ETV Bharat / bharat

ಖಲೀದ್​ಗೆ ಭದ್ರತೆ ಒದಗಿಸಿ: ತಿಹಾರ್​​​ ಜೈಲು ಅಧಿಕಾರಿಗೆ ದೆಹಲಿ ಕೋರ್ಟ್​ ಸೂಚನೆ

ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿಯ ವಿರುದ್ಧ ಪ್ರತಿಭಟಿಸುವ ಜನರನ್ನು ಪ್ರಚೋದಿಸುವ ಮೂಲಕ ಕೋಮು ಅಶಾಂತಿ ಉಂಟುಮಾಡುವ ಕ್ರಿಮಿನಲ್ ಪಿತೂರಿಯನ್ನು ನಡೆಸಿದ ಆರೋಪದಲ್ಲಿ ಬಂಧಿತನಾಗಿರುವ ಉಮರ್ ಖಾಲಿದ್​ಗೆ ಭದ್ರತೆ ಒದಗಿಸುವಂತೆ ದೆಹಲಿ ನ್ಯಾಯಾಲಯವು ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ದೆಹಲಿ ಕೋರ್ಟ್​
ದೆಹಲಿ ಕೋರ್ಟ್​
author img

By

Published : Oct 5, 2020, 4:59 PM IST

ನವದೆಹಲಿ: ಕೋಮು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್​ ಅವನನ್ನು 14 ದಿನಗಳ ನ್ಯಾಯಾಂಗ ಕಸ್ಟಡಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ಒದಗಿಸುವಂತೆ ದೆಹಲಿ ನ್ಯಾಯಾಲಯವು ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಖಲೀದ್​ನನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗ ಅಕ್ಟೋಬರ್ 1ರಂದು ಬಂಧಿಸಿ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಳಪಡಿಸಿದೆ. ಅಕ್ಟೋಬರ್ 4ರಂದು ಅವರ ಪೊಲೀಸ್ ಕಸ್ಟಡಿ ಕೊನೆಗೊಂಡಿತ್ತು. ಈ ಬಳಿಕ ಆತನನ್ನು ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇನ್ನು ಖಲೀದ್​ ವಕೀಲರಾದ ಸನ್ಯಾ ಕುಮಾರ್ ಮತ್ತು ರಕ್ಷಾಂಡಾ ದೆಖಾ ಅವರು ತಮ್ಮ ಕಕ್ಷಿದಾರರಿಗೆ ಭದ್ರತೆ, ಕನ್ನಡಕ ಧರಿಸಲು ಅನುಮತಿ, ಪುಸ್ತಕಗಳ ಲಭ್ಯತೆ ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು, ತಿಹಾರ್ ನ್ಯಾಯಾಲಯದ ಕಾಂಪ್ಲೆಕ್ಸ್​ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೇವ್ ಸರೋಹಾ, ಭದ್ರತೆಯನ್ನು ನೀಡಿ ಆದೇಶಿಸಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿಯ ವಿರುದ್ಧ ಪ್ರತಿಭಟಿಸುವ ಜನರನ್ನು ಪ್ರಚೋದಿಸುವ ಮೂಲಕ ಕೋಮು ಅಶಾಂತಿ ಉಂಟುಮಾಡುವ ಕ್ರಿಮಿನಲ್ ಪಿತೂರಿಯನ್ನು ನಡೆಸಿದ ಆರೋಪ ಖಲೀದ್​ ಮೇಲಿದೆ. ಇನ್ನು ಸೆಪ್ಟೆಂಬರ್ 13ರಂದು, ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಖಲೀದ್​ನ್ನು ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.