ETV Bharat / bharat

ಒಂದೇ ದಿನ 48 ಪಾಸಿಟಿವ್​ ಪ್ರಕರಣ: ರಾಜಸ್ಥಾನದಲ್ಲಿ 954 ಕ್ಕೆ ಏರಿದ ಪೀಡಿತರ ಸಂಖ್ಯೆ - lockdown news

ಇದುವರೆಗೆ ಜೈಪುರದಲ್ಲಿ ಐದು, ಭಿಲ್ವಾರಾದಲ್ಲಿ ಎರಡು, ಮತ್ತು ಬಿಕನೇರ್, ಕೋಟಾ, ಟೋಂಕ್ ಮತ್ತು ಜೋಧ್​ ಪುರದಲ್ಲಿ ತಲಾ ಒಂದು ಸೇರಿದಂತೆ ಒಟ್ಟು 11 ಸಾವುಗಳು ಸಂಭವಿದ್ದು, ಇಂದು ಒಂದೇ ದಿನದಲ್ಲಿ 48 ಹೊಸ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿವೆ. ಒಟ್ಟಾರೆ 954 ಜನ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

COVID-19
ರಾಜಸ್ಥಾನದಲ್ಲಿ 954 ಕ್ಕೆ ಏರಿದ ಪೀಡಿತರ ಸಂಖ್ಯೆ
author img

By

Published : Apr 14, 2020, 12:38 PM IST

Updated : Apr 14, 2020, 1:44 PM IST

ಜೈಪುರ: ಜೈಪುರದಲ್ಲಿ ಇಂದು 48 ಹೊಸ ಕೊರೊನಾ ಪಾಸಿಟಿವ್​ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ 954 ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಜೋಧ್​ಪುರದಲ್ಲಿ ಅತಿ ಹೆಚ್ಚು ಅಂದರೆ 82 ಕೊರೊನಾ ರೋಗಿಗಳಿದ್ದು, ಟೋಂಕ್ ಮತ್ತು ಬನ್ಸ್ವಾರದಲ್ಲಿ ತಲಾ 59 ಕೊರೊನಾ ಪಾಸಿಟಿವ್​ ಪ್ರಕರಣ ಕಂಡುಬಂದಿವೆ.

ಕೋಟಾದಲ್ಲಿ ಇದುವರೆಗೆ 49 ಪ್ರಕರಣಗಳು, ಬಿಕನೇರ್ 34, ಝುಂಝೂ ನಲ್ಲಿ 31, ಜೈಸಲ್ಮೇರ್ 29, ಭರತ್ಪುರ 10, ಭಿಲ್ವಾರ 28, ಚುರು 14, ದೌಸಾ 11, ಧೋಲ್ಪುರ್ 1, ಡುಂಗರಪುರ 5, ಕರೌಲಿ 3, ಪಾಲಿ ಮತ್ತು ಸಿಕಾರ್ ತಲಾ ಎರಡು, ಉದಯಪುರ 4, ಪ್ರತಾಪಗ 2 ಪ್ರಕರಣಗಳು ದಾಖಲಾಗಿವೆ.

ನಾಗೌರ್ 6, ಜಾಲಾವಾಡ್ 15, ಬಾರ್ಮರ್ 1 ಮತ್ತು ಹನುಮನಗ್ರದಲ್ಲಿ 2 ಪ್ರಕರಣ ಕಂಡುಬಂದಿದ್ದು, 33 ರಾಜಸ್ಥಾನದ ಜಿಲ್ಲೆಗಳಲ್ಲಿ 25 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ಸಿಂಗ್​ ಮಾಹಿತಿ ನೀಡಿದ್ದಾರೆ.

ಇದುವರೆಗೆ ಜೈಪುರದಲ್ಲಿ ಐದು, ಭಿಲ್ವಾರಾದಲ್ಲಿ ಎರಡು, ಮತ್ತು ಬಿಕನೇರ್, ಕೋಟಾ, ಟೋಂಕ್ ಮತ್ತು ಜೋಧ್ಪುರದಲ್ಲಿ ತಲಾ ಒಂದು ಸೇರಿದಂತೆ ಒಟ್ಟು 11 ಸಾವುಗಳು ಸಂಭವಿಸಿವೆ.

Last Updated : Apr 14, 2020, 1:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.