ಮಕ್ಕಳ ಸಮಗ್ರ ಅಭಿವೃದ್ಧಿ ಸೇವೆಗಳ ಮೇಲೆ ಕೋವಿಡ್ -19 ಪರಿಣಾಮ:
- ಕೋವಿಡ್ -19 ಬಿಕ್ಕಟ್ಟಿನ ವೇಳೆಯಲ್ಲಿ ಕಾಲಕಾಲಕ್ಕೆ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಅನ್ವಯ ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡಲಾಯಿತು. ಅದರಂತೆ, ಆಹಾರ ಪದಾರ್ಥಗಳ ವಿತರಣೆ ಮತ್ತು ಪೌಷ್ಠಿಕಾಂಶ ವೃದ್ಧಿಗೆ ಅಂಗನವಾಡಿ ಕಾರ್ಯಕರ್ತರು (ಎಡಬ್ಲ್ಯೂಡಬ್ಲ್ಯೂ) 15 ದಿನಗಳಿಗೊಮ್ಮೆ ಫಲಾನುಭವಿಗಳಾದ ಮಕ್ಕಳು, ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರ ಮನೆ ಬಾಗಿಲಿಗೆ ತೆರಳಿ ಆಹಾರ ಪದಾರ್ಥಗಳನ್ನು ನೀಡಿದರು.
- ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರು ಕೋವಿಡ್-19 ಜಾಗೃತಿಯಲ್ಲಿ ತೊಡಗಿದ್ದರು ಮತ್ತು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಸರಿಯಾದ ನೈರ್ಮಲ್ಯ ಮತ್ತು ಆರೋಗ್ಯ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿಗಳನ್ನು ನಿರ್ದಿಷ್ಟವಾಗಿ ಅವರಿಗೂ ವಹಿಸಲಾಗಿತ್ತು. ಮನೆ-ಮನೆಗೂ ತೆರಳಿ ವೈರಸ್ ಕುರಿತು ಜಾಗೃತಿ ಮೂಡಿಸುತ್ತಾ, ಸಮುದಾಯಕ್ಕೆ ಕೊರೊನಾ ವೈರಸ್ ಹರಡದ ರೀತಿ ಎಚ್ಚರಿಕೆ ವಹಿಸಿದ್ರು.
- 2014 - 2020 ರ ನಡುವೆ ಅಂಗನವಾಡಿ ಸೇವಾ ಯೋಜನೆಯಡಿ ಮಕ್ಕಳು (6 ತಿಂಗಳು - 6 ವರ್ಷ) ಮತ್ತು ಗರ್ಭಿಣಿಯರು ಹಾಗೂ ಬಾಣಂತಿಯರು ಸೇರಿದಂತೆ ಫಲಾನುಭವಿಗಳ ವರ್ಷವಾರು ವಿವರಗಳನ್ನು ದಾಖಲು ಮಾಡಲಾಗಿದೆ. ಈ ಕುರಿತು ಡಿಜಿಟಲ್ ಡೇಟಾ ಲಭ್ಯವಿದೆ.
- ಭಾರತವು ಅಂಗನವಡಿ ನೌಕರರ ಗೌರವಧನವನ್ನು ತಿಂಗಳಿಗೆ 3,000 ರೂಗಳಿಂದ 4,500 ರೂಗಳಿಗೆ ಹೆಚ್ಚಿಸಿದೆ; ಮಿನಿ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುವವರಿಗೆ ತಿಂಗಳಿಗೆ ರೂ. 2,250ರಿಂದ 3,500ರವರೆಗೆ ಮತ್ತು ಎಡಬ್ಲ್ಯೂಹೆಚ್ಗಳ ಗೌರವಧನವನ್ನು ರೂ. 1,500ರಿಂದ ರೂ. 2,250ವರೆಗೆ ಹೆಚ್ಚಿಸಿದೆ.
ಅಂಗನವಾಡಿ ಸೇವೆಗಳ ಎಸ್‌ಎನ್‌ಪಿ ಫಲಾನುಭವಿಗಳ ವರ್ಷವಾರು ವಿವರಗಳು:
ಫಲಾನುಭವಿಗಳ ವರ್ಗಗಳು | 2014 | 2015 | 2016 | 2017 | 2018 | 2019 | 2020 |
ಮಕ್ಕಳು(6 ತಿಂಗಳಿಂದ-6 ವರ್ಷ) | 84940601 | 82899424 | 82878916 | 80073473 | 71941717 | 70374122 | 68630173 |
ಒಟ್ಟು ಗರ್ಭಿಣಿಯರು ಮತ್ತು ಬಾಣಂತಿಯರು | 19568216 | 19333605 | 19252368 | 18268917 | 17335216 | 17186549 | 16874975 |
ಒಟ್ಟು ಮಕ್ಕಳು (ಗರ್ಭಿಣಿಯರು ಮತ್ತು ಬಾಣಂತಿಯರು) | 104508817 | 102233029 | 102131284 | 98342390 | 89276933 | 87560671 | 85505148 |
ಈ ಡೇಟಾ ಮಾರ್ಚ್ ಕೊನೆಯವರೆಗಿನದ್ದಾಗಿದೆ.
ಹಣಕಾಸು ಇಲಾಖೆ:
14 ರಾಜ್ಯಗಳಿಗೆ ಕಂದಾಯ ಕೊರತೆ ಅನುದಾನ ರೂ. 6,195 ಕೋಟಿ ರೂ., ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಒಟ್ಟು ಕಂದಾಯ ಕೊರತೆ ಅನುದಾನ ರೂ. 68,145.91 ಕೋಟಿ ರೂ.
- ವೆಚ್ಚ ಇಲಾಖೆ, ಹಣಕಾಸು ಸಚಿವಾಲಯವು ಮಂತ್ಲಿ ಪೋಸ್ಟ್ ಡಿವಲ್ಯೂಷನ್ ರೆವಿನ್ಯೂ ಡಿಫಿಸಿಟ್ (ಪಿಡಿಆರ್ಡಿ) ಅನುದಾನವನ್ನು ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ನೀಡಿದೆ. ಇದು ರಾಜ್ಯಗಳಿಗೆ ಬಿಡುಗಡೆಯಾದ ಪಿಡಿಆರ್ಡಿ ಅನುದಾನದ 11ನೇ ಕಂತು ಆಗಿದೆ.
- ಇಲ್ಲಿಯವರೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ. 68,145.91 ಕೋಟಿ ರೂ.ಗಳನ್ನು ಅರ್ಹ ರಾಜ್ಯಗಳಿಗೆ ಪೋಸ್ಟ್ ಡಿವಲ್ಯೂಷನ್ ರೆವಿನ್ಯೂ ಡಿಫಿಸಿಟ್ ಅನುದಾನವಾಗಿ ಬಿಡುಗಡೆ ಮಾಡಲಾಗಿದೆ. ಈ ತಿಂಗಳು ಬಿಡುಗಡೆಯಾದ ಅನುದಾನದ ರಾಜ್ಯವಾರು ವಿವರಗಳು ಮತ್ತು 2020-21ರಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಒಟ್ಟು ಪೋಸ್ಟ್ ಡಿವಲ್ಯೂಷನ್ ರೆವಿನ್ಯೂ ಡಿಫಿಸಿಟ್ ಅನುದಾನವನ್ನು ಇದರಲ್ಲಿ ಸೇರಿಸಲಾಗಿದೆ.
- ಸಂವಿಧಾನದ 275ನೇ ವಿಧಿ ಅಡಿಯಲ್ಲಿ ರಾಜ್ಯಗಳಿಗೆ ಪೋಸ್ಟ್ ಡಿವಲ್ಯೂಷನ್ ರೆವಿನ್ಯೂ ಡಿಫಿಸಿಟ್ ಅನುದಾನವನ್ನು ನೀಡಲಾಗುತ್ತದೆ. 15ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ರಾಜ್ಯಗಳ ಆದಾಯ ಖಾತೆಗಳಲ್ಲಿನ ಅಂತರವನ್ನು ಸರಿದೂಗಿಸಲು ಪಿಡಿಆರ್ಡಿ ಅನುದಾನವನ್ನು ಮಾಸಿಕ ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. 15ನೇ ಹಣಕಾಸು ಆಯೋಗವು ಒಟ್ಟು 14 ರಾಜ್ಯಗಳಿಗೆ ಪಿಡಿಆರ್ಡಿ ಅನುದಾನ ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿದೆ.
- 2020-21ರ ಆರ್ಥಿಕ ವರ್ಷವನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಆದಾಯ ಮತ್ತು ವೆಚ್ಚಗಳ ಮೌಲ್ಯಮಾಪನದ ನಡುವಿನ ಅಂತರವನ್ನು ಲೆಕ್ಕಹಾಕಿ ಈ ಅನುದಾನವನ್ನು ಸ್ವೀಕರಿಸಲು ರಾಜ್ಯಗಳ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು 15 ಹಣಕಾಸು ಆಯೋಗವು ನಿರ್ಧರಿಸಿದೆ. ಆ ಪ್ರಕಾರ 14 ರಾಜ್ಯಗಳಿಗೆ ಒಟ್ಟು ರೂ. ಮಂತ್ಲಿ ಪೋಸ್ಟ್ ಡಿವಲ್ಯೂಷನ್ ರೆವಿನ್ಯೂ ಡಿಫಿಸಿಟ್ ಒಟ್ಟು ಅಂದಾಜು ರೂ. 74,341 ಕೋಟಿ ಹಣವನ್ನು 2020-21ರಲ್ಲಿ ಅನುದಾನ ನೀಡುವಂತೆ ತಿಳಿಸಿದೆ. ಈ ಮೊದಲು ರೂ. 68,145.91 ಕೋಟಿ(91.66% ) ಅನುದಾನವನ್ನು ಈಗಾಗಲೇ ರಾಜ್ಯಗಳಿಗೆ ನೀಡಲಾಗಿದೆ.
- ಪಿಡಿಆರ್ಡಿ ಅನುದಾನಕ್ಕೆ 15 ಹಣಕಾಸು ಆಯೋಗ ಶಿಫಾರಸು ಮಾಡಿದ 14 ರಾಜ್ಯಗಳೆಂದರೆ: ಆಂಧ್ರ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ್, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರ ,ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳ.
ರಾಜ್ಯವಾರು ಪಿಡಿಆರ್ಡಿ ಬಿಡುಗಡೆ (ಕೋಟಿ ರೂ.ಗಳಲ್ಲಿ)
ಸಂಖ್ಯೆ | ರಾಜ್ಯಗಳ ಹೆಸರು | ಅನುದಾನ ಬಿಡುಗಡೆ 2021 (11ನೇ ಕಂತಿನಲ್ಲಿ) | 2020-21 ರಲ್ಲಿ ಬಿಡುಗಡೆಯಾದ ಒಟ್ಟು ಅನುದಾನದ ಹಣ |
1 | ಆಂಧ್ರಪ್ರದೇಶ | 491.42 | 5405.59 |
2 | ಅಸ್ಸಾಂ | 631.58 | 6947.41 |
3 | ಹಿಮಾಚಲ ಪ್ರದೇಶ | 952.58 | 10478.41 |
4 | ಕೇರಳ | 1276.92 | 14046.09 |
5 | ಮಣಿಪುರ | 235.33 | 2588.66 |
6 | ಮೇಘಾಲಯ | 40.92 | 450.09 |
7 | ಮಿಜೋರಾಂ | 118.50 | 1303.50 |
8 | ನಾಗಾಲ್ಯಾಂಡ್ | 326.42 | 3590.59 |
9 | ಪಂಜಾಬ್ | 638.25 | 7020.75 |
10 | ಸಿಕ್ಕಿಂ | 37.33 | 410.66 |
11 | ತಮಿಳುನಾಡು | 335.42 | 3689.59 |
12 | ತ್ರಿಪುರ | 269.67 | 2966.3 |
13 | ಉತ್ತರಾಖಂಡ್ | 423.00 | 4653.00 |
14 | ಪಶ್ಚಿಮ ಬಂಗಾಳ | 417.75 | 4595.25 |
ಒಟ್ಟು | 6195.08 | 68145.91 |
ದೇಶದ ಒಟ್ಟು ಸಂಗ್ರಹಣಾ ಸಾಮರ್ಥ್ಯ 529.59 LMT( ಗೋಧಿ+ಅಕ್ಕಿ)ಭಾರತದ ಆಹಾರ ನಿಗಮದ ಒಟ್ಟು ಆಹಾರ ಸಂಗ್ರಹ ಸಾಮರ್ಥ್ಯ (FCI) ಮತ್ತು ರಾಜ್ಯಗಳ ಏಜೆನ್ಸಿಗಳು ( ಒಡೆತನ ಮತ್ತು ಬಾಡಿಗೆ ಸಾಮರ್ಥ್ಯ ಎರಡೂ) 819.19 LMT ( 31.12.2020 ರಲ್ಲಿ)
ಕಳೆದ ಐದು ವರ್ಷಗಳಲ್ಲಿ ಮತ್ತು ಪ್ರಸಕ್ತ ವರ್ಷದಲ್ಲಿ ದೇಶದಲ್ಲಿ ಅಕ್ಕಿ ಮತ್ತು ಗೋಧಿಯ ಒಟ್ಟು ಉತ್ಪಾದನೆ ಹೀಗಿದೆ:
ಖಾರಿಫ್ ಮರುಕಟ್ಟೆ ಅವಧಿ (KMS) ಮತ್ತು ರಾಬಿ ಅವಧಿ(RMS) | ಗೋಧಿ | ಅಕ್ಕಿ |
2015-16 | 865.26 | 1044.07 |
2016-17 | 922.88 | 1097.00 |
2017-18 | 985.12 | 1115.20 |
2018-19 | 971.10 | 1164.20 |
2019-20 | 1035.96 | 1184.25 |
2020-21 | 1075.92 | 1023.63* |
ಕೃಷಿ ಸಚಿವಾಲಯವು ಪ್ರಕಟಿಸಿದ 2020-21ರ ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯ ಮೊದಲ ಮುಂಗಡ ಅಂದಾಜಿನ ಪ್ರಕಾರ ನಮೂದಿಸಲಾಗಿದೆ.