ETV Bharat / bharat

ಜಮ್ಮುಕಾಶ್ಮೀರದಲ್ಲಿ 200 ದಾಟಿದ ಕೊರೊನಾ ಸೋಂಕಿತರ ಸಂಖ್ಯೆ - ಜಮ್ಮುಕಾಶ್ಮೀರದಲ್ಲಿ ಲಾಕ್​ಡೌನ್​ ಜಾರಿ

ಮಾರ್ಚ್​​ 24-25 ರ ಮಧ್ಯರಾತ್ರಿ ಪ್ರಧಾನಿ ಮೋದಿ ಕೊರೊನಾ ನಿಯಂತ್ರಣಕ್ಕೆ ಇಡೀ ದೇಶಾದ್ಯಂತ ಲಾಕ್​ಡೌನ್​ ಜಾರಿಗೆ ತಂದರೆ, ಕಾಶ್ಮೀರದಲ್ಲಿ ಮಾರ್ಚ್​​​ 22 ರಿಂದಲೇ ಲಾಕ್​​ಡೌನ್​ ಜಾರಿಗೊಂಡಿತ್ತು.

Corona-positive cases soar past 200 mark in JK
ಜಮ್ಮು-ಕಾಶ್ಮೀರದಲ್ಲಿ 200 ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
author img

By

Published : Apr 14, 2020, 1:50 PM IST

ಶ್ರೀನಗರ: ಕೊರೊನಾ ಲಾಕ್​​ಡೌನ್​​ ಕಣಿವೆಯಲ್ಲಿ 27 ದಿನಕ್ಕೆ ಕಾಲಿಟ್ಟಿದ್ದು, ಈವರೆಗೆ ಸುಮಾರು 200 ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಈಗಾಗಲೇ ಕಾಶ್ಮೀರ ಕಣಿವೆಯಲ್ಲಿ ಲಾಕ್​​ಡೌನ್​ ಬಿಗಿಗೊಳಿಸಲಾಗಿದ್ದು, ಜನರ ಓಡಾಟ ಮತ್ತು ಅನಗತ್ಯ ಸಭೆ ಸೇರುವುದರ ಮೇಲೆ ಹೇರಿದ್ದ ನಿರ್ಬಂಧ ಮುಂದುವರಿದಿದೆ. ಕಾಶ್ಮೀರದ ಎಲ್ಲಾ ಮುಖ್ಯ ರಸ್ತೆಗಳನ್ನು ಭದ್ರತಾ ಪಡೆ ಬಂದ್​ ಮಾಡಿದ್ದು, ಜನಸಂಚಾರ ,ವಾಹನ ಸಂಚಾರ ನಿಷೇಧಿಸಲಾಗಿದೆ. ಅಲ್ಲಲ್ಲಿ ಬ್ಯಾರಿಕೇಡ್​ಗಳನ್ನು ಹಾಕಲಾಗಿದೆ. ಪಾಸ್​​ ಇದ್ದವರಿಗೆ ಮಾತ್ರ ತುರ್ತು ಓಡಾಡಕ್ಕೆ ಅವಕಾಶ ನೀಡಲಾಗಿದೆ. ರೆಡ್​ ಅಲರ್ಟ್​​ ಘೋಷಣೆಯಾಗಿರುವ ಏರಿಯಾಗಳಲ್ಲಿ ಲಾಕ್​ಡೌನ್​ ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್​ ಇಲಾಖೆ ಎಚ್ಚರಿಸಿದೆ. ಕಣಿವೆಯಾದ್ಯಂತ ಮಾರುಕಟ್ಟೆಯನ್ನು ಮುಚ್ಚಿಸಲಾಗಿದೆ. ಕೇವಲ ಮೆಡಿಕಲ್​​ ಸ್ಟೋರ್​​ಗಳು ಮತ್ತು ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಎಲ್ಲಾ ಶಾಲಾ-ಕಾಲೇಜುಗಳು ಬೀಗ ಹಾಕಿವೆ. ಇನ್ನು ಪಾರ್ಕ್​​ಗಳು,ರೆಸ್ಟೋರೆಂಟ್​​ಗಳು,ಕ್ಲಬ್​ಗಳು ಮುಂತಾದ ಸಾರ್ವಜನಿಕರು ಸೇರುಸ ಸ್ಥಳಗಳನ್ನು ಪ್ರಧಾನಿ ಮೋದಿ ಲಾಕ್​ಡೌನ್​​ ಆದೇಶ ಹೊರಡಿಸುವ ಒಂದು ವಾರದ ಮುಂಚೆಯೇ ಕ್ಲೋಸ್​​ ಮಾಡಲಾಗಿತ್ತು. ಮಾರ್ಚ್​​ 24-25 ರ ಮಧ್ಯರಾತ್ರಿ ಪ್ರಧಾನಿ ಮೋದಿ ಕೊರೊನಾ ನಿಯಂತ್ರಣಕ್ಕೆ ಇಡೀ ದೇಶಾದ್ಯಂತ ಲಾಕ್​ಡೌನ್​ ಜಾರಿಗೆ ತಂದರೆ, ಕಾಶ್ಮೀರದಲ್ಲಿ ಮಾರ್ಚ್​​​ 22 ರಿಂದಲೇ ಲಾಕ್​​ಡೌನ್​ ಜಾರಿಗೊಂಡಿತ್ತು. ಆದರೆ ಆರೋಗ್ಯ ಸಿಬ್ಬಂದಿ ಸೇರಿದಂತೆ ಅಗತ್ಯ ಸೇವೆಗಳನ್ನು ನಿರ್ಬಂಧ ಮುಕ್ತಗೊಳಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಈವರೆಗೆ 270 ಕೊರೊನಾ ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 222 ಕಾಶ್ಮೀರದಲ್ಲಿ 222 ಹಾಗೂ 48 ಪ್ರಕರಣಗಳು ಜಮ್ಮುವಿನಲ್ಲಿ ಪತ್ತೆಯಾಗಿವೆ. ಒಟ್ಟು ಸೋಂಕಿತರಲ್ಲಿ 16 ಜನ ಸಂಪೂರ್ಣ ಗುಣಮುಖರಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಒಟ್ಟು 53 ಸಾವಿರ ಜನರು ಹೋಮ್​ ಕ್ವಾರಂಟೈನ್​ ಸೇರಿ ಸರ್ಕಾರ ವ್ಯವಸ್ಥೆ ಮಾಡಿದ ಕ್ವಾರಂಟೈನ್​​​ನಲ್ಲಿದ್ದಾರೆ. ಇದರಲ್ಲಿ 8,581 ಕೊರೊನಾ ಶಂಕಿತರಿದ್ದು, ಅವರನ್ನು ​ ಕ್ವಾರಂಟೈನ್​ ಮಾಡಿ ತೀವ್ರ ನಿಗಾ ವಹಿಸಲಾಗಿದೆ. ಹಾಗೂ 354 ಜನ ಆಸ್ಪತ್ರೆಯಲ್ಲಿ ಕ್ವಾರಂಟೈನ್​​ ಆಗಿದ್ದಾರೆ. 250 ಜನರನ್ನು ಆಸ್ಪತ್ರೆಯಲ್ಲಿ ಐಸೋಲೇಶನ್​​ನಲ್ಲಿಡಲಾಗಿದೆ. 30,634 ಜನ ಹೋಮ್​ ಕ್ವಾರಂಟೈನ್​​ನಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.