ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಮಹಾಮಾರಿಗೆ ಈವರೆಗೆ ಬಲಿಯಾದ 13 ಜನರಲ್ಲಿ ಬಹುತೇಕರಿಗೆ ವಿದೇಶ ಪ್ರಯಾಣದ ಹಿಸ್ಟರಿ ಆಗಲಿ ಸೋಂಕಿತರ ಸಂಪರ್ಕವಾಗಲಿ ಇರಲಿಲ್ಲ. ಆದ್ರೆ ಇವರೆಲ್ಲ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಅಂಶ ತಿಳಿದುಬಂದಿದೆ. ಮತ್ತೊಂದೆಡೆ ಸಮಾಧಾನಕರ ಸಂಗತಿ ಅಂದ್ರೆ 80 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈವರೆಗೆ ಮೃತಪಟ್ಟ 13 ಜನರಲ್ಲಿ ಇಬ್ಬರಿಗೆ ಮಾತ್ರ ವಿದೇಶಿ ಪ್ರಯಾಣದ ಹಿಸ್ಟರಿ ಇತ್ತು. ಸಾವನ್ನಪ್ಪಿದವರಲ್ಲಿ ನಾಲ್ವರು ಮಹಿಳೆಯರು, 9 ಜನ ಪುರುಷರು ಸೇರಿದ್ದಾರೆ. ಹೀಗೆ ನೋವೆಲ್ ಕೊರೊನಾಗೆ ಬಲಿಯಾದವರಲ್ಲಿ ಬಹುತೇಕ ಜನರು ಯಾವುದೇ ಪ್ರಾಥಮಿಕ-ದ್ವಿತೀಯ ಸಂಪರ್ಕ ಹೊಂದಿದ್ದ ಮಾಹಿತಿಯೇ ಇಲ್ಲ ಎನ್ನಲಾಗ್ತಿದೆ.
ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ತೀವ್ರ ಉಸಿರಾಟದ ಸಮಸ್ಯೆ ಇದ್ದವರು ಇವರು
1)ಕೇಸ್- 125 - ಬಾಗಲಕೋಟೆ
2)ಕೇಸ್- 166- ಗದಗ
3)ಕೇಸ್- 177- ಕಲಬುರಗಿ
4)ಕೇಸ್- 219- ಬೆಂಗಳೂರು
5) ಕೇಸ್- 250- ಚಿಕ್ಕಬಳ್ಳಾಪುರ
6) ಕೇಸ್- 252- ಬೆಂಗಳೂರು
7) ಕೇಸ್- 279- ವಿಜಯಪುರ (P-221 ಸಂಪರ್ಕ ಹೊಂದಿದ್ದರು. ಆದರೆ P- 221ತೀವ್ರ ಉಸಿರಾಟದಿಂದ ಬಳಲುತ್ತಿದ್ದು, ಯಾವುದೇ ಟ್ರಾವೆಲ್ ಹಿಸ್ಟರಿ ಇರಲಿಲ್ಲ. ಇವರಿಂದ ತಗುಲಿದ ಸೋಂಕಿಗೆ P-279 ಕೊರೋನಾಗೆ ಬಲಿಯಾಗಿದ್ದಾರೆ)
ಇನ್ನು ಮತ್ತೊಂದು ಪ್ರಕರಣದಲ್ಲಿ P-128 ಈತ ದೆಹಲಿಗೆ ತೆರಳಿದ್ದು, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈತನಿಂದ P-224 ಕೊರೊನಾ ಸೋಂಕು ತಗಲಿತ್ತು. P- 224 ಈ ಸೋಂಕಿತನಿಂದ P- 279 ಗೆ ತಗುಲಿ ಕೊರೊನಾಗೆ ಬಲಿಯಾಗಿದ್ದರು.
60 ವರ್ಷ ಮೇಲ್ಪಟ್ಟವರೇ ಈವರೆಗೆ ಕೊರೊನಾಗೆ ಬಲಿಯಾದವರು:
ನೋವೆಲ್ ಕೊರೊನಾ ವೈರಸ್ಗೆ ಭಾಗಶಃ 60 ವರ್ಷ ಮೇಲ್ಪಟ್ಟ ವೃದ್ಧರೇ ಬಲಿಯಾಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು. ಇದರೊಟ್ಟಿಗೆ ಹಲವು ರೋಗಗಳಿಂದ ಬಳಲುತ್ತಿದ್ದವರೇ ಆಗಿದ್ದಾರೆ. ಈವರೆಗೆ ಸಾವನ್ನಪ್ಪಿದ 13 ಜನರಲ್ಲಿ 60 ವರ್ಷ ಮೇಲ್ಪಟ್ಟ 12 ಮಂದಿ ಇದ್ದರೆ, 55 ವರ್ಷದ ವ್ಯಕ್ತಿಯೊಬ್ಬ ಬಲಿಯಾಗಿದ್ದಾರೆ.
1) ಪಿ -6: ಕಲಬುರಗಿಯ 76 ವರ್ಷದ ವೃದ್ಧ - ಸೌದಿ ಅರೇಬಿಯಾದಿಂದ ಪ್ರಯಾಣ.
2) ಪಿ-53: ಚಿಕ್ಕಬಳ್ಳಾಪುರ ನಿವಾಸಿ70 ವಯಸ್ಸಿನ ಮಹಿಳೆ - ಸೌದಿ ಅರೇಬಿಯಾ ಪ್ರಯಾಣ..
3) ಪಿ-60: 60 ವರ್ಷದ ವೃದ್ಧ ತುಮಕೂರು ಜಿಲ್ಲೆಯ ನಿವಾಸಿ - ದೆಹಲಿಗೆ ಪ್ರಯಾಣ
4) ಪಿ -125 : 75 ವರ್ಷದ ವೃದ್ದ, ಬಾಗಲಕೋಟೆ ಜಿಲ್ಲೆಯ ನಿವಾಸಿ. ಟ್ರಾವೆಲ್ ಹಿಸ್ಟರಿ ಇಲ್ಲ, ಉಸಿರಾಟ ತೊಂದರೆ ಇತ್ತು.
5) ಪಿ -166: ಗದಗ ಮೂಲದ 80 ವರ್ಷದ ವೃದ್ಧೆ - ತೀವ್ರ ಶ್ವಾಸಕೋಶದ ತೊಂದರೆ ಇತ್ತು. ಟ್ರಾವೆಲ್ ಹಿಸ್ಟರಿ ಇಲ್ಲ.
6) ಪಿ -177: ಕಲಬುರಗಿಯ 65 ವರ್ಷದ ವ್ಯಕ್ತಿಯು ತೀವ್ರ ಉಸಿರಾಟ ತೊಂದರೆ ಇತ್ತು. ಟ್ರಾವೆಲ್ ಹಿಸ್ಟರಿ ಇಲ್ಲ.
7) ಪಿ -195: ಬೆಂಗಳೂರಿನ 66 ವರ್ಷ, ಮಣಿಪುರದಿಂದ ಪ್ರಯಾಣ ಬೆಂಗಳೂರಿಗೆ.
8) ಪಿ -205: ಕಲಬುರಗಿಯ 55 ವರ್ಷದ ವ್ಯಕ್ತಿಗೆ ಸೋಂಕು. ತೀವ್ರ ಉಸಿರಾಟದ ಸಮಸ್ಯೆ.
9) ಪಿ -219: ಬೆಂಗಳೂರಿನ 76 ವರ್ಷದ ವೃದ್ಧ. ತೀವ್ರ ಉಸಿರಾಟದ ತೊಂದರೆ, ಟ್ರಾವೆಲ್ ಹಿಸ್ಟರಿ ಇಲ್ಲ.
10) ಪಿ -250: 65 ವರ್ಷದ ವೃದ್ಧ ಚಿಕ್ಕಬಳ್ಳಾಪುರ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆ. ಟ್ರಾವೆಲ್ ಹಿಸ್ಟರಿ ಇಲ್ಲ.
11) ಪಿ -252: ಬೆಂಗಳೂರಿನ ನಿವಾಸಿ 65ವರ್ಷದ ವೃದ್ಧೆ. ತೀವ್ರ ಉಸಿರಾಟದ ತೊಂದರೆಯಿತ್ತು, ಟ್ರಾವೆಲ್ ಹಿಸ್ಟರಿ ಇರಲಿಲ್ಲ.
12) ಪಿ -257: ವಿಜಯಪುರದ 69 ವರ್ಷ ವೃದ್ಧ. P-221 ರ ಸಂಪರ್ಕ ಹೊಂದಿದ್ದರು. ಟ್ರಾವೆಲ್ ಹಿಸ್ಟರಿ ಇರಲಿಲ್ಲ.
13)ಪಿ- 279 : ಹಿರೇಬಾಗವಾಡಿಯ ಬೆಳಗಾವಿಯ ನಿವಾಸಿ, 80 ವರ್ಷದ ವೃದ್ಧೆ. P-224 ರ ಸಂಪರ್ಕ ಹೊಂದಿದ್ದು, ಸೋಂಕಿಗೆ ಬಲಿಯಾಗಿದ್ದಾರೆ. ಹೊಂದಿದ್ದಾರೆ.