ನವದೆಹಲಿ: ಕೊರೊನಾ ಸೋಂಕು ಹರಡಿಸುತ್ತಿರುವ ಆರೋಪದಲ್ಲಿ ವೈದ್ಯೆಯನ್ನು ಹಾಗೂ ಆಕೆಯ ಸಹೋದರಿಯ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಕೆಲ ದಿನಗಳ ಹಿಂದೆ 42 ವರ್ಷ ವಯಸ್ಸಿನ ಇಂಟೀರಿಯರ್ ಡಿಸೈನರ್ ಆದ ಸಂಜೀವ್ ಶರ್ಮಾ ಎಂಬಾತ ದಕ್ಷಿಣ ದೆಹಲಿಯ ಗೌತಮ್ ನಗರದಲ್ಲಿ ದಿನಸಿ ಹಾಗೂ ಹಣ್ಣುಗಳನ್ನು ತೆಗೆದುಕೊಳ್ಳಲು ಬಂದಿದ್ದ ಸಫ್ಧರ್ಜಂಗ್ ಆಸ್ಪತ್ರೆಯ ವೈದ್ಯೆ ಹಾಗೂ ಆಕೆಯ ಸಹೋದರಿಯ ಮೇಲೆ ಹಲ್ಲೆ ನಡೆಸಿದ್ದನು.
ಈ ಕುರಿತು ಹೌಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಅನ್ವಯ ಪೊಲೀಸರು ಆತನನ್ನು ಬಂಧಿಸಿ ಐಪಿಸಿ ಸೆಕ್ಷನ್ 354, 509, 323, 341 ಅಡಿ ಪ್ರಕರಣ ದಾಖಲಿಸಿದ್ದರು.
ಏಪ್ರಿಲ್ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಆರೋಪಿಯನ್ನು ನೀಡಲಾಗಿತ್ತು. ಈ ವೇಳೆ, ಆರೋಪಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಆರೋಪಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.