ಕಣ್ಣೂರು: ಕೇರಳದ ತ್ರಿಚಂಬರಂನಲ್ಲಿ ಎಂಟು ವರ್ಷದ ಬಾಲಕನೊಬ್ಬ, ಹಿರಿಯ ನಾಗರಿಕರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ತನ್ನ ಅಜ್ಜನ ಟೈಲರಿಂಗ್ ಅಂಗಡಿಯಲ್ಲಿ ಮಾಸ್ಕ್ಗಳನ್ನ ಹೊಲಿದು ಉಚಿತವಾಗಿ ನೀಡುತ್ತಿದ್ದಾನೆ.
ಸಿದ್ದಾರ್ಥ್ ಮೂರನೇ ತರಗತಿ ಓದುತ್ತಿರುವ ವಿದ್ಯಾರ್ಥಿ. ಸಾಂಕ್ರಾಮಿಕ ರೋಗದ ಮಧ್ಯೆ ಹಿರಿಯ ನಾಗರಿಕರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಮಾಸ್ಕ್ಗಳನ್ನು ತಯಾರಿಸಲು ಆರಂಭಿಸಿದ್ದಾನೆ.
ಮೊದಲ ಬಾರಿಗೆ ಹೊಲಿಗೆ ಯಂತ್ರದಲ್ಲಿ ಮಾಸ್ಕ್ಗಳನ್ನು ಹೊಲಿಯಲು ಹೊದಾಗ ಸರಿಯಾಗಿ ಹೊಲಿಯಲಾಗೆದೆ ಅನೇಕ ವಸ್ತುಗಳನ್ನು ವ್ಯರ್ಥ ಮಾಡಿದೆ. ಆದರೆ ಈಗ ನಿರಂತರ ಅಭ್ಯಾಸದಿಂದ ನಾನು ಈ ಕಲೆಯನ್ನು ಕರಗತ ಮಾಡಿಕೊಂಡಿದ್ದೇನೆ. ಲಾಕ್‌ಡೌನ್ ಸಮಯದಲ್ಲಿ ಮಾಸ್ಕ್ಗಳನ್ನು ಹೊಲಿಯುವುದನ್ನು ನಾನು ಕಲಿತಿದ್ದೇನೆ. ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದೇನೆ. ಈ ಕೋವಿಡ್ ಸೋಂಕು ಮುಗಿದ ನಂತರವೂ ಈ ಕಾರ್ಯವನ್ನು ಮುಂದುವರೆಸಲು ನಾನು ಬಯಸುತ್ತೇನೆ. ಇದರಿಂದಾಗಿ ಬಡವರನ್ನು ಮಾಲಿನ್ಯದಿಂದ ರಕ್ಷಿಸಬಹುದು ಎಂದು ಬಾಲಕ ಸಿದ್ದಾರ್ಥ್ ಹೇಳಿದ್ದಾನೆ.
ಸಿದ್ದಾರ್ಥ್ ಅಜ್ಜ ಅಚ್ಯುಥಾ ವೇರಿಯರ್ ಟೈಲರಿಂಗ್ ಅಂಗಡಿಯನ್ನು ಹೊಂದಿದ್ದಾರೆ. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ನಷ್ಟ ಅನುಭವಿಸುತ್ತಿದ್ದರು. ಕುಟುಂಬವು ನಷ್ಟ ಅನುಭವಿಸುತ್ತಿರುವುದನ್ನು ನೋಡಿದ ಬಾಲಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ಮಾಸ್ಕ್ಗಳನ್ನು ಹೊಲಿಯಲು ನಿರ್ಧರಿಸಿದ್ದ.