ತೆಲಂಗಾಣ: ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ತೆಲಂಗಾಣ ಸರ್ಕಾರ ನಿರ್ಧರಿಸಿದ್ದು, ಈ ಹಿನ್ನೆಲೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ಅಭಿಯಾನ ಸೇರಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಂಡಿದೆ.
ತೆಲಂಗಾಣ ಮೂಲದ ಟೆಕ್ಕಿಯೋರ್ವನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆ ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತೆಲಂಗಾಣ ಪುರಸಭೆ ಆಡಳಿತ ಸಚಿವ ಕೆ. ಟಿ. ರಾಮರಾವ್ ಅವರು ಹೈದರಾಬಾದ್ ಮೆಟ್ರೋ ರೈಲು ಮತ್ತು ರಾಜ್ಯ ಸಾರಿಗೆ ಸಚಿವ ಪುವವಾಡ ಅಜಯ್ ಕುಮಾರ್ ಅವರಿಗೆ ರಾಜ್ಯದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಹೈದರಾಬಾದ್ ಮೆಟ್ರೋ ರೈಲುಗಳು ಮತ್ತು ಸರ್ಕಾರಿ ತೆಲಂಗಾಣ ರಾಜ್ಯದ ಒಳಗೆ ಸಂಚರಿಸುವ ಸಾರಿಗೆ ಬಸ್ಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಹೈದರಾಬಾದ್ ಮೆಟ್ರೋಸ್ಟೇಷನ್ಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಮೆಟ್ರೋ ಸಿಬ್ಬಂದಿಗೂ ಸೂಚನೆ ನೀಡಲಾಗಿದೆ.
ಮೆಟ್ರೋನಿಲ್ದಾಣದ ಎಸ್ಕಲೇಟರ್‌ಗಳು ಮತ್ತು ಮೆಟ್ಟಿಲುಗಳನ್ನು ಸೋಪ್ ಮತ್ತು ಡಿಟರ್ಜೆಂಟ್‌ಗಳಿಂದ ಸ್ವಚ್ಛಗೊಳಿಸುವಂತೆ ಸೂಚನೆ ನೀಡಲಾಗಿದೆ.