ಕೋವಿಡ್ -19 ಲಸಿಕೆಗಾಗಿ ಎರಡನೇ ಡ್ರೈ ರನ್ ನಾಳೆ ಎಲ್ಲಾ ರಾಜ್ಯಗಳಲ್ಲಿ ನಡೆಯಲಿದ್ದು, ಹರಿಯಾಣದಲ್ಲಿ ಇಂದು ಡ್ರೈ ರನ್ ನಡೆಯಲಿದೆ. ಮೊದಲ ಹಂತದ ಡ್ರೈ ರನ್ ಜನವರಿ 2ರಂದು ನಡೆದಿತ್ತು. ಈ ವ್ಯವಸ್ಥೆಯು ಕೋವಿಡ್ -19ರ ವಿರುದ್ಧ ಲಸಿಕೆ ಹಾಕಲು ಮತ್ತು ಲಾಜಿಸ್ಟಿಕ್ಸ್ ಹಾಗೂ ತರಬೇತಿಯಲ್ಲಿ ಲೋಪದೋಷಗಳನ್ನು ಪರಿಶೀಲಿಸಲಿದೆ.
ಈ ಹಿನ್ನೆಲೆ ಇಂದು ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು ಹಾಗೂ ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ದನ್ ಸಭೆ ನಡೆಸಲಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಲಸಿಕೆ ಹೊರತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಹರ್ಷವರ್ದನ್ ಕಳೆದ ವಾರ ಡ್ರೈ ರನ್ ನಡೆದಾಗ ಹೇಳಿದ್ದರು.
ನಾಳೆ ಡ್ರೈ ರನ್ನಲ್ಲಿ ಕೋವಿನ್ ಅಪ್ಲಿಕೇಶನ್‌ನ ಕಾರ್ಯಾಚರಣೆಯನ್ನು ಮತ್ತೊಮ್ಮೆ ಪರೀಕ್ಷಿಸಲಾಗುತ್ತದೆ. ಲಸಿಕೆ ತಯಾರಕರಿಗೆ ತುರ್ತು ಬಳಕೆಯ ಅನುಮತಿ ನೀಡಿದ ದಿನದಿಂದ 10 ದಿನಗಳಲ್ಲಿ ಕೋವಿಡ್-19 ಲಸಿಕೆ ಪ್ರಾರಂಭವಾಗಲಿದೆ ಎಂದು ಸರ್ಕಾರ ಹೇಳಿದೆ.
ಹರಿಯಾಣದಲ್ಲಿ ಇಂದು ಎಲ್ಲ ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಸ್ಥಳಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ವ್ಯಾಕ್ಸಿನ್ ಡ್ರೈ ರನ್ ನಡೆಯಲಿದೆ.