ನವದೆಹಲಿ: ಕೆನಡಾದ ದಂಪತಿ ಕಳೆದ ವಾರ ಅಡುಗೆಗೆ ಎಂದು ತಂದಿದ್ದ ದೊಡ್ಡ ಮೆಣಸಿನಕಾಯಿ/ ಕ್ಯಾಪ್ಸಿಕಂ (ಬೆಲ್ ಪೆಪರ್) ಒಳಗೆ ಜೀವಂತ ಕಪ್ಪೆ ಕಂಡುಬಂದಿದ್ದು, ಇದನ್ನು ನೋಡಿ ದಂಪತಿ ಆತಂಕಕ್ಕೆ ಒಳಗಾಗಿದ್ದರು.
ಕೆನಡಾದ ಕ್ವಿಬೆಕ್‌ನ ಸಗುಯೆನೆ ಮೂಲದ ನಿಕೋಲ್ ಗಾಗ್ನೊನ್ ಮತ್ತು ಗೆರಾರ್ಡ್ ಬ್ಲ್ಯಾಕ್‌ಬರ್ನ್ ಅವರು ಫೆಬ್ರವರಿ 9ರಂದು ಊಟಕ್ಕೆಂದು ಕ್ಯಾಪ್ಸಿಕಂ ಕತ್ತರಿಸಿದಾಗ ಅದರಲ್ಲಿ ಜೀವಂತ ಕಪ್ಪೆಯೊಂದು ಹೊರಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದೊಡ್ಡ ಮೆಣಸಿನಕಾಯಿಯಲ್ಲಿ ನಿಗೂಢವಾಗಿ ಕಂಡುಕೊಂಡ ಬಂದ ಗ್ರೀನ್ ಟ್ರೀ ಕಪ್ಪೆಯ ಬಗ್ಗೆ ದಂಪತಿ, ಕೆನಡಾದ ಕ್ವಿಬೆಕ್ ಕೃಷಿ, ಮೀನುಗಾರಿಕೆ ಮತ್ತು ಆಹಾರ ಸಚಿವಾಲಯಕ್ಕೆ (MAPAQ) ವರದಿ ಮಾಡಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ನಾನಾ ವಿಧದ ಪ್ರತಿಕ್ರಿಯೆಗಳು ಬಂದಿವೆ.
ಒಬ್ಬ ಬಳಕೆದಾರರು 'ನಾನು ಒಮ್ಮೆ ದೊಡ್ಡ ಮೆಣಸಿನಕಾಯಿ ಒಳಗೆ ಒಂದು ದೈತ್ಯ ಗ್ರಬ್ ಅನ್ನು ಕಂಡಿದ್ದೇನೆ. ಇದು ಅತ್ಯಂತ ಪರಿಶುದ್ಧವಾದ ಮೆಣಸಿನಕಾಯಿ ಕೂಡ. ಪ್ರತಿ ಬಾರಿ ನಾನು ಒಂದೊಂದು ತೆರೆದಾಗ ನನಗೆ ಆಶ್ಚರ್ಯ ಸಿಗುತ್ತದೆ' ಎಂದು ಬರೆದುಕೊಂಡಿದ್ದಾರೆ.
ಇನ್ನೊಬ್ಬರು ಮ್ಯಾಕ್ಸ್ ಮಿಸ್ಟರೀಸ್, ಈ ಕಪ್ಪೆ ಮೂಲತಃ ಪ್ಲೇಟೋನ ಗುಹೆಯ ಸಾಂಕೇತಿಕವಾಗಿ ಜೀವಿಸುತ್ತಿದೆ ಒಂದು ಹಾಸ್ಯವಾಗಿ ಬರೆದುಕೊಂಡಿದ್ದಾರೆ.
ಕ್ಯಾಪ್ಸಿಕಂನಲ್ಲಿ ಗೋಚರವಾಗುವಂತಹ ಯಾವುದೇ ರಂಧ್ರ ಇರಲಿಲ್ಲ ಎಂದೂ ಇದೇ ವೇಳೆ ದಂಪತಿ ವಾದಿಸಿದ್ದಾರೆ. ಇದೀಗ ಈ ಪ್ರಕರಣ ಯಕ್ಷ ಪ್ರಶ್ನೆಯಾಗಿ ಉಳಿದಿದೆ.