ETV Bharat / bharat

ಬಿಎಸ್​ಎಫ್​ ಸಿಬ್ಬಂದಿಯಲ್ಲಿ ಹೆಚ್ಚಿದ ಕೊರೊನಾ ಕರಿಛಾಯೆ... ಈವರೆಗೆ 67 ಪ್ರಕರಣ ವರದಿ - ಯೋಧರಿಗೂ ಕೊರೊನಾ

ಬಿಎಸ್‌ಎಫ್‌ನಲ್ಲಿ ಕೊರೊನಾ ಪ್ರಕರಣ ಸಂಖ್ಯೆ 67 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತ್ರಿಪುರದ ಫೋರ್ಸ್ ಕ್ಯಾಂಪ್‌ನಿಂದ ಹದಿಮೂರು ಹೊಸ ಪ್ರಕರಣಗಳು ವರದಿಯಾಗಿವೆ. ಇವರಲ್ಲಿ 10 ಸಿಬ್ಬಂದಿ ಮತ್ತು ಸೋಂಕಿತ ಸೈನಿಕರ ಮೂವರು ಕುಟುಂಬ ಸದಸ್ಯರಿಗೆ ಕೊರೊನಾ ವಕ್ಕರಿಸಿದೆ.

covid-19-cases-in-bsf-increase-to-67-max-in-delhi-tripura
ಬಿಎಸ್​ಎಫ್​ ಸಿಬ್ಬಂದಿಯಲ್ಲಿ ಹೆಚ್ಚಿದ ಕೊರೊನಾ ಕರಿಛಾಯೆ
author img

By

Published : May 5, 2020, 3:15 PM IST

ನವದೆಹಲಿ: ಬಿಎಸ್‌ಎಫ್ ಯೋಧರಿಗೂ ಕೊರೊನಾ ಸೋಂಕು ತಗುಲುತ್ತಿದ್ದು, ಈವರೆಗೆ 67 ಪ್ರಕರಣ ವರದಿಯಾಗಿವೆ. ದೆಹಲಿ ಬೆಟಾಲಿಯನ್‌ನಲ್ಲಿ ಗರಿಷ್ಠ ಪ್ರಕರಣಗಳು ಕಂಡುಬಂದಿವೆ.

ತ್ರಿಪುರಾದ ಕ್ಯಾಂಪ್‌ನಿಂದ ಹದಿಮೂರು ಹೊಸ ಪಾಸಿಟಿವ್​ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 10 ಸಿಬ್ಬಂದಿ ಮತ್ತು ಸೋಂಕಿತ ಸೈನಿಕರ ಮೂವರು ಕುಟುಂಬ ಸದಸ್ಯರಿಗೆ ಕೊರೊನಾ ಪಾಸಿಟಿವ್​ ಬಂದಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವಕ್ತಾರರು ತಿಳಿಸಿದ್ದಾರೆ. ಇನ್ನು ಗಡಿ ರಾಜ್ಯ ತ್ರಿಪುರದ ಪ್ರಕರಣಗಳ ಸಂಖ್ಯೆ ಈಗ 24 ಕ್ಕೆ ಏರಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಷ್ಟ್ರ ರಾಜಧಾನಿಯಿಂದ ನಲವತ್ತೊಂದು ಮತ್ತು ಕೋಲ್ಕತ್ತಾದಿಂದ ಒಂದು ಪ್ರಕರಣ ವರದಿಯಾಗಿವೆ. ದೆಹಲಿ ಪ್ರಕರಣಗಳಲ್ಲಿ 32 ಮಂದಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗಾಗಿ ಜಾಮಿಯಾ ಮತ್ತು ಚಾಂದನಿ ಮಹಲ್ ಪ್ರದೇಶಗಳಲ್ಲಿ ನಿಯೋಜಿಸಲಾದ ಎರಡು ಘಟಕಗಳಲ್ಲಿ ಕರ್ತವ್ಯ ಮಾಡುತ್ತಿದ್ದವರು ಎಂದು ವಕ್ತಾರರು ತಿಳಿಸಿದ್ದಾರೆ.

ಉಳಿದ ಎಂಟು ಪ್ರಕರಣಗಳು ಆರ್ ಕೆ ಪುರಂನ ಆಸ್ಪತ್ರೆಯಿಂದ ವರದಿಯಾಗಿದ್ದು, ಲೋಧಿ ರಸ್ತೆಯಲ್ಲಿರುವ ಪಡೆಗಳ ಪ್ರಧಾನ ಕಚೇರಿಯಲ್ಲಿ ನಿಯೋಜಿಸಲಾದ ಓರ್ವ ಸಿಬ್ಬಂದಿ ಕೂಡ ಈ ಕೊರೊನಾಗೆ ಒಳಗಾಗಿದ್ದಾರೆ. ಈ ಘಟನೆಯ ಬೆನ್ನಲ್ಲೇ ಬಿಎಸ್‌ಎಫ್ ಮುಖ್ಯ ಕಚೇರಿಯ ಎರಡು ಮಹಡಿಗಳನ್ನು ಮುಚ್ಚಲಾಗಿದೆ.ಅಲ್ಲದೆ, ರಜೆಯಲ್ಲಿದ್ದ ಬಿಎಸ್​ಎಫ್​ ಸಿಬ್ಬಂದಿಯಲ್ಲೂ ಕೊರೊನಾ ಪಾಸಿಟಿವ್​ ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.