ನವದೆಹಲಿ: ಕೋವಿಡ್-19 ವಿಶ್ವದಾದ್ಯಂತ ಸಾಗರದಂತೆ ವ್ಯಾಪಿಸಿಕೊಂಡಿದೆ. ಕೊರೊನಾ ವೈರಸ್ ಭಯಕ್ಕೆ ಸಾಗರದ ಅಲೆಗಳ ಏರಿಳಿತವಿಲ್ಲ. ಆಕಾಶ ಕೂಡ ಸಮುದ್ರ ಹತ್ತಿರ ಸಮೀಪಿಸಲು ಹೆದರುತ್ತಿದೆ.
2019ರ ಡಿಸೆಂಬರ್ಗೂ ಮುನ್ನ ಚೀನಾದ ವುಹಾನ್ ನಗರದ ಜನಜೀವನ ಸಾಮಾನ್ಯವಾಗಿತ್ತು. ಕೋವಿಡ್-19 ಸೋಂಕು ವಿಶ್ವಕ್ಕೆ ಬರಸಿಡಿಲಿನಂತೆ ಬಡಿದು, ಜಗತ್ತಿನ ನೆಮ್ಮದಿಯನ್ನು ಕಸಿದುಕೊಂಡಿತು. ಒಂದು ಸಣ್ಣ ಮಾರುಕಟ್ಟೆಯಿಂದ ಉದ್ಭವಿಸಿದ ವೈರಸ್ ಮಹಾಮಾರಿಯಾಗಿ ರೂಪುಗೊಂಡಿತು.
ಒಂದು ಚಿಕ್ಕ ವೈರಸ್ ಮನುಕುಲದ ಜಂಘಾಬಲವನ್ನು ಹುದುಗಿಸುತ್ತಿತ್ತು ಎಂಬುದನ್ನು ಯಾರೂ ಊಹಿಸಿರಲಿಲ್ಲ. ತಂತ್ರಜ್ಞಾನದಲ್ಲಿ ಮುಂದುವರಿದ ದೇಶಗಳಿಗೂ ಬಗ್ಗೆ ತಿಳಿದಿರಲಿಲ್ಲ ಈ ಮಹಾಮಾರಿ ಮುಂದೊಂದಿನ ಮನುಷ್ಯರನ್ನು ಮನೆಯಲ್ಲಿಯೋ, ಆಸ್ಪತ್ರೆಯ ಕೊಠಡಿಯಲ್ಲಿಯೋ, ತಪಾಸಣಾ ಕೇಂದ್ರದಲ್ಲಿಯೋ ಬಂಧಿ ಆಗಿಸುತ್ತದೆ ಎಂದು.