ETV Bharat / bharat

ಕೊರೊನಾ ಅಟ್ಟಹಾಸ: ಸ್ಪೇನ್​ ಹಿಂದಿಕ್ಕಿ 5ನೇ ಸ್ಥಾನಕ್ಕೆ ಭಾರತ ಲಗ್ಗೆ! - ಕೋವಿಡ್​-19

ಮಹಾಮಾರಿ ಕೊರೊನಾ ಆರ್ಭಟ ಜೋರಾಗಿದ್ದು, ದೇಶದಲ್ಲಿ ದಿನದಿಂದ ದಿನಕ್ಕೆ ಅತಿ ಹೆಚ್ಚು ಕೋವಿಡ್​ ಪ್ರಕರಣ ಕಾಣ ಸಿಗುತ್ತಿವೆ.

Coronavirus:India Overtakes Spain
Coronavirus:India Overtakes Spain
author img

By

Published : Jun 7, 2020, 4:13 AM IST

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದ್ದು, ಇದೀಗ ಸ್ಪೇನ್​ ಹಿಂದಿಕ್ಕಿ ವಿಶ್ವದಲ್ಲೇ ಐದನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಭಾರತದಲ್ಲಿ ಇಲ್ಲಿಯವರೆಗೆ ಒಟ್ಟು 2,41,970 ಕೇಸ್​ ಕಂಡು ಬಂದಿದ್ದು, ಟಾಪ್ 10 ರಾಷ್ಟ್ರಗಳ ಪಟ್ಟಿಯಲ್ಲಿ ಇದೀಗ ಭಾರತ ಐದನೇ ಸ್ಥಾನಕ್ಕೇರಿದೆ.

ನಿನ್ನೆ ಒಂದೇ ದಿನ ಭಾರತದಲ್ಲಿ 9,887 ಪ್ರಕರಣ ಕಂಡು ಬಂದಿದೆ. ಸೋಂಕಿತರ ಪೈಕಿ ಈವರೆಗೆ 1,14,073 ಮಂದಿ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿ ಇನ್ನೂ 1,15, 942 ಮಂದಿ ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಳಿದಂತೆ 6,642 ಜನರು ದೇಶದಲ್ಲಿ ಸಾವನ್ನಪ್ಪಿದ್ದಾರೆ.

ಪ್ರಪಂಚದಾದ್ಯಂತ 67,32,297 ಪ್ರಕರಣಗಳು ಕಂಡು ಬಂದಿದ್ದು, 35,91,419 ಆ್ಯಕ್ಟಿವ್​ ಕೇಸ್​ಗಳಿದ್ದು, 27,46,098 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಉಳಿದಂತೆ 3,94,780 ಜನರು ಸಾವನ್ನಪ್ಪಿದ್ದಾರೆ.

ಅಮೆರಿಕದಲ್ಲಿ 18,97,239 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಮೊದಲ ಸ್ಥಾನದಲ್ಲಿದೆ. ಬ್ರೇಜಿಲ್​​ನಲ್ಲಿ 6,14,941 ಕೇಸ್​, ರಷ್ಯಾದಲ್ಲಿ 4,49,256 ಜನರಲ್ಲಿ ಸೋಂಕು, ಯುಕೆಯಲ್ಲಿ 2,84,731 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ

ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 2,739 ಹೊಸ ಪ್ರಕರಣ ಕಂಡು ಬಂದಿದ್ದು, 120 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಒಟ್ಟು 82,968 ಪ್ರಕರಣಗಳಿವೆ. ತಮಿಳುನಾಡಿನಲ್ಲಿ 28,694 ಪ್ರಕರಣಗಳಿದ್ದು, ನವದೆಹಲಿಯಲ್ಲಿ 26,334 ಸೋಂಕಿತ ಪ್ರಕರಣ ಕಂಡು ಬಂದಿವೆ. ಗುಜರಾತ್​ನಲ್ಲಿ 19,094 ಕೇಸ್​, ರಾಜಸ್ಥಾನದಲ್ಲಿ 10,084, ಉತ್ತರಪ್ರದೇಶದಲ್ಲಿ 9,733 ಕೇಸ್​, ಮಧ್ಯಪ್ರದೇಶದಲ್ಲಿ 8,996, ಪಶ್ಚಿಮ ಬಂಗಾಳ 7,303 ಪ್ರಕರಣ ಕಾಣಿಸಿಕೊಂಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.