ETV Bharat / bharat

ಜಗತ್ತೇ ಸಾವಿನ ಬಗ್ಗೆ ಚಿಂತಾಕ್ರಾಂತವಾಗಿರುವಾಗ ಸಾವುಗಳ ಸಂಖ್ಯೆಯೇ ತಗ್ಗಿದೆಯೇ..? ಯಾಕೆ..?

ಹೊಸ ವೈರಾಣುವಿನಿಂದ ಉಂಟಾಗುತ್ತಿರುವ ಸಾವುಗಳು ಈಗ ಸೋಂಕಿನ ವ್ಯಾಪಕತೆಯನ್ನು ತಿಳಿಸಲು ಒಂದು ರೆಫರೆನ್ಸ್ ಪಾಯಿಂಟ್ ಆಗುವುದರೊಂದಿಗೆ ಇಡೀ ಸಮಾಜವೇ ಸಾಮೂಹಿಕ ರೋಗನಿರೋಧಕ ಶಕ್ತಿಯನ್ನು ಮೈಗೂಡಿಡಿಕೊಳ್ಳುವ ಮುನ್ನ ಅದೆಷ್ಟು ಜನರು ಸಾವಿನ ದವಡೆಗೆ ಸಿಲುಕಬಹುದು ಎಂದು ಲೆಕ್ಕಾಚಾರ ಹಾಕಲೂ ಈ ಸಾವುಗಳು ಬಳಕೆಯಾಗುತ್ತಿವೆ.

ಕೋವಿಡ್ 19
corona updates in india
author img

By

Published : Apr 19, 2020, 12:11 PM IST

Updated : Apr 19, 2020, 11:38 PM IST

ನವದೆಹಲಿ: ಕೊರೊನೊ ವೈರಸ್ ಹೇರಿರುವ ಹೊಸ ಸ್ಥಿತ್ಯಂತರಗಳಿಗೆ ಈ ಜಗತ್ತು ಎಚ್ಚರಗೊಳ್ಳುತ್ತಿದ್ದಂತೆ ವ್ಯಕ್ತಿಯೊಬ್ಬನ ಸಾವೆಂಬುದು ಯಾವುದೇ ಸಂಪ್ರದಾಯ, ಆಚರಣೆಯಿಲ್ಲದಂತೆ ಮುಗಿದು ಹೋಗುತ್ತಿದೆ. ಸಾವು ಈಗ ಒಂದು ಸಂಖ್ಯೆಯ ಮಟ್ಟಕ್ಕೆ ಇಳಿದು ಹೋಗಿದೆ. ಹೊಸ ವೈರಾಣುವಿನಿಂದ ಉಂಟಾಗುತ್ತಿರುವ ಸಾವುಗಳು ಈಗ ಸೋಂಕಿನ ವ್ಯಾಪಕತೆಯನ್ನು ತಿಳಿಸಲು ಒಂದು ರೆಫರೆನ್ಸ್ ಪಾಯಿಂಟ್ ಆಗುವುದರೊಂದಿಗೆ ಇಡೀ ಸಮಾಜವೇ ಸಾಮೂಹಿಕ ರೋಗನಿರೋಧಕ ಶಕ್ತಿಯನ್ನು ಮೈಗೂಡಿಡಿಕೊಳ್ಳುವ ಮುನ್ನ ಅದೆಷ್ಟು ಜನರು ಸಾವಿನ ದವಡೆಗೆ ಸಿಲುಕಬಹುದು ಎಂದು ಲೆಕ್ಕಾಚಾರ ಹಾಕಲೂ ಈ ಸಾವುಗಳು ಬಳಕೆಯಾಗುತ್ತಿವೆ.

ಹೀಗೆ ಕೋವಿಡ್ 19 ಸೋಂಕಿಗೆ ಸಿಲುಕಿ ಕಡಿಮೆ ಸಾವಿನ ದರ ದಾಖಲಾಗಿರುವ ಐಸ್‍ಲ್ಯಾಂಡ್, ಚೀನಾದಂತಹ ದೇಶಗಳಂತಹ ಉದಾಹರಣೆಗಳನ್ನು ನೋಡುತ್ತಾ ಸಾವಿನ ದರ ಶೇಕಡಾ 1ಕ್ಕಿಂತ ಕಡಿಮೆ ಇರುವುದನ್ನು ನೋಡಿ ಅನೇಕರು ತಾವು ಸಾವಿನಿಂದ ಬಚಾವಾಗಬಹುದು ಎಂಬ ಸಮಾಧಾನಕ್ಕೆ ಒಳಗಾಗುತ್ತಿದ್ದಾರೆ. ಒಂದು ವೇಳೆ ಈ ದರ ಶೇಕಡಾ 3 ರಷ್ಟಾದರೆ ಏನಾಗುತ್ತದೆ? ಈ ಅಂಕಿ ಅಂಶಗಳು ಜನರು ಸಾಯುವ ಸಂಖ್ಯೆಯನ್ನು ಮರೆಮಾಚುವುದಷ್ಟೇ ಅಲ್ಲ ಅವರ ಹೆಸರು, ಬದುಕಿನಲ್ಲಿ ಅವರ ಸ್ಥಾನಮಾನವನ್ನೂ ಮರೆಮಾಚುತ್ತಿವೆ.

ಇಟಲಿಯಲ್ಲಿ ಕೊರೊನಾದಿಂದ ಸಾವಿಗೀಡಾದವರ ಸರಾಸರಿ ವಯಸ್ಸು 78+ ಆದರೆ ಅಮೆರಿಕದಲ್ಲಿ ಇದೇ ರೀತಿ ಇಲ್ಲ. ಅಲ್ಲಿ ಸತ್ತವರಲ್ಲ ಕಪ್ಪು ಜನರ ಸಂಖ್ಯೆ ಹೆಚ್ಚಿದೆ. ಇಲ್ಲೆಲ್ಲೂ ಸತ್ತವರನ್ನು ಹೂಳುವಾಗ ಯಾರೂ ಇರುವುದಿಲ್ಲ. ತಮ್ಮನ್ನು ಶಾಶ್ವತವಾಗಿ ಅಗಲಿದವದವರ ದೇಹಗಳಿಗೆ ಅಂತ್ಯ ಸಂಸ್ಕಾರವನ್ನೂ ನಡೆಸಲಾಗದೇ ಜನರು ಪ್ರತ್ಯೇಕತೆಯಲ್ಲಿ ಇದ್ದುಕೊಂಡು ದುಃಖಿಸುತ್ತಿದ್ದಾರೆ. ಭಾರತದ ಒಂದು ನಗರದಲ್ಲಿ ಹೀಗೆ ಸತ್ತ ವ್ಯಕ್ತಿಯೊಬ್ಬನನ್ನು 252 ಎಂಬ ಸಂಖ್ಯೆಯಿಂದ ಕರೆಯಲಾಯಿತಲ್ಲದೇ ಅವನ ಪಾರ್ಥಿವ ಶರೀರವನ್ನು ಸದ್ದಿಲ್ಲದೆ ಅಂತ್ಯ ಸಂಸ್ಕಾರ ಮಾಡಿದ ಅಧಿಕಾರಿಗಳು ಆ ವ್ಯಕ್ತಿಯ ಕುಟುಂಬದ ಯಾರನ್ನೂ ಬರಲು ಬಿಡಲಿಲ್ಲ.

ಆ ವ್ಯಕ್ತಿಯನ್ನು ಅಂತ್ಯ ಸಂಸ್ಕಾರ ನಡೆಸುವ ಜಾಗದಲ್ಲಿ ಸೋಂಕು ಹರಡುವುದನ್ನು ತಡೆಯಲು ಇಂತಹ ನಿರ್ಬಂಧವನ್ನು ಹೇರಲಾಗಿತ್ತು. ಸಾವು ಎನ್ನುವುದು ಖಾಸಗಿ ಸಂಗತಿಯಾಗಿ ಸಾವಿಗೀಡಾದ ವ್ಯಕ್ತಿಯ ಕುಟುಂಬದವರು ಮತ್ತು ಬಂಧು ಮಿತ್ರರು ದುಃಖ-ಸಂತಾಪ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗಲೂ ಅವರು ಸಂತಾಪ ಸೂಚಿಸಬಹುದು. ಆದರೆ ಗತಿಸಿದವರ ದೇಹದ ಅಂತ್ಯ ಸಂಸ್ಕಾರ ಯಾರಿಗೂ ತಿಳಿಯದೆಯೇ ನಡೆದುಹೋಗಬಹುದು ಇಲ್ಲವೇ ಅದು ಭೀತಿ ತುಂಬಿದ ವಾತಾವರಣದಲ್ಲಿ ನಡೆಯುವಂತಾಗಿದೆ.

ಈಗ ಆವರಿಸಿರುವ ಸಾಂಕ್ರಾಮಿಕ ರೋಗವನ್ನು ಅರಿತುಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಿರುವಂತೆಯೇ ಇನ್ನಿತರ ದೇಶಗಳ ಜನರಂತೆ ಭಾರತೀಯರ ಮನಸುಗಳನ್ನು ಸಹ ಜನನ-ಮರಣದ ಪ್ರಶ್ನೆಗಳು ಕಾಡತೊಡಗಿವೆ. ನಮ್ಮ ದೇಶದಲ್ಲಿ ಏನಾಗಲಿದೆ? ಇಲ್ಲಿ ಈ ರೋಗ ಹೆಚ್ಚುತ್ತಿದೆಯೋ ಅಥವಾ ಕಡಿಮೆಯಾಗುತ್ತಿದೆಯೋ -ಎಷ್ಟು ಜನ ನಿಜಕ್ಕೂ ಸಾಯುತ್ತಿದ್ದಾರೆ? ಇಂತಹ ಅನೇಕ ಪ್ರಶ್ನೆಗಳನ್ನು ಹಾಕಿಕೊಂಡು ಜನರು ತಮ್ಮದೇ ಉತ್ತರಗಳನ್ನು ಕಂಡುಕೊಳ್ಳುವ ಸನ್ನಾಹದಲ್ಲಿದ್ದಾರೆ. ಸಾಂಕ್ರಾಮಿಕ ರೋಗತಜ್ಞರು, ಗಣಿತಶಾಸ್ತ್ರಜ್ಞರು ಒಂದೆಡೆಯಲ್ಲಿ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನ ಉಪಯೋಗಿಸಿಕೊಂಡು ಉತ್ತರ ಕಂಡುಕೊಳ್ಳುವಲ್ಲಿ ನಿರತಾಗಿದ್ದರೆ ಇಂಜಿನಿಯರುಗಳು ಮತ್ತಿತರರು ತಮ್ಮಬುದ್ಧಿಭಾರಗಳನ್ನು ಇದಕ್ಕಾಗಿಯೇ ಖರ್ಚು ಮಾಡುತ್ತಿದ್ದಾರೆ. ಹಾಗಂತ ಇದು ಯಾರ ಬುದ್ಧಿಯನ್ನೂ ಹೆಚ್ಚಿಸಿಲ್ಲ.

ಒಂದು ಪ್ರಶ್ನೆಯನ್ನು ನಾವೆಲ್ಲ ಕೇಳಿಕೊಳ್ಳಬೇಕಿದೆ. ಕೊರೊನಾವೈರಸ್ ಖಾಯಿಲೆಯೇ ಸಮಾಜದ ಅತಿದೊಡ್ಡ ಕೊಲೆಗಡುಕ ಖಾಯಿಲೆಯೇ? ಇದನ್ನು ಹೊರತುಪಡಿಸಿ ದಿನನಿತ್ಯ ಉಂಟಾಗುತ್ತಿರುವ ಇನ್ನಿತರ ಸಾವುಗಳಿಗೆ ಕಾರಣವಾಗಿ ಮರಣ ದರವನ್ನು ವ್ಯಾಪಕವಾಗಿ ಹೆಚ್ಚಿಸಿರುವ ಕ್ಯಾನ್ಸರ್, ರಸ್ತೆ ಅಪಘಾತ, ಅಧಿಕ ರಕ್ತದೊತ್ತಡ ಇತ್ಯಾದಿಗಳೆಲ್ಲ ಲೆಕ್ಕಕ್ಕಿಲ್ಲವೇ? ಕೊರೊನಾವೈರಸ್ ಇಲ್ಲದಿದ್ದಾಗ ಅವು ಎಷ್ಟು ಜನರ ಬಲಿತೆಗೆದುಕೊಳ್ಳುತ್ತಿದ್ದವೋ ಈಗಲೂ ಅದೇ ರೀತಿ ಬಲಿತೆಗೆದುಕೊಳ್ಳುತ್ತಿಲ್ಲವೇ? ನಮ್ಮ ನೆತ್ತಿಯ ಮೇಲಿನ ಆಕಾಶ ದಟ್ಟವಾಗಿ ಕವಿದುಕೊಂಡಿದ್ದಾಗ, ಉಸಿರಾಡುವ ಗಾಳಿ ಮಲಿನವಾಗಿದ್ದಾಗ, ಟ್ರ್ಯಾಫಿಕ್ ಹುಚ್ಚಾಪಟ್ಟೆಯಾಗಿದ್ದಾಗ ಮತ್ತು ಚಾಲನೆ ಮಾಡುವಾಗ ಒಂದು ಗ್ಲಾಸ್ ಏರಿಸುತ್ತಿದ್ದಾಗ ಆಗುತ್ತಿದ್ದ ಸಾವುಗಳ ಬಗ್ಗೆ ಯೋಚಿಸಿದ್ದೇವೆಯೇ? ಇದರ ಪರಿಣಾಮವನ್ನು ದೃಢೀಕರಿಸಿ ಹೇಳಲು ಸೂಕ್ತ ಅಂಕಿಅಂಶಗಳ ಕೊರತೆಯಿದೆ.

ಇಂದು ರಸ್ತೆಯ ಮೇಲೆ ಜನರು ಓಡಾಡದ ಕಾರಣ ರಸ್ತೆ ಅಪಘಾತಗಳಲ್ಲಿ ಯಾರೂ ಸಾಯುತ್ತಿಲ್ಲ. ಲಾಕ್‍ಡೌನ್ ಬಿಸಿ ತಾಳಲಾರದೇ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗಲು ಹವಣಿಸಿದ ವಲಸೆ ಕಾರ್ಮಿಕರು ರಸ್ತೆ ಅಪಘಾತದಲ್ಲಿ ಮರಣಿಸಿದ್ದು ಇದಕ್ಕೆ ಅಪವಾದ. ಪಂಜಾಬಿನಲ್ಲಿ ಪೊಲೀಸನೊಬ್ಬ ವಾಹನ ಚಾಲಿಸುತ್ತಿದ್ದಾಗ ಎದುರಿನಿಂದ ಮೊಟಾರು ಸೈಕಲ್ಲಿನಲ್ಲಿ ವೇಗವಾಗಿ ಬಂದ ವ್ಯಕ್ತಿಯೊಬ್ಬ ಡಿಕ್ಕಿ ಹೊಡೆಸಿದ್ದು ಮತ್ತೊಂದು ಅಪವಾದ. ಇಂತಹ ಒಂದೆರಡು ಬಿಡಿಬಿಡಿ ಘಟನೆಗಳನ್ನು ಬಿಟ್ಟರೆ ರಸ್ತೆ ಅಪಘಾತಗಳು ನಿಂತೇ ಹೋಗಿವೆ ಎನ್ನಬಹುದು.

ಹಾಗಿಲ್ಲವಾಗಿದ್ದರೂ ಅಂತಹ ಪ್ರಕರಣಗಳಿಗೆ ಆಸ್ಪತ್ರೆಗಳು ದೊರಕುವುದು ಸಹ ಕಷ್ಟವಿತ್ತು. ಬಹುತೇಕ ಆಸ್ಪತ್ರೆಗಳು ಬಂದಾಗಿವೆ. ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳಲ್ಲಿ ಸಹ ತುರ್ತುಚಿಕಿತ್ಸೆ ವಿಭಾಗಗಳಾಗಲೀ, ಒಪಿಡಿಗಳಾಗಲೀ ಕಾರ್ಯನಿರ್ವಹಿಸುತ್ತಿಲ್ಲ. ಈಗ ಹೆಚ್ಚಿನ ಗಮನವನ್ನು ಕೊವಿಡ್19 ರೋಗಿಗಳ ಮೇಲೆಯೇ ನೀಡುವಂತಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಕಿಮೊಥೆರಪಿ ನೀಡಿದ ಕ್ಯಾನ್ಸರ್ ರೋಗಿಗಳನ್ನು ಸಹ ಮನೆಗೆ ಕಳಿಸಲಾಗುತ್ತಿದೆ. ಇಂತಹ ಆಸ್ಪತ್ರೆಗಳಿಂದ ಹೊರಹಾಕಲ್ಪಟ್ಟ ಕೆಲವು ರೋಗಿಗಳು ದೆಹಲಿಯ ಮತ್ತಿತರ ನಗರಗಳ ಬೀದಿಗಳಲ್ಲಿ ಪರದಾಡುತ್ತಿದ್ದ ಕುರಿತು ವರದಿಯಾಗಿದೆ.

ಹಾಗಾದರೆ ಕೊವಿಡ್19 ಖಾಯಿಲೆಯ ರೋಗಿಗಳನ್ನು ನೋಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುವುದು ಎಂದರೆ ಜಗತ್ತಿನಲ್ಲಿ ಇತರೆ ಸಾವುಗಳ ಸಂಖ್ಯೆಯೇ ಕಡಿಮೆಯಾಗಿ ಹೋಯಿತಾ? ಅಮೆರಿಕದಲ್ಲಿ ಒಬ್ಬ ಅಧಿಕಾರಿಯನ್ನು ಈ ಪ್ರಶ್ನೆ ಕೇಳಲಾಯಿತು. ಇತರೆ ರೋಗಿಗಳನ್ನು ಆಸ್ಪತ್ರೆಗಳಿಗೆ ಬಿಟ್ಟುಕೊಳ್ಳದಿರುವುದರ ಬಗ್ಗೆ ಆ ಅಧಿಕಾರಿಗೆ ಕೇಳಿದಾಗ ಆತ ಕೊರೊನಿವೈರಸ್ ಬಿಟ್ಟರೆ ಬೇರೆ ಯಾವುದರಿಂದಲೂ ಖಾಯಿಲೆ ಬೀಳುವ ಸ್ಥಿತಿಯೇ ಇಲ್ಲದಾಗ ಅಂತಹ ಅಗತ್ಯವಾದರೂ ಏನು ಎಂದು ಮರುಪ್ರಶ್ನಿಸಿದ್ದ.

ಈ ಹೊತ್ತಿನ ಬೆಳವಣಿಗೆಗಳಿಗೆ ಹೊಂದಿಕೊಂಡು ಎಲ್ಲವನ್ನೂ ಸರಿದೂಗಿಸಿಕೊಂಡು ನೋಡಲು ಜನರಿಗೆ ಕೊಂಚ ಸಮಯ ಹಿಡಿಯುತ್ತದೆ. ಆದರೆ ಲಾಕ್‍ಡೌನ್‍ನಿಂದಾಗಿ ಜಗತ್ತಿನಲ್ಲಿ ನಿಜಕ್ಕೂ ಸಾವುಗಳ ಸಂಖ್ಯೆ ಕಡಿಮೆಯಾಗಿದೆಯೇ? ಲಕ್ನೋದಲ್ಲಿನ ಚಿತಾಗಾರವೊಂದರಲ್ಲಿ ತಿಂಗಳಿಗೆ 1100+ ಶವಸಂಸ್ಕಾರಗಳು ನಡೆಯುತ್ತಿದ್ದರೆ ಕಳೆದೊಂದು ತಿಂಗಳಿನಲ್ಲಿ ಅದು 800ಕ್ಕೆ ಇಳಿದಿದೆಯಂತೆ. ದೆಹಲಿಯ ಚಿತಾಗಾರವೊಂದರಲ್ಲಿ ಸಹ ಇದೇ ಪರಿಸ್ಥಿತಿಯಾಗಿದೆ. ಸಾವುಗಳ ಸಂಖ್ಯೆಯಲ್ಲಿ ಕುಸಿತವಾಗಿರುವ ಈ ಬೆಳವಣಿಗೆಯಿಂದ ಯಾವ ನಿರ್ಧಾರಕ್ಕೆ ಬರಬಹುದು? ಭಾರತದಲ್ಲಿ ಅತಿದೊಡ್ಡ ಕೊಲೆಗಡುಕರೆಂದರೆ ಹೃದಯಾಘಾತಗಳು, CPODಯಂತಹ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು, ಕ್ಷಯರೋಗ ಮತ್ತು ರಸ್ತೆ ಅಪಘಾತಗಳು.

ಇತರ ತೊಂದರೆಗಳೂ ಜನರ ಜೀವಗಳನ್ನು ಬಾಧಿಸುತ್ತವೆ, ಇಲ್ಲವೆಂದಲ್ಲ. ಆಸ್ಪತ್ರೆಗಳು ರೋಗಿಗಳು ಚೇತರಿಸಿಕೊಳ್ಳುವಂತೆ ಮಾಡುವಲ್ಲಿ ದುಡುಕುತ್ತವೆ ಎಂಬ ಮಾತಿನಲ್ಲಿ ಹುರುಳಿಲ್ಲದಿಲ್ಲ. ಸಣ್ಣಪುಟ್ಟ ಖಾಯಿಲೆಗಳಿಗೆ ಜನರು ಆಸ್ಪತ್ರೆಗಳಿಗೆ ಬರಲು ಮನಸು ಮಾಡದಿರಲು ಇದೇ ಕಾರಣ. ಇದಕ್ಕಿರುವ ಸಲಹೆಯೇನೆಂದರೆ ಮನೆಯಲ್ಲೇ ಇದ್ದುಕೊಂಡು ನಿಮ್ಮ ದೇಹಕ್ಕಂಟಿರುವ ಜಾಡ್ಯವನ್ನು ನಿಮ್ಮ ದೇಹವೇ ಹೋರಾಡಿ ನಿಧಾನಕ್ಕೆ ವಾಸಿ ಮಾಡುವವರೆಗೆ ಕಾಯಿರಿ. ವೈರಸ್ ಸೋಂಕಿನಿಂದ ನಿಮ್ಮ ದೇಹವು ಚೇತರಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದೆನಿಸಿದಾಗ ರೋಗಿಗಳು ವೈದ್ಯಕೀಯ ತಪಾಸಣೆಗೆ ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ತೀರಾ ಗಂಭೀರ ಸ್ಥಿತಿಯಲ್ಲಿಲ್ಲದ ರೋಗಿಗಳನ್ನು ಮನೆಯಲ್ಲೇ ಇರಿ ಎಂದು ಹೇಳುವುದರಲ್ಲಿ ಏನೋ ಬುದ್ಧಿವಂತಿಕೆ ಇದೆಯೆನಿಸುತ್ತದೆ.

ಅಮೆರಿಕದಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ವೈದ್ಯರು ಮುಷ್ಕರ ನಡೆಸುತ್ತಿದ್ದಾಗ ರೋಗಿಗಳ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತೆಂಬ ವಿಷಯ ತಿಳಿದು ಬಂದಿದೆ. ಕೇವಲ ಒಂದು ಕಡೆಯ ವೈದ್ಯರ ಮುಷ್ಕರವಲ್ಲ. ಪ್ರಪಂಚದ 7 ಬೇರೆಬೇರೆ ದೇಶಗಳಲ್ಲಿ ವೈದ್ಯರು ಮುಷ್ಕರ ನಡೆಸುತ್ತಿದ್ದಾಗ ಕಂಡುಬಂದ ರೋಗಿಗಳ ಸಾವಿನ ಪ್ರಮಾಣದ ಅಧ್ಯಯನದಲ್ಲಿ ಈ ಫಲಿತಾಂಶ ಕಂಡುಬಂದಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಇದು ಬಹಳ ಮುಖ್ಯವಾದ ಸಂಗತಿ.

ಇದರ ಬಹುಮುಖ್ಯ ಪಾಠವೇನೆಂದರೆ ಮೊದಲನೆಯದಾಗಿ ರೋಗಿಗಳು ತೀರಾ ಗಂಭೀರ ಸ್ಥಿತಿಯಲ್ಲಿದ್ದಾಗ ಅವರನ್ನು ಮಾತ್ರ ಆಸ್ಪತ್ರೆಗಳಿಗೆ ಕರೆತರುವುದರಿಂದ ಸಾವುಗಳ ಸಂಖ‍್ಯೆಯನ್ನು ತಗ್ಗಿಸಬಹುದು. ಎಷ್ಟೋ ಪ್ರಕರಣಗಳಲ್ಲಿ ರೋಗಿಗಳು ಆಸ್ಪತ್ರೆಯಲ್ಲಿದ್ದಾಗಲೇ ಗಂಭೀರ ಸ್ಥಿತಿ ತಲುಪಿಬಿಡುತ್ತಾರೆ. ಎರಡನೆಯದಾಗಿ, ರೋಗಪರೀಕ್ಷೆಯ ಶಿಷ್ಟಾಚಾರಗಳನ್ನು ಪಾರದರ್ಶಕವಾಗಿರಿಸಬೇಕು. ವೈದ್ಯರ ತೀರ್ಮಾನಕ್ಕೇ ಎಲ್ಲವನ್ನೂ ಬಿಡಬಾರದು. ವೈದ್ಯರು ಬಹಳ ಸಲ ಅಗತ್ಯವೇ ಇಲ್ಲದಿದ್ದರೂ ನಾನಾ ಬಗೆಯ ಪರೀಕ್ಷೆಗಳನ್ನು ನಡೆಸುತ್ತಾರೆ. ಈ ಪರೀಕ್ಷೆ ನಡೆಸುವುದು ಒಂದು ದೊಡ್ಡ ದಂದೆಯೇ ಆಗಿದೆ. ವಿಪರೀತ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಹಲವಾರು ಸಾರ್ವಜನಿಕ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿರುವುದನ್ನು ನೋಡಬಹುದು. ಮತ್ತೆ ಕೆಲವರು ರ್ಯಾಂಡಮ್ ಸ್ಯಾಂಪಲ್‍ ಮೂಲಕವೂ ಒಂದೇ ಫಲಿತಾಂಶ ಬರುವುದು ತಿಳಿದಿದ್ದರೂ ಉತ್ತಮ ವಿಶ್ಲೇಷಣೆಗಾಗಿ ಪರೀಕ್ಷೆ ಬೇಕೇ ಬೇಕು ಎನ್ನುತ್ತಾರೆ.

ಅಂಕಿಅಂಶಗಳ ಬಗ್ಗೆ ಹೆಚ್ಚು ಆಸಕ್ತಿ ತೋರುವ ಜನರೇ ಕೊರೊನಾವೈರಸ್ಸಿನಿಂದ ಸಾಯುವ ಜನರ ಸಂಖ್ಯೆಗಿಂತಲೂ ಹೃದಯಾಘಾತ, ರಸ್ತೆ ಅಪಘಾತ ಇನ್ನಿತರೆ ಕಾರಣಗಳಿಂದ ಸಾಯುವವರ ಸಂಖ್ಯೆ ಹೆಚ್ಚು ಎನ್ನುತ್ತಿದ್ದಾರೆ. ಈ ಕಾರಣದಿಂದ ಜೀವಗಳನ್ನು ಉಳಿಸಲು ಸಂಬಂಧಪಟ್ಟ ಅಧಿಕಾರಸ್ಥಾನಗಳು ಸೂಕ್ತ ದಾರಿ ಕಂಡುಕೊಳ್ಳಬೇಕಿದೆ. ಮೃತದೇಹಗಳು ಸೋಂಕು ಹರಡುವ ಹೊಸ ವ್ಯವಸ್ಥೆಯಲ್ಲಿ ಅಂತ್ಯಸಂಸ್ಕಾರಗಳ ರೂಢಿ ಸಂಪ್ರದಾಯಗಳು ಸಂಪೂರ್ಣ ಬದಲಾಗಿಬಿಡುವ ಸಾಧ್ಯತೆ ಗೋಚರವಾಗುತ್ತಿದೆ.

-ಸಂಜಯ್ ಕಪೂರ್

Last Updated : Apr 19, 2020, 11:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.