ETV Bharat / bharat

ಸನ್ಯಾಸಿನಿ ಅತ್ಯಾಚಾರ ಪ್ರಕರಣ.. ಆರೋಪಿ ಫ್ರಾಂಕೊ ಮುಲಕ್ಕಲ್‌ಗೆ ಕೊರೊನಾ ಸೋಂಕು - ಮುಲಕ್ಕಲ್ ಗೆ ಕೊರೊನಾ ಸೋಂಕು

ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೊ ಮುಲಕ್ಕಲ್ ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಮಂಗಳವಾರ ಖಚಿತಪಡಿಸಿದ್ದಾರೆ..

ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಆರೋಪಿ ಫ್ರಾಂಕೊ ಮುಲಕ್ಕಲ್ ಗೆ ಕೊರೊನಾ ಸೋಂಕು

author img

By

Published : Jul 15, 2020, 7:40 PM IST

ಜಲಂಧರ್ (ಪಂಜಾಬ್) : ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೊ ಮುಲಕ್ಕಲ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಮಂಗಳವಾರ ಖಚಿತಪಡಿಸಿದ್ದಾರೆ.

ಜುಲೈ 6ರಂದು ನಡೆಸಲಾಗಿದ್ದ ಕೊರೊನಾ ಪರೀಕ್ಷೆಯಲ್ಲಿ ಮುಲಕ್ಕಲ್ ವರದಿ ನೆಗೆಟಿವ್​ ಬಂದಿತ್ತು. ಆದರೆ, ಸೋಮವಾರ ಸಂಜೆ ಅವರು 2ನೇ ಸುತ್ತಿನ ಕೋವಿಡ್​-19 ಪರೀಕ್ಷೆಗೆ ಒಳಗಾಗಿದ್ದು, ವರದಿ ಪಾಸಿಟಿವ್​ ಬಂದಿದೆ ಎಂದು ಜಲಂಧರ್ ಡಯೋಸಿಸ್ ಪ್ರೋ ಫಾದರ್ ಪೀಟರ್ ಮಾಹಿತಿ ನೀಡಿದ್ದಾರೆ.

ಮುಲಕ್ಕಲ್ ತನ್ನ ವಕೀಲ ಮಂದೀಪ್ ಸಚ್‌ದೇವ ಅವರೊಂದಿಗೆ ಕುಳಿತು ಪ್ರಕರಣ ಸಂಬಂಧ ಎರಡು ಬಾರಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅದಾಗಲೇ ವಕೀಲರ ಕುಟುಂಬದವರಿಗೆ ಕೂಡ ಕೊರೊನಾ ಸೋಂಕಿತ್ತು. ಆದ್ದರಿಂದ ಬಿಷಪ್‌ಗೂ ತಗುಲಿರುವ ಸಾಧ್ಯತೆ ಇದೆ. ಜುಲೈ 6ರಿಂದ ಮುಲಕ್ಕಲ್ ಹೋಂ ಕ್ವಾರಂಟೈನ್​ನಲ್ಲಿದ್ದಾರೆ ಎಂದು ಪಿಆರ್‌ಒ ಮಾಹಿತಿ ನೀಡಿದ್ದಾರೆ.

ವಿಚಾರಣೆಯ ಸಮಯದಲ್ಲಿ ಬಿಷಪ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಕೋವಿಡ್​-19 ಸೋಂಕಿತ ವ್ಯಕ್ತಿಯೊಂದಿಗಿನ ಪ್ರಾಥಮಿಕ ಸಂಪರ್ಕದಿಂದಾಗಿ ತನ್ನ ಗ್ರಾಹಕನು ಸ್ವಯಂ ಸಂಪರ್ಕದಲ್ಲಿದ್ದ ಕಾರಣ ಕೋರ್ಟ್​ಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಮುಲಕ್ಕಲ್ ಅವರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.