ನವದೆಹಲಿ: ಮಹಮಾರಿ ಕೊರೊನಾ ಸೋಂಕಿನಿಂದಾಗಿ ಲೋಕ ನಾಯಕ್ ಜಯಪ್ರಕಾಶ್ ಆಸ್ಪತ್ರೆಯಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರಲ್ಲಿ ಇದೀಗ ಡೆಂಘೀ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಸಾಂಕೇತ್ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಅವರನ್ನ ದಾಖಲು ಮಾಡಲಾಗಿದೆ.
ಜ್ವರ, ಉಸಿರಾಟದ ತೊಂದರೆ... ಆಸ್ಪತ್ರೆಗೆ ದಾಖಲಾದ ಡಿಸಿಎಂ ಸಿಸೋಡಿಯಾ!
ಸೆಪ್ಟೆಂಬರ್ 14ರಂದು ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಕಾರಣ ಹೋಂ ಕ್ವಾರಂಟೈನ್ಗೊಳಗಾಗಿದ್ದರು. ನಿನ್ನೆ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿರುವ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
-
Delhi Deputy CM Manish Sisodia is suffering from Dengue & his blood platelets count is falling. He was admitted to Lok Nayak Jayaprakash Hospital in Delhi after he complained of fever & low oxygen levels. He has also tested positive for COVID-19: Office of Delhi Deputy CM pic.twitter.com/TzSfxIvTzC
— ANI (@ANI) September 24, 2020 " class="align-text-top noRightClick twitterSection" data="
">Delhi Deputy CM Manish Sisodia is suffering from Dengue & his blood platelets count is falling. He was admitted to Lok Nayak Jayaprakash Hospital in Delhi after he complained of fever & low oxygen levels. He has also tested positive for COVID-19: Office of Delhi Deputy CM pic.twitter.com/TzSfxIvTzC
— ANI (@ANI) September 24, 2020Delhi Deputy CM Manish Sisodia is suffering from Dengue & his blood platelets count is falling. He was admitted to Lok Nayak Jayaprakash Hospital in Delhi after he complained of fever & low oxygen levels. He has also tested positive for COVID-19: Office of Delhi Deputy CM pic.twitter.com/TzSfxIvTzC
— ANI (@ANI) September 24, 2020
48 ವರ್ಷದ ಸಿಸೋಡಿಯಾ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇಂದು ಅವರಿಗೆ ನಡೆಸಿರುವ ಪರೀಕ್ಷೆಯಲ್ಲಿ ಡೆಂಘೀ ಜ್ವರ ದೃಢಪಟ್ಟಿದ್ದು, ಬಿಳಿ ರಕ್ತ ಕಣಗಳಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.