ETV Bharat / bharat

ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಸಿ; ರಾಜ್ಯಗಳಿಗೆ ಕೇಂದ್ರದ ನಿರ್ದೇಶನ

ರಾಜ್ಯ ಸರ್ಕಾರಗಳ ಅಧೀನದಲ್ಲಿರುವ ಸಾರ್ವಜನಿಕ ಆರೋಗ್ಯ ಸೇವೆಯ ಎಂಜಿನಿಯರಿಂಗ್​ ಇಲಾಖೆಗಳು, ನಿಗಮ ಮಂಡಳಿಗಳು ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ನೀರಿನ ಪೂರೈಕೆ ಸಮರ್ಪಕವಾಗಿರುವಂತೆ ಕ್ರಮ ವಹಿಸಬೇಕು. ದುರ್ಬಲ ವರ್ಗದವರು ಹೆಚ್ಚಾಗಿರುವ ನಿರಾಶ್ರಿತ ಶಿಬಿರಗಳು, ಕ್ವಾರಂಟೈನ್ ಪ್ರದೇಶಗಳು, ಆಸ್ಪತ್ರೆಗಳು, ವೃದ್ಧಾಶ್ರಮಗಳು, ಬಡ ಜನರ ಕಾಲನಿಗಳು, ಕೊಳಚೆ ಪ್ರದೇಶ ಇತ್ಯಾದಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುವಂತೆ ವಿಶೇಷ ಕಾಳಜಿವಹಿಸಬೇಕು ಎಂದು ಕೇಂದ್ರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ನಿರ್ದೇಶನ ನೀಡಿದೆ.

Health ministry directs states to arrange safe, potable water

author img

By

Published : Apr 16, 2020, 6:02 PM IST

ಹೊಸದಿಲ್ಲಿ: ಲಾಕ್​ಡೌನ್​ ಅವಧಿಯಲ್ಲಿ ಎಲ್ಲರಿಗೂ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಕ್ರಮವಹಿಸಬೇಕೆಂದು ಎಲ್ಲ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಪೌರಾಡಳಿತ ಇಲಾಖೆಗಳಿಗೆ ಕೇಂದ್ರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ನಿರ್ದೇಶನ ನೀಡಿದೆ.

ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ, ನಿಗಮ ಮತ್ತು ಬೋರ್ಡ್​ಗಳು ವಿಶೇಷವಾಗಿ ಗ್ರಾಮೀಣ ಹಾಗೂ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ, ದೇಶಾದ್ಯಂತ ಮೇ 3 ರವರೆಗೆ 19 ದಿನಗಳ ಎರಡನೇ ಹಂತದ ಲಾಕ್​ಡೌನ್​ ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಲಾಕ್​ಡೌನ್​ ಅವಧಿಯಲ್ಲಿ ಕುಡಿಯುವ ನೀರಿನ ಸರಬರಾಜು ಕುರಿತು ಕೇಂದ್ರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಗೃಹ ಇಲಾಖೆ ಹೊರತಂದಿರುವ ಮಾರ್ಗಸೂಚಿಯ ಸಂಪೂರ್ಣ ಪಠ್ಯ ಇಲ್ಲಿದೆ:

ಲಾಕ್​ಡೌನ್​ ಅವಧಿಯಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ ಹಾಗೂ ಕೊರೊನಾ ವೈರಸ್​ ನಿಯಂತ್ರಿಸಲು ಕೈಗೊಳ್ಳಬೇಕಾದ ಪರಿಣಾಮಕಾರಿ ಕ್ರಮಗಳ ಕುರಿತು ಸುತ್ತೋಲೆ:

ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಕೋವಿಡ್​-19 ಬೃಹತ್ ಪಿಡುಗಾಗಿ ಬೆಳೆಯುತ್ತಿದೆ. ಕೊರೊನಾ ಸಾಂಕ್ರಾಮಿಕತೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಕಾಯಿಲೆ ದೇಶದಲ್ಲಿ ಹರಡದಂತೆ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ. ಸಾಕಷ್ಟು ನೊರೆ ಬರುವ ಸಾಬೂನಿನಿಂದ ಆಗಾಗ ಸ್ವಚ್ಛವಾಗಿ ಕೈ ತೊಳೆದುಕೊಳ್ಳುವುದು ಕೊರೊನಾ ವೈರಸ್​ ಹರಡದಂತೆ ತಡೆಯುವ ವಿಧಾನಗಳ ಪೈಕಿ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಹೀಗಾಗಿ ದೇಶದ ಎಲ್ಲ ನಾಗರಿಕರಿಗೆ, ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಸ್ಯಾನಿಟೈಜರ್​ ಲಭ್ಯವಾಗದ ಗ್ರಾಮೀಣ ಪ್ರದೇಶಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ತುರ್ತು ಅಗತ್ಯವಾಗಿದೆ.

ರಾಜ್ಯ ಸರ್ಕಾರಗಳ ಅಧೀನದಲ್ಲಿರುವ ಸಾರ್ವಜನಿಕ ಆರೋಗ್ಯ ಸೇವೆಯ ಎಂಜಿನಿಯರಿಂಗ್​ ಇಲಾಖೆಗಳು, ನಿಗಮ ಮಂಡಳಿಗಳು ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ನೀರಿನ ಪೂರೈಕೆ ಸಮರ್ಪಕವಾಗಿರುವಂತೆ ಕ್ರಮ ವಹಿಸಬೇಕು. ದುರ್ಬಲ ವರ್ಗದವರು ಹೆಚ್ಚಾಗಿರುವ ನಿರಾಶ್ರಿತ ಶಿಬಿರಗಳು, ಕ್ವಾರಂಟೈನ್ ಪ್ರದೇಶಗಳು, ಆಸ್ಪತ್ರೆಗಳು, ವೃದ್ಧಾಶ್ರಮಗಳು, ಬಡ ಜನರ ಕಾಲನಿಗಳು, ಕೊಳಚೆ ಪ್ರದೇಶ ಇತ್ಯಾದಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುವಂತೆ ವಿಶೇಷ ಕಾಳಜಿವಹಿಸಬೇಕು. ಗುರುತಿಸಲಾದ ಕುಡಿಯುವ ನೀರಿನ ಅಗತ್ಯತೆಗಳನ್ನು ಆಯಾ ಜಿಲ್ಲೆಗಳ ಕೋವಿಡ್​-19 ಹೋರಾಟದ ಮೈಕ್ರೊ ಪ್ಲಾನಿಂಗ್​ನೊಂದಿಗೆ ಸಂಯೋಜನೆಗೊಳಿಸುವುದು ಸೂಕ್ತವಾಗಿರುತ್ತದೆ.

ಲಭ್ಯವಿರುವ ನೀರನ್ನು ಕೆಮಿಕಲ್ ಟ್ರೀಟ್​ಮೆಂಟ್​ ಮೂಲಕ ಶುದ್ಧಗೊಳಿಸುವ ಅಗತ್ಯತೆ ಇರುವ ಕಡೆಗಳಲ್ಲಿ ಅದಕ್ಕೆ ಬೇಕಾದ ಕ್ಲೋರಿನ್ ಮಾತ್ರೆಗಳು, ಬ್ಲೀಚಿಂಗ್ ಪೌಡರ್, ಸೋಡಿಯಂ ಹೈಪೊಕ್ಲೋರೈಟ್ ದ್ರಾವಣ, ಆಲಂ ಮುಂತಾದುವುಗಳನ್ನು ಬಳಸಬೇಕು. ನೀರು ಶುದ್ಧೀಕರಣಕ್ಕೆ ಬೇಕಾದ ಕೆಮಿಕಲ್​ಗಳ ಬಗ್ಗೆ ರಾಜ್ಯ ಸರ್ಕಾರಗಳು ಪರಿಶೀಲನೆ ನಡೆಸಿ, ಅವು ಸಮರ್ಪಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಈ ಕೆಮಿಕಲ್​ಗಳ ಕೊರತೆ ಕಂಡುಬಂದಲ್ಲಿ ಲಭ್ಯವಿರುವ ಕಡೆಯಿಂದ ತುರ್ತಾಗಿ ಕೆಮಿಕಲ್​ಗಳನ್ನು ತರಿಸಿಕೊಳ್ಳುವ ಏರ್ಪಾಡು ಮಾಡಬೇಕು. ನೀರು ಶುದ್ಧೀಕರಣಕ್ಕೆ ಬೇಕಾದ ಕೆಮಿಕಲ್​ಗಳು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿದ್ದು, ಇವು ನಿರಾತಂಕವಾಗಿ ಪೂರೈಕೆಯಾಗುತ್ತಿರುವಂತೆ ಕ್ರಮ ವಹಿಸಬೇಕು.

ಮೇಲಿನ ಕ್ರಮಗಳಿಗೆ ಹೆಚ್ಚುವರಿಯಾಗಿ, ಸ್ಥಳದಲ್ಲೇ ನೀರು ಶುದ್ಧತೆ ಪರೀಕ್ಷಿಸುವ ಕಿಟ್​ಗಳನ್ನು ಪೂರೈಸಿ, ಗ್ರಾಮಸ್ಥರಿಗೆ ಕಿಟ್​ ಉಪಯೋಗಿಸುವ ತರಬೇತಿ ನೀಡಬೇಕು. ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷೆ ಮಾಡುವಂತೆ ಹಾಗೂ ನೀರು ಕಲುಷಿತವಾಗಿದ್ದು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಬೇಕು. ನೀರು ಪೂರೈಕೆಯ ಮೂಲದಿಂದ ಬಳಕೆದಾರರಿಗೆ ನಿರಂತರವಾಗಿ ನೀರು ತಲುಪುವಂತೆ ನೋಡಿಕೊಳ್ಳಬೇಕು.

ಕ್ಷೇತ್ರದಲ್ಲಿ ನೀರು ಪೂರೈಕೆ ಹಾಗೂ ನಿರ್ವಹಣೆಯ ಕಾರ್ಯದಲ್ಲಿ ನಿರತ ಸಿಬ್ಬಂದಿಗೆ ಸುರಕ್ಷತಾ ಸಾಧನಗಳಾದ ಮಾಸ್ಕ್​, ಸ್ಯಾನಿಟೈಜರ್​ ಮುಂತಾದುವು ಲಭ್ಯವಾಗುವಂತೆ ಕ್ರಮವಹಿಸಬೇಕು. ಕಾರ್ಯನಿರತ ಸಿಬ್ಬಂದಿಗೆ ಸೋಂಕು ತಗುಲಿದಲ್ಲಿ ಪರ್ಯಾಯ ಸಿಬ್ಬಂದಿ ಲಭ್ಯವಿರುವಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.

ಈಗಾಗಲೇ ಇರುವ ದೂರು ಪರಿಹಾರ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಬೇಕು. ನೀರು ಪೂರೈಕೆ ವ್ಯತ್ಯಯವಾದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ದೂರು ತಲುಪುವಂತೆ ಹಾಗೂ ಸಮಸ್ಯೆ ಪರಿಹಾರವಾಗುವಂತೆ ಎಲ್ಲ ಕ್ರಮ ಕೈಗೊಳ್ಳಬೇಕು.

ಈ ಎಲ್ಲ ಕ್ರಮಗಳ ಜೊತೆಗೆ ಕೋವಿಡ್​-19 ಹರಡದಂತೆ ತಡೆಯಲು ಗೃಹ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಸಾಮಾಜಿಕ ಅಂತರದ ನಿಯಮ ಹಾಗೂ ಇತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.