ETV Bharat / bharat

ಕಾಸರಗೋಡಿನಿಂದ ಮಂಗಳೂರಿಗೆ ದೈನಂದಿನ ಪ್ರಯಾಣಕ್ಕೆ ನಿರ್ಬಂಧ - kasargod coronavirus latest news

ಬಾರ್ಡರ್ ಪಾಸ್ 28 ದಿನಗಳವರೆಗೆ ಕೆಲಸ ಮಾಡುವವರಿಗೆ ಮಾತ್ರ ಲಭ್ಯವಿದೆ. ಪಂಚಾಯತ್​ ಅಧಿಕಾರಿಗಳು ಪೊಲೀಸರ ಸಹಾಯದಿಂದ ರಸ್ತೆಗಳನ್ನು ಬ್ಯಾರಿಕೇಡ್‌ಗಳೊಂದಿಗೆ ಮುಚ್ಚಬೇಕು ಎಂದು ಸೂಚಿಸಲಾಗಿದೆ.

ಕೊರೊನಾ ಭೀತಿ
ಕೊರೊನಾ ಭೀತಿ
author img

By

Published : Jul 6, 2020, 11:58 PM IST

ಕಾಸರಗೋಡು : ಹೆಚ್ಚುತ್ತಿರುವ ಕೊರೊನಾ ಭೀತಿಯಿಂದಾಗಿ ಕಾಸರಗೋಡಿನಿಂದ ಮಂಗಳೂರಿಗೆ ದೈನಂದಿನ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ಸಚಿವ ಇ. ಚಂದ್ರಶೇಖರನ್ ಅವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಕಳೆದ ಕೆಲವು ದಿನಗಳಲ್ಲಿ ಪ್ರತಿನಿತ್ಯ ಮಂಗಳೂರಿಗೆ ಪ್ರಯಾಣಿಸುತ್ತಿದ್ದ 6 ಜನರಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ಅಲ್ಲದೇ 8 ಜನರಿಗೆ ಸೋಂಕಿತರ ಸಂಪರ್ಕದಿಂದಾಗಿ ಕೊರೊನಾ ತಗುಲಿದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳ ಮೂಲಗಳು ತಿಳಿದಿಲ್ಲ. ಆದ್ದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಬಾರ್ಡರ್ ಪಾಸ್ 28 ದಿನಗಳವರೆಗೆ ಕೆಲಸ ಮಾಡುವವರಿಗೆ ಮಾತ್ರ ಲಭ್ಯವಿದೆ. ಪಂಚಾಯತ್​ ಅಧಿಕಾರಿಗಳು ಪೊಲೀಸರ ಸಹಾಯದಿಂದ ರಸ್ತೆಗಳನ್ನು ಬ್ಯಾರಿಕೇಡ್‌ಗಳೊಂದಿಗೆ ಮುಚ್ಚಬೇಕು ಎಂದು ಸೂಚಿಸಲಾಗಿದೆ. ಜುಲೈ 31 ರವರೆಗೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಮುಚ್ಚಲು ತುರ್ತು ಸಭೆಯಲ್ಲಿ ನಿರ್ಧರಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.