ಚೆನ್ನೈ(ತಮಿಳುನಾಡು): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಫಲಕಗಳನ್ನು ಕೈಯಲ್ಲಿ ಹಿಡಿದು, ವಿಶಿಷ್ಟವಾದ ಶೈಲಿಯಲ್ಲಿ ಯುವಕ-ಯುವತಿ ನವಜೀವನಕ್ಕೆ ಕಾಲಿಟ್ಟಿರುವ ಘಟನೆ ಇಲ್ಲಿನ ಓಲ್ಡ್ ವಾಷರ್‌ಮ್ಯಾನ್‌ಪೇಟೆ ಪ್ರದೇಶದ ಪ್ರತಿಭಟನಾ ಸ್ಥಳದಲ್ಲಿ ನಡೆದಿದೆ.

ಕೆಲವು ದಿನಗಳ ಹಿಂದೆ ನಿಶ್ಚಿತಾರ್ಥವಾಗಿದ್ದ ಶೈನ್ಶಾ ಮತ್ತು ಸುಮಯ್ಯ ಫೆಬ್ರವರಿ 15ರಂದು ಮದುವೆಯಾಗಿದ್ದಾರೆ.
ಇಬ್ಬರೂ ಓಲ್ಡ್ ವಾಷರ್‌ಮ್ಯಾನ್‌ಪೇಟೆ ಪ್ರದೇಶದ ನಿವಾಸಿಗಳಾಗಿದ್ದು, ಒಂದೆರಡು ದಿನಗಳ ಹಿಂದೆ ಭುಗಿಲೆದ್ದ ಪ್ರತಿಭಟನೆಯಿಂದಾಗಿ ಅವರ ಮದುವೆ ವಿಳಂಬವಾಗುತ್ತಿತ್ತು. ನಂತರ ಇವರಿಬ್ಬರು ಪ್ರತಿಭಟನಾ ಸ್ಥಳದಲ್ಲಿಯೇ ಮದುವೆಯಾಗಲು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿ ಅವರನ್ನು ನೂರಾರು ಪ್ರತಿಭಟನಾಕಾರರು ಹುರಿದುಂಬಿಸಿದರು.
ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.