ನವದೆಹಲಿ: ಡೆಡ್ಲಿ ವೈರಸ್ ಕೋವಿಡ್-19 ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಇಂದು ಕೂಡ ದೇಶದಲ್ಲಿ 500ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 150ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ದೇಶದಲ್ಲಿ 508ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾದವು. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,789ರ ಗಡಿ ದಾಟಿದೆ.
ಇದರಲ್ಲಿ 353 ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, 4,312 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಹಂತದಲ್ಲಿದ್ದಾರೆ. ಉಳಿದಂತೆ ಸೋಂಕಿನ ವಿರುದ್ಧ ಹೋರಾಡಿ 124 ಜನರು ಸಾವನ್ನಪ್ಪಿದ್ದಾರೆ. ಮಾರಕ ಸೋಂಕಿಗೆ ಮಹಾರಾಷ್ಟ್ರದಲ್ಲಿಯೇ 40ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಸೋಂಕಿತರ ಸಂಖ್ಯೆ ಮಹಾರಾಷ್ಟ್ರದಲ್ಲೇ 1,018 ಆಗಿದೆ. ಇದೇ ರಾಜ್ಯದಲ್ಲಿ ಕಳೆದ 24 ಗಂಟೆಗಳ ಕಾಲಾವಧಿಯಲ್ಲಿ 13 ಜನರು ಕೊನೆಯುಸಿರೆಳೆದಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ 125 ಸೋಂಕಿತ ಪ್ರಕರಣಗಳು ಕಂಡು ಬಂದಿವೆ. ಹರಿಯಾಣದಲ್ಲಿ ಹೊಸದಾಗಿ 33 ಕೇಸ್ ಕಂಡು ಬಂದು ಒಟ್ಟು ಸಂಖ್ಯೆ 129, ತಮಿಳುನಾಡಿನಲ್ಲಿ ಹೊಸದಾಗಿ 69 ಜನರಿಗೆ ಕಾಣಿಸಿಕೊಂಡಿದ್ದರಿಂದ ಒಟ್ಟು 690, ಉತ್ತರಪ್ರದೇಶದಲ್ಲಿ 314, ಕರ್ನಾಟಕದಲ್ಲಿ 12 ಹೊಸ ಕೇಸ್ನಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ 327ಕ್ಕೂ ಹೆಚ್ಚು ಕೇಸ್ ಕಂಡು ಬಂದಿವೆ.
ಆಂಧ್ರಪ್ರದೇಶದಲ್ಲಿ 266, ದೆಹಲಿಯಲ್ಲಿ 576, ಗುಜರಾತ್ನಲ್ಲಿ 165, ಮಧ್ಯಪ್ರದೇಶ 229, ರಾಜಸ್ಥಾನ 288, ತೆಲಂಗಾಣ 364, ಉತ್ತರಪ್ರದೇಶ 305, ಪಶ್ಚಿಮ ಬಂಗಾಳದಲ್ಲಿ 91 ಕೇಸ್ಗಳು ಕಂಡು ಬಂದಿವೆ.