ETV Bharat / bharat

ಹತೋಟಿಗೆ ಬಾರದ ಕೋವಿಡ್​​: 24 ಗಂಟೆಯಲ್ಲಿ 2,644 ಕೇಸ್​, 83 ಸಾವು, 40 ಸಾವಿರದತ್ತ ಪ್ರಕರಣ - ಕೋವಿಡ್​-19

ಡೆಡ್ಲಿ ವೈರಸ್​ ಕೊರೊನಾ ಅಬ್ಬರ ದೇಶದಲ್ಲಿ ಜೋರಾಗಿದ್ದು, ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಕಳೆದ 24 ಗಂಟೆಯಲ್ಲಿ 2 ಸಾವಿರಕ್ಕೂ ಅಧಿಕ ಹೊಸ ಪ್ರಕರಣ ಕಾಣಿಸಿಕೊಂಡಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡುವಂತೆ ಮಾಡಿದೆ.

COVID-19
COVID-19
author img

By

Published : May 3, 2020, 10:27 AM IST

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,644 ಹೊಸ ಕೊರೊನಾ ಸೋಂಕು ಪ್ರಕರಣಗಳು ಕಂಡು ಬಂದಿವೆ.

ದೇಶಾದ್ಯಂತ 39,980 ಕೋವಿಡ್​ ಪ್ರಕರಣ ಕಂಡು ಬಂದಿದ್ದು, ಇದರಲ್ಲಿ 10,633 ಜನರು ಗುಣಮುಖರಾಗಿರುವ ಕಾರಣ 28,046 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಳಿದಂತೆ 1301 ಜನರು ಸಾವನ್ನಪ್ಪಿದ್ದಾಗಿ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ ವಾರ ದೇಶದಲ್ಲಿ ಬರೋಬ್ಬರಿ 13,000 ಹೊಸ ಪ್ರಕರಣ ಕಂಡು ಬಂದಿದ್ದು, 700 ಜನರು ಸಾವನ್ನಪ್ಪಿದ್ದಾರೆ. ಈ ವಾರವೂ ಅತಿ ಹೆಚ್ಚು ಜನರಲ್ಲಿ ಕೋವಿಡ್​-19 ಪ್ರಕರಣ ಕಂಡು ಬಂದಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಘಾತಕ್ಕೊಳಗಾಗುವಂತೆ ಆಗಿದೆ.

ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 790 ಹೊಸ ಕೇಸ್​, ಗುಜರಾತ್​ನಲ್ಲಿ 333, ದೆಹಲಿಯಲ್ಲಿ 384, ತಮಿಳುನಾಡಿನಲ್ಲಿ 231, ಪಂಜಾಬ್​​ 292 ಕೇಸ್​ ಹಾಗೂ ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಪಶ್ಚಿಮ ಬಂಗಾಳದಲ್ಲಿ 100ಕ್ಕೂ ಹೆಚ್ಚು ಹೊಸ ಕೇಸ್​ ಕಂಡು ಬಂದಿವೆ. ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ 12,296 ಪ್ರಕರಣ ಕಂಡು ಬಂದಿದ್ದು, 2 ಸಾವಿರ ಸೋಂಕಿತರು ಗುಣಮುಖರಾಗಿದ್ದಾರೆ.

ಇದೀಗ ದೇಶದಲ್ಲಿ ಮೇ.17ರವರೆಗೆ ಲಾಕ್​ಡೌನ್​ ಮುಂದೂಡಿಕೆಯಾಗಿದ್ದು, ಇದರ ಮಧ್ಯೆ ರೆಡ್​, ಗ್ರೀನ್​ ಹಾಗೂ ಆರೆಂಜ್​ ಝೋನ್​ ಮಾಡಿ ಕೇಂದ್ರ ಆದೇಶ ಹೊರಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.