ETV Bharat / bharat

ಕೊರೊನಾ ಹರಡುವಿಕೆ ಹಾಗೂ ಸುರಕ್ಷತೆ ನಡುವೆ ಇರುವುದು ಕೂದಲೆಳೆಯ ಅಂತರವಷ್ಟೇ..!

ಪ್ರಧಾನಿ ಮೋದಿ ಅವರು ಸಾಂಕ್ರಾಮಿಕ ರೋಗವನ್ನು ಹತ್ತಿಕ್ಕುವ ಉದ್ದೇಶದಿಂದ ಲಾಕ್ ಡೌನ್ ತಂತ್ರಕ್ಕೆ ಮೊರೆಹೋದರು. ದುರದೃಷ್ಟವಶಾತ್, ಲಾಕ್ ಡೌನ್ ಜಾರಿಯಲ್ಲಿದ್ದಾಗಲೂ ದೇಶದಲ್ಲಿ ಹಲವಾರು ಲಾಕ್ ಡೌನ್ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ.

lockdown extension
ಕೊರೊನಾ ಹರಡುವುದು ಹಾಗೂ ಸುರಕ್ಷತೆ ನಡುವೆ ಇರುವುದು ಕೂದಲೆಳೆಯ ಅಂತರ..!
author img

By

Published : Apr 21, 2020, 7:17 PM IST

ನವದೆಹಲಿ: ಕೆಲವು ವಲಯಗಳಿಗೆ ವಿನಾಯಿತಿಗೊಳಿಸಿ ಪ್ರಸ್ತುತ ರಾಷ್ಟ್ರವ್ಯಾಪಿ ಜಾರಿಯಲ್ಲಿರುವ ಲಾಕ್​​​​​​ಡೌನ್ ಆದೇಶವನ್ನು ಮೇ 3 ರ ತನಕ ಮುಂದುವರಿಸಲಾಗಿದೆ. ಆದರೆ, ಕಟ್ಟಡ ನಿರ್ಮಾಣ, ಕೈಗಾರಿಕೆಗಳು ಮತ್ತು ಗ್ರಾಮೀಣ ಪ್ರದೇಶಗಳ ವಿಶೇಷ ಆರ್ಥಿಕ ವಲಯಗಳಿಗೆ ರಿಯಾಯಿತಿಗೊಳಿಸಿರುವ ಬಗ್ಗೆ ತಕರಾರು ಎದ್ದಿದೆ. ತೆಲಂಗಾಣದಂತಹ ರಾಜ್ಯಗಳಲ್ಲಿ ಸಾಫ್ಟ್ ವ್ಯಾರ್ ಉದ್ಯಮ ಘಟಕಗಳು ಒಂದೇ ಪ್ರದೇಶದಲ್ಲಿ ನೆಲೆಯೂರಿವೆ.

ಇವುಗಳ ಪುನರಾರಂಭಕ್ಕೆ ಅವಕಾಶ ಮಾಡಿಕೊಟ್ಟರೆ ಒಮ್ಮಲೆ ಅನೇಕ ಉದ್ಯೋಗಿಗಳು ಒಂದೇ ಕಡೆ ಸೇರುವುದರಿಂದ ಜನ ದಟ್ಟಣೆ ಹೆಚ್ಚಾಗುವ ಎಲ್ಲಾ ಸಂಭವವಿರುತ್ತದೆ. ಕಟ್ಟಡ ನಿರ್ಮಾಣ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆರಂಭ ಆದರಂತೂ ಯಾರೂ ಸಾಮಾಜಿಕ ಅಂತರದ ಬಗ್ಗೆ ಗಮನ ಹರಿಸಲು ಸಾಧ್ಯವೇ ಇಲ್ಲ. ಕೋವಿಡ್ ಹರಡದಂತೆ ತಡೆಯುವ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರು ಅನುಸರಿಸುವುದು ಅಸಾಧ್ಯವೇ ಸರಿ.

ಹೀಗಿರುವಾಗ ಇಷ್ಟು ದಿನಗಳು ಕಾಯಿಲೆ ಹರಡದಂತೆ ಮಾಡಿದ ಕಟ್ಟುನಿಟ್ಟಿನ ಕ್ರಮಗಳೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ. ರಾಜ್ಯ ಮಾರ್ಗಸೂಚಿಗಳ ಭಾಗವಾಗಿ, ಸರ್ಕಾರವು ಎಲ್ಲ ರೀತಿಯ ಕೃಷಿ ಮತ್ತು ಕೃಷಿ-ಮಾರುಕಟ್ಟೆ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದೆ. ಆಹಾರೋತ್ಪನ್ನದಲ್ಲಿ ನಿರ್ಣಾಯಕ ಪಾತ್ರ ವಹಿಸುವ ರಾಬಿ ಬೆಳೆ ಬೆಳೆಯುವಲ್ಲಿ ಕೃಷಿ ಸಮುದಾಯವು ಈಗಾಗಲೇ ಒಂದರ ಮೇಲೊಂದು ಅಡಚಣೆಗಳನ್ನು ಎದುರಿಸಿದೆ. ಆದ್ದರಿಂದ, ಕೃಷಿ ಕ್ಷೇತ್ರಕ್ಕೆ ನೀಡುವ ರಿಯಾಯಿತಿ ಸ್ವಾಗತಾರ್ಹ ಕ್ರಮ. ಆದರೆ, ಸಾಕಷ್ಟು ಕಾಳಜಿ ತೆಗೆದುಕೊಳ್ಳಬೇಕು. ಹಳ್ಳಿಗಳಲ್ಲಿ ಎಂಜಿಎನ್‌ಆರ್‌ಇಜಿಎ (ನರೇಗಾ) ಕಾಮಗಾರಿಗಳನ್ನು ಪುನರಾರಂಭಿಸಿದರೆ, ಅದರ ಫಲಿತಾಂಶಕ್ಕಾಗಿ ಕಾದರೆ ದುರಂತವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಲಾಕ್​​​​​ಡೌನ್ ಸಮಯದಲ್ಲಿ ರಾಷ್ಟ್ರವು ಪ್ರತಿದಿನ 35,000 ಕೋಟಿ ರೂ. ನಷ್ಟ ಅನುಭವಿಸುತ್ತಿದ್ದುಇಂತಹ ಸಂದರ್ಭದಲ್ಲಿ, 40 ದಿನಗಳ ಲಾಕ್‌ಡೌನ್ ಎಂದರೆ 14,00,000 ಕೋಟಿ ರೂ. ಗೂ ಹೆಚ್ಚು ನಷ್ಟ ಅನುಭವಿಸುವುದು ಖಚಿತ. ಪ್ರತಿಕೂಲ ಆರ್ಥಿಕ ಪರಿಣಾಮಗಳಿಗೆ ಧೈರ್ಯವಾಗಿ ಕೇಂದ್ರ ಮತ್ತು ರಾಜ್ಯಗಳು ಮುಂದಾಗಿರುವುದರಿಂದ, ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ ನಂತರವೇ ನಿರ್ಬಂಧಗಳನ್ನು ಸಡಿಲಿಸುವುದು ಉತ್ತಮ. ಯಾವುದೇ ಪ್ರದೇಶ ಅಥವಾ ವಲಯದಲ್ಲಿ ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆರವು ಗೊಳಸುವುದು ಬಿಕ್ಕಟ್ಟನ್ನು ನಿರೀಕ್ಷೆಗಿಂತ ವೇಗವಾಗಿ ಹೆಚ್ಚಿಸುತ್ತದೆ.

ಪ್ರಧಾನಿ ಮೋದಿ ಅವರು ಸಾಂಕ್ರಾಮಿಕ ರೋಗವನ್ನು ಹತ್ತಿಕ್ಕುವ ಉದ್ದೇಶದಿಂದ ಲಾಕ್ ಡೌನ್ ತಂತ್ರಕ್ಕೆ ಮೊರೆಹೋದರು. ದುರದೃಷ್ಟವಶಾತ್, ಲಾಕ್ ಡೌನ್ ಜಾರಿಯಲ್ಲಿದ್ದಾಗಲೂ ದೇಶದಲ್ಲಿ ಹಲವಾರು ಲಾಕ್ ಡೌನ್ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ಬ್ಯಾಂಕುಗಳು, ಮಾರುಕಟ್ಟೆಗಳು ಮತ್ತು ಕಿರಾಣಿ ಅಂಗಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುವ ಅಭ್ಯಾಸ ಮಾಡಲು ಸಾಮಾನ್ಯವಾಗಿ ಜನರಲ್ಲಿ ಪ್ರಜ್ಞೆಯ ಕೊರತೆಯಿದೆ. ಎಲ್ಲ ಸರಿ ಹೋಗಿದೆ ಎಂಬ ಭಾವನೆಯೊಂದಿಗೆ ನಿರ್ಬಂಧಗಳನ್ನು ಸಡಿಲಗೊಳಿಸಿದರೆ, ಅದರ ಪರಿಣಾಮವಾಗಿ ಏಕಾಏಕಿ ಕಾಯಿಲೆ ಉಲ್ಬಣಗೊಂಡರೆ ಅದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ.

ಹೈದರಾಬಾದ್ ನಲ್ಲಿ ಮಹಿಳೆಯೊಬ್ಬರು ತಪಾಸಣೆಗಾಗಿ ಖಾಸಗಿ ಆಸ್ಪತ್ರೆಗೆ ತೆರಳಿದ್ದರಿಂದ ಆಕೆಯ , ಪ್ರಯಾಣ ಹಾಗೂ ಚಿಕಿತ್ಸೆಯ ನೆಪದಲ್ಲಿ 19 ಜನರಿಗೆ ಸೋಂಕು ತಗುಲಿತು. ದೆಹಲಿಯ ಪಿಜ್ಜಾ ಡೆಲಿವರಿ ಹುಡುಗನಿಗೆ ಕೋವಿಡ್-19 ಇರುವುದು ದೃಢಪಟ್ಟ ನಂತರ ಆತನ ಸಂಪರ್ಕಕ್ಕೆ ಬಂದ 89 ಜನರನ್ನು ನಿರ್ಬಂಧದಲ್ಲಿ ಇಡಲಾಗಿದೆ. ನಿಜಾಮುದ್ದೀನ್ ಮರ್ಕಜ್​​​ ಘಟನೆಯು ವೈರಸ್ ಹರಡುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸಿತು. ಕೋವಿಡ್-19 ರ ವಿರುದ್ಧ ಹೋರಾಡುವಲ್ಲಿ ಪ್ರಮುಖವಾದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮವನ್ನು ಕಡೆಗಣಿಸುವುದು; ಅನೇಕರಿಗೆ ಸಾವನ್ನು ಆಹ್ವಾನಿಸಿದಂತೆ ಎಂಬುದು ಸಾಬೀತಾಗಿದೆ. ಸಾಂಕ್ರಾಮಿಕ ಉತ್ತುಂಗಕ್ಕೇರಿದ ನಂತರ ಅದನ್ನು ನಿಯಂತ್ರಿಸಲು ನಮಗೆ ಸಾಧ್ಯವಿಲ್ಲ ಎಂದು ಮಹಾರಾಷ್ಟ್ರದ ಇಂದಿನ ಪರಿಸ್ಥಿತಿ ಸಾಬೀತುಪಡಿಸುತ್ತದೆ. ಪ್ರತ್ಯೇಕವಾಗಿ 1,900 ರೋಗ ಪೀಡಿತರು ಮತ್ತು ಐಸಿಯುಗಳಲ್ಲಿ 200 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮುಂಬೈಗೆ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ.

ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಿಗೆ ಹೆಚ್ಚಿನ ಕೊಠಡಿಗಳಾಗಲೀ, ಸ್ಥಳವಾಗಲೀ ಇಲ್ಲ. ದೊಡ್ಡ ನಗರಗಳ ಪರಿಸ್ಥಿತಿಯೇ ಹೀಗಾದರೆ, ಇನ್ನು ಗ್ರಾಮೀಣ ಭಾರತಕ್ಕೆ ಏನಾದರೂ ಅವಕಾಶವನ್ನು ಸಿಗಬಹುದೇ? ಹಲವಾರು ಆರೋಗ್ಯ ತಜ್ಞರು ನವೆಂಬರ್‌ನಲ್ಲಿ ಎರಡನೇ ಬಾರಿಗೆ ಈ ಕಾಯಿಲೆ ಏಕಾಏಕಿ ಹೆಚ್ಚಾಗುತ್ತದೆ ಎಂಬ ಮುನ್ಸೂಚನೆ ನೀಡಿರುವುದರಿಂದ, ಭಾರತವು ಇನ್ನು ಮುಂದೆ ತನ್ನ ವಿಧಾನದಲ್ಲಿ ಅಸಡ್ಡೆ ತೋರಬಾರದು. ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತರುವವರೆಗೆ ಸರ್ಕಾರವು ಸಾರ್ವಜನಿಕರ ಮನೆ ಬಾಗಿಲಿಗೆ ಔಷಧಗಳು, ಆಹಾರ ಮತ್ತು ಇತರೆ ಅಗತ್ಯ ವಸ್ತುಗಳನ್ನು ಪೂರೈಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.