ETV Bharat / bharat

ಕೊರೊನಾ ಹರಡುವ ಭೀತಿಯಲ್ಲಿ ದಂಪತಿ ಹೋಂ ಅರೆಸ್ಟ್​: ನಾಲ್ವರು ಪೊಲೀಸ್​ ವಶಕ್ಕೆ

author img

By

Published : Mar 16, 2020, 7:44 PM IST

ದಂಪತಿ ಇದ್ದ ಕೊಠಡಿಯನ್ನು ಹೊರಗಿನಿಂದ ಲಾಕ್​ ಮಾಡಲಾಗಿತ್ತು, ಇದರಿಂದ ಹೆದರಿ ಪೊಲೀಸರಿಗೆ ಅವರು ಮಾಹಿತಿ ನೀಡಿದ್ದಾರೆ. ಇನ್ನು ಇವರ ಮನೆಯ ಬಾಗಿಲಿನ ಮೇಲೆ ಇಲ್ಲಿನ ನಿವಾಸಿಗಳ ಸಂಘದ ಸದಸ್ಯರು ಕೊರೊನಾಗೆ ಸಂಬಂಧಿಸಿದ ಸ್ಟಿಕ್ಕರ್​ಗಳನ್ನು ಅಂಟಿಸಿ ಅವರನ್ನು ಕೇವಲ ಆ ಕೊಠಡಿಗೆ ಸೀಮಿತವಾಗುವ ಹಾಗೆ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.

covid-19-4-lock-up-couple-under-self-quarantine-in-flat-held
ದಂಪತಿಗಳು ಹೋಂ ಅರೆಸ್ಟ್

ತ್ರಿಶೂರ್ (ಕೇರಳ): ಕೊರೊನಾ ವೈರಸ್​ ಹಿನ್ನೆಲೆ ಇಲ್ಲಿನ ಅಪಾರ್ಟ್​ಮೆಂಟ್​ನಲ್ಲಿ ದಂಪತಿಯನ್ನು ಬಂಧಿಸಿಟ್ಟಿದ್ದ ಅರೋಪದ ಮೇಲೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೌದಿ ಅರೇಬಿಯಾದಿಂದ ಭಾನುವಾರ ಮರಳಿದ್ದ ವೃದ್ಧ ದಂಪತಿಗಳು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾಗಿದ್ದರು. ಇವರಲ್ಲಿ ಕೊರೊನಾದ ಯಾವ ಲಕ್ಷಣಗಳು ಕಂಡುಬಂದಿರಲಿಲ್ಲ.

ಈ ದಂಪತಿ ಇದ್ದ ಕೊಠಡಿಯನ್ನು ಹೊರಗಿನಿಂದ ಲಾಕ್​ ಮಾಡಲಾಗಿತ್ತು, ಇದರಿಂದ ಹೆದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಇವರ ಮನೆಯ ಬಾಗಿಲಿನ ಮೇಲೆ ಇಲ್ಲಿನ ನಿವಾಸಿಗಳ ಸಂಘದ ಸದಸ್ಯರು ಕೊರೊನಾಗೆ ಸಂಬಂಧಿಸಿದ ಸ್ಟಿಕ್ಕರ್​ಗಳನ್ನು ಅಂಟಿಸಿ ಅವರನ್ನು ಕೇವಲ ಆ ಕೊಠಡಿಗೆ ಸೀಮಿತವಾಗುವ ಹಾಗೆ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.

ಸದಸ್ಯರು ವೃದ್ಧ ದಂಪತಿಗೆ ಸಹಾಯ ಮಾಡುವ ಬದಲು ಅವರನ್ನು ಬಂಧಿಸಲು ಮುಂದಾಗಿರುವುದು ಅಪರಾಧ ಎಂದು ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರಲ್ಲಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಇಬ್ಬರು ಸದಸ್ಯರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.