತಕ್ಕೆ ಹೋಗುವ ರಸ್ತೆಗಳಿಗೆ ತಡೆಯೊಡ್ಡಿದ್ದಾರೆ.

ಪಿಕ್‌ನಿಕರ್ಸ್​ಗಳು ಮತ್ತು ಚಾರಣಿಗರು ಕಸ, ಪ್ಲಾಸ್ಟಿಕ್ ಮತ್ತು ಮುರಿದ ಮದ್ಯದ ಬಾಟಲಿಗಳನ್ನು ಜಲಪಾತದ ಬಳಿ ಮತ್ತು ಇತರ ಅರಣ್ಯ ಪ್ರದೇಶಗಳಲ್ಲಿ ಎಸೆಯುವ ಮೂಲಕ ಗಲೀಜು ಸೃಷ್ಟಿಸಿದ್ದಾರೆ. ಕೊರೊನಾ ಸಹ ನಾವು ಇಲ್ಲಿಗೆ ಭೇಟಿ ನೀಡುವವರನ್ನು ನಿಷೇಧಿಸಲು ಒಂದು ಕಾರಣವಾಗಿದೆ. ಕೋವಿಡ್​ ಪರಿಸ್ಥಿತಿ ಸಾಮಾನ್ಯಗೊಳ್ಳಲಿ, ನಂತರ ನಾವು ಜನರನ್ನು ಸ್ವಾಗತಿಸುವ ಬಗ್ಗೆ ಯೋಚಿಸಬಹುದು ಎಂದು ಸತ್ತಾರಿಯ ನಾಗರಗಾವೊ ಪಂಚಾಯಿತಿ ಸದಸ್ಯ ಪರಾಗ್ ಖಾದಿಲ್ಕರ್ ಹೇಳಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.