ETV Bharat / bharat

ಬದುಕು ಸುಂದರ ಕವಿತೆ ಮಾಡಲು ಹೊರಟ ಕೊರೊನಾ !

ನಾವು ಅನುಭವಿಸುತ್ತಿರುವ ಪ್ರಸ್ತುತ ಲಾಕ್‌ಡೌನ್ ಅವಧಿಗೆ ಧನ್ಯವಾದಗಳು.. ಆ ಎರಡೂ ಅವಧಿಗಳು ಪೂರ್ಣಗೊಂಡಿವೆ ಮತ್ತು ದಿಗ್ಬಂಧನ ಇನ್ನೂ ಮುಂದುವರೆದಿದೆ. ಈಗಾಗಲೇ ನಮ್ಮ ಮುಖಗಳು ತಾಜಾ ಆಗಿವೆ.

life style
ಜೀವನ ಶೈಲಿ
author img

By

Published : May 8, 2020, 3:52 PM IST

ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕ ಎಂದು ಇದ್ದ ಕಾಲ ಈಗ ಬದಲಾಗಿ ಬಿಡುವಂತೆ ತೋರುತ್ತಿದೆ. ಇಡೀ ವಿಶ್ವ ಪ್ರಸ್ತುತ ಎದುರಿಸುತ್ತಿರುವ ಪರಿಸ್ಥಿತಿಯನ್ನು ಇನ್ನು ಮುಂದೆ ‘ ಕೊರೊನಾ ಪೂರ್ವ ’ ಮತ್ತು ‘ ಕೊರೊನಾ ನಂತರ ’ ಎಂಬ ಪರಿಭಾಷೆಯಲ್ಲಿ ಅಳೆಯುವಂತೆ ಆಗಬಹುದು.

ದುರಾದೃಷ್ಟವಶಾತ್, ಇದೇ ವರ್ಷ ಹಣಕಾಸು, ಕೈಗಾರಿಕೆ ಮತ್ತು ಸಾಮಾಜಿಕ ಅಭಿವೃದ್ಧಿ ರೀತಿಯ ವಿವಿಧ ಕ್ಷೇತ್ರಗಳಲ್ಲಿ ಅನೇಕ ಪಲ್ಲಟಗಳು ಮತ್ತು ತಿರುವುಗಳು ಘಟಿಸಿವೆ. ಕೊರೊನಾ ಎಂಬ ಬೀಜ ಯಾವ ಬಗೆಯ ಫಲ ಉತ್ಪಾದಿಸಲಿದೆ ಎಂದು ಕಂಡುಹಿಡಿಯಲು ವಿವಿಧ ಕ್ಷೇತ್ರಗಳ ತಜ್ಞರು ಈಗಾಗಲೇ ತಮ್ಮ ಬುದ್ಧಿಮತ್ತೆಯನ್ನು ಒರೆಗೆ ಹಚ್ಚುತ್ತಿದ್ದಾರೆ.

ತಮ್ಮ ಕ್ಷೇತ್ರಗಳ ಎದುರು ಇರುವ ಭವಿಷ್ಯವನ್ನು ಊಹಿಸಲು ಯತ್ನಿಸುತ್ತ ಇದ್ದಾರೆ, ಉದಾಹರಣೆಗೆ, ಉತ್ಪಾದನಾ ನಿಯಮಗಳು ಮತ್ತು ಔಷಧೀಯ ಅಗತ್ಯಗಳಿಗೆ ಸಹಾಯ ಮಾಡಲು ಜಗತ್ತು ಭಾರತವನ್ನು ಹುಡುಕುತ್ತಿದೆಯೇ ವಿನಃ ಚೀನಾವನ್ನು ಅಲ್ಲ ಎಂದು ತಜ್ಞರು ಲೆಕ್ಕಾಚಾರ ಹಾಕುತ್ತಿದ್ದಾರೆ. ಕೆಲವು ಕೈಗಾರಿಕಾ ಉತ್ಪನ್ನಗಳ ವಿಚಾರದಲ್ಲಿ ಕೂಡ ಈ ಮಾತು ನಿಜ. ನಮ್ಮ ದೇಶ ವಿವಿಧ ಕ್ಷೇತ್ರಗಳಲ್ಲಿ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿರುವುದಕ್ಕೆ ಇಂತಹ ಉದಾಹರಣೆಗಳು ಸಾಕ್ಷಿಯಾಗಿವೆ. ಈಗ ಘಟಿಸುತ್ತಿರುವ ವಿದ್ಯಮಾನ ಇಂಗ್ಲಿಷ್ ನುಡಿಗಟ್ಟಾದ 'ಅವಶ್ಯಕತೆ ಎಲ್ಲಾ ಆವಿಷ್ಕಾರಗಳ ತಾಯಿ' ಎಂಬ ಮಾತನ್ನು ನಾವು ನೆನೆಯುವಂತೆ ಮಾಡಿದೆ. ತಜ್ಞರ ದೊಡ್ಡ ಜವಾಬ್ದಾರಿ ಏನೆಂದರೆ ತಾವು ಮಾರ್ಗಸೂಚಿಗಳು ಮತ್ತು ನಿರ್ದೇಶನಗಳ ನೆರವಿನಿಂದ ಈ ಮೌಲ್ಯಮಾಪನಗಳಿಗೆ ತಕ್ಕಂತೆ ನಡೆದುಕೊಳ್ಳುಬೇಕು ಎಂಬುದಾಗಿದೆ.

ಪ್ರಕೃತಿಗೆ ವಿಮೋಚನೆ

ಹೊಸ ಯುಗ ಪ್ರಾರಂಭ ಆಗಲಿರುವ ಈ ಅವಧಿಯಲ್ಲಿ, ಮನುಷ್ಯನ ಸಾಮಾಜಿಕ ಜೀವನದಲ್ಲಿ ತೀವ್ರ ಬದಲಾವಣೆ ಕಂಡುಬಂದಿದೆ. ಪ್ರಕೃತಿ ಶಕ್ತಿಶಾಲಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಿಸರ್ಗ ಮನುಷ್ಯನ ಚಲನೆಯನ್ನು ಲಾಕ್​ಡೌನ್​ ಮಾಡಿ ಆ ಮೂಲಕ ಆತನ ಬಲವಾದ ಮತ್ತು ವಿಷಕಾರಿ ಹಿಡಿತದಿಂದ ಮುಕ್ತ ಆಗಿದೆ. ಈ ಸಮಯದಲ್ಲಿ ಅದು ಸ್ವತಃ ಶುದ್ಧೀಕರಣಗೊಳ್ಳುವ ಕಾರ್ಯ ಕೈಗೆತ್ತಿಕೊಂಡಿದೆ.

ಎಷ್ಟೆಂದರೂ, ತಾಯಿಯ ಕೋಮಲ ಹೃದಯದಂತೆ ಪ್ರಕೃತಿ ಕರುಣಾಮಯಿ. ಈ ಚಂದದ ಹೃದಯದ ಕಾರಣಕ್ಕೆ, ಭಯಾನಕ ರಾತ್ರಿಯೊಳಕ್ಕೆ ಹಗಲು ಜನರನ್ನು ಎಳೆದೊಯ್ದ ನಂತರವೂ ಪ್ರಕಾಶಮಾನವಾದ ಸೂರ್ಯನ ಬೆಳಕು ಮತ್ತು ಆರೋಗ್ಯ ನಮಗೆ ದೊರೆಯುವಂತಾಗಿದೆ. ಬೆಳಕು ಹರಿದಂತೆ ಆಕಾಶದಲ್ಲಿ ತೇಲುತ್ತಿರುವ ಎಳೆಯ ಮೋಡಗಳಿಂದ ಮುಂಜಾನೆ ಇಬ್ಬನಿ ಕೆಳಗೆ ಇಳಿದು ಮಣ್ಣಿನ ಮೇಲೆ ಹರಡಿಕೊಂಡ ಚಿಗುರಿಗೆ ಹಬ್ಬುತ್ತದೆ. ಈ ಮನೋಹರ ವಿದ್ಯಮಾನವನ್ನು ಕಾವ್ಯಾತ್ಮಕ ಸಾಲುಗಳಲ್ಲಿ ಹಿಡಿದಿಡುವುದು ಮತ್ತು ಬಣ್ಣಿಸುವುದು ಪ್ರಕೃತಿಯನ್ನು ಆರಾಧಿಸುವ ಕವಿಗಳ ಏಕಮಾತ್ರ ಜವಾಬ್ದಾರಿ ಆಗಿದೆ.

ಅಂತೆಯೇ, ಯುಗ- ಯುಗದಲ್ಲಿ ಆಗಿರುವ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಪ್ರತಿಯೊಬ್ಬರ ಹೊಣೆ ಆಗಿದ್ದು ಇದರಿಂದ ಬದಲಾಗುತ್ತಿರುವ ಪೀಳಿಗೆಯನ್ನು ಮತ್ತು ಅದರ ವಿಶಿಷ್ಟ ಧ್ವನಿಯನ್ನು ಊಹಿಸಲು ಸಾಧ್ಯ ಆಗುತ್ತದೆ. ಭವಿಷ್ಯದ ಅಭಿವೃದ್ಧಿ ಮತ್ತು ಅದರ ನಂತರದ ಯೋಜನೆಗಳ ಬಗ್ಗೆ ಸಾಮಾನ್ಯ ಜನರಿಗೆ ಉತ್ತಮ ಸೂಚನೆ ನೀಡುವುದು ಬುದ್ಧಿಜೀವಿಗಳ ಹೊಣೆ. ಪ್ರಸ್ತುತ ಸನ್ನಿವೇಶದಲ್ಲಿ, ಈ ಸೂಚನೆಗಳನ್ನು ಸಾರ್ವಜನಿಕರಿಗೆ ತಿಳಿಸುವುದು ಮಾಧ್ಯಮಗಳ ಮುಖ್ಯ ಜವಾಬ್ದಾರಿ ಆಗಿದೆ.

ಮಹಾನ್ ಕವಿ ಕಾಳೋಜಿ ಅವರ ಮಾತುಗಳು ಹೀಗಿವೆ : “ ರಾತ್ರಿ ಎಂದಿಗೂ ಮುಗಿಯದು ಮತ್ತು ಸೂರ್ಯನ ಬೆಳಕು ಇರದು ಎಂದು ಯೋಚಿಸುವುದು ಹತಾಶೆಯ ಪರಾಕಾಷ್ಠೆ ಎನಿಸುತ್ತದೆ. ಅಂತೆಯೇ, ಸೂರ್ಯನ ಬೆಳಕು ಎಂದಿಗೂ ತೀರಬಾರದು, ಇರುಳು ಬರಬಾರದು ಎಂದು ಯೋಚಿಸುವುದು ದುರಾಶೆಯ ಪರಾಕಾಷ್ಠೆ ಆಗುತ್ತದೆ.”, ಹತಾಶೆ ಅಥವಾ ದುರಾಸೆ ಇಲ್ಲದೆ ಜನರು ವಾಸ್ತವದಲ್ಲಿ ಬದುಕಲು ಮತ್ತು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಲು ಅವಕಾಶ ನೀಡುವುದು ಮಾಧ್ಯಮಗಳ ಜವಾಬ್ದಾರಿ ಆಗಿದೆ. ಅವರಿಗೆ ತಾಂತ್ರಿಕ ಜ್ಞಾನದ ಸಹಾಯದಿಂದ ಬೆಳಕು ಮತ್ತು ಮಾರ್ಗ ತೋರಿಸಬೇಕು - ಹೀಗೆ ಮಾಧ್ಯಮ ಮನುಷ್ಯನನ್ನು ಮುಂದೆ ಕೊಂಡೊಯ್ಯಬೇಕು.

ತಮ್ಮ ಆಸ್ಪತ್ರೆಯಲ್ಲಿ ಕೊರೊನಾ ಅಲ್ಲದ ರೋಗಿಗಳ ಸಂಖ್ಯೆ ಕಡಿಮೆ ಆಗಿರುವುದನ್ನು ಪರಿಶೀಲಿಸಿದ ಪ್ರಮುಖ ವೈದ್ಯರೊಬ್ಬರು, ಜನರು ತಮ್ಮ ಕಾಯಿಲೆಗಳನ್ನು ‘ಖರೀದಿಸುವುದನ್ನು’ ನಿಲ್ಲಿಸಿದ್ದಾರೆ. ಹೀಗಾಗಿ ಆಸ್ಪತ್ರೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ವೈದ್ಯರಿಗೆ ಕೆಲಸ ಕಡಿಮೆ ಆಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಕ್ರಿಯೆ ಮನಬಂದಂತೆ ತಿನ್ನುವ ಮತ್ತು ಕುಡಿಯುವ ಅಜಾಗರೂಕ ಅಭ್ಯಾಸಕ್ಕೆ ಒಗ್ಗಿಕೊಂಡ ಜನರಲ್ಲಿ ಈಗ ಉಂಟಾಗಿರುವ ನಾಟಕೀಯ ಬದಲಾವಣೆಯನ್ನು ಸ್ವತಃ ಬಿಂಬಿಸುತ್ತದೆ, ನಾವು ಮನೆಯನ್ನು ಸ್ವಚ್ಛ ಮಾಡುತ್ತಲೋ, ಅಡುಗೆ ಮಾಡುತ್ತಲೋ, ಆರೋಗ್ಯಕರ ಆಹಾರ ಸೇವಿಸುತ್ತಲೋ ತಾಜಾ ಗಾಳಿ ಉಸಿರಾಡುತ್ತಲೋ ಹಲವು ದಿನಗಳನ್ನು ಮನೆಯೊಳಗೇ ಕಳೆದಿದ್ದೇವೆ.

ಒಮ್ಮೆಲೇ ನಿತ್ಯ ಜಂಜಡದ ಬದುಕು ದೂರವಾಗಿ ನಮ್ಮ ಪೂರ್ವಿಕರು ಬದುಕುತ್ತಿದ್ದ ರೀತಿಯಲ್ಲೇ ಜೀವನ ಮಾಡುತ್ತಿದ್ದೇವೆ. ಆದ್ದರಿಂದ ನಾವು ನಮ್ಮ ಹಿಂದಿನವರಂತೆಯೇ ಆರೋಗ್ಯವಂತರು. ಸಮಯ ಇರಲಿ ಅಥವಾ ಇಲ್ಲದಿರಲಿ ಬೇಸರ ದೂಡಲೆಂದು ನಮ್ಮಲ್ಲಿ ಕೆಲವರು ಪ್ರಾಣಾಯಾಮದ ರೀತಿಯ ಆಸನಗಳು ಸೇರಿದಂತೆ ವಿವಿಧ ವ್ಯಾಯಾಮಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಶ್ವಾಸಕೋಶ ಆರೋಗ್ಯವಾಗಿಯೂ ಮತ್ತು ಸಮೃದ್ಧವಾಗಿಯೂ ಇರಲು ಸಾಧ್ಯವಾಗಿದೆ. ಜನರ ಆರೋಗ್ಯಕ್ಕೆ ಸಂಬಂಧಿಸಿದಂತೆ ತಜ್ಞ ವೈದ್ಯರು ನೀಡಿದ ಮೇಲಿನ ಹೇಳಿಕೆ ಕೂಡ ಅಂತಹ ಘಟ್ಟಕ್ಕೆ ಸಂಬಂಧಿಸಿದ್ದಾಗಿದೆ. ಇಲ್ಲೊಂದು ಸತ್ಯ ಹುದುಗಿದೆ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ನಾವು ಅನುಭವಿಸಿದ್ದಕ್ಕೆ ಹೋಲಿಸಿದರೆ ಈ ವರ್ಷ ನಾವು ಬೇಸಿಗೆಯ ಬೇಗೆಯಿಂದ ಸ್ವಲ್ಪ ನಿರಾಳ ಆಗಿದ್ದೇವೆ. ಪ್ರಕೃತಿ ಮಾತೆ ಸ್ವಯಂ ಚಿಕಿತ್ಸೆ ಪಡೆಯುತ್ತಿರುವ ಪರಿಣಾಮ ನಮ್ಮ ಆಂತರಿಕ ಶಕ್ತಿ ಅಧಿಕಗೊಂಡಿದೆ ಎಂದು ಹೇಳುತ್ತಿದ್ದಾರೆ ವೈದ್ಯರು, ಎಲ್ಲದಕ್ಕಿಂತ ಹೆಚ್ಚಾಗಿ ಬಿಸಿಲಿನಿಂದ ಒಳಬಂದ ಕೂಡಲೇ ಫ್ರಿಜ್ ತೆರೆದು ತಣ್ಣನೆ ನೀರು ಕುಡಿಯುವ ಅಭ್ಯಾಸವನ್ನು ನಾವು ತೊರೆದಿದ್ದೇವೆ ಅಲ್ಲವೇ?

ವಯಸ್ಕರು ಸಾಮಾನ್ಯವಾಗಿ 21 ದಿನಗಳ ತನಕ ಅಂತಹ ಉತ್ತಮ ಅಭ್ಯಾಸಗಳನ್ನು ಅನುಸರಿಸಿದರೆ, ದೇಹವು ಅದಕ್ಕೆ ಒಗ್ಗಿಕೊಳ್ಳುತ್ತದೆ ಮತ್ತು ಕೆಟ್ಟ ಚಟಗಳನ್ನು ತೊಡೆದುಹಾಕಲು 40 ದಿನಗಳು ಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ನಾವು ಅನುಭವಿಸುತ್ತಿರುವ ಪ್ರಸ್ತುತ ಲಾಕ್‌ಡೌನ್ ಅವಧಿಗೆ ಧನ್ಯವಾದಗಳು, ಆ ಎರಡೂ ಅವಧಿಗಳು ಪೂರ್ಣಗೊಂಡಿವೆ ಮತ್ತು ದಿಗ್ಬಂಧನ ಇನ್ನೂ ಮುಂದುವರಿದಿದೆ. ಈಗಾಗಲೇ ನಮ್ಮ ಮುಖಗಳು ತಾಜಾ ಆಗಿವೆ. ಆದ್ದರಿಂದ ನಾವು ದಿಗ್ಬಂಧನ ಮತ್ತು ವಿಶ್ರಾಂತಿ ಮರೆತು ಸ್ವಚ್ಛತೆ ಮತ್ತು ದೈಹಿಕ ವ್ಯಾಯಾಮವನ್ನು ನಿತ್ಯ ಜೀವನದ ಭಾಗ ಮಾಡಿಕೊಂಡರೆ, ಈ 21 ದಿನ ಮತ್ತು 40 ದಿನಗಳ ತಪಸ್ಸು ನಮಗೆ ಅದ್ಭುತ ಜೀವನವನ್ನು ರೂಪಿಸಿಕೊಳ್ಳಲು ಖಂಡಿತ ಸಾಕಷ್ಟು ಸಹಕಾರಿ ಆಗಲಿದೆ. ಅಂತೆಯೇ ಜೀವಿತಾವಧಿ ಕೂಡ ತಪ್ಪದೆ ವೃದ್ಧಿ ಆಗಲಿದೆ.

ಭಾರತದ ನೈಜ ಪ್ರಜೆಗಳಾಗಿ

ಮಾಲಿನ್ಯ ರಹಿತ ನದಿಗಳು ಒಂದೆಡೆ ನಮಗೆ ಶುದ್ಧ ನೀರು ಒದಗಿಸುತ್ತಿದ್ದರೆ, ನೈಸರ್ಗದತ್ತವಾಗಿ ಶುಭ್ರಗೊಂಡ ಮತ್ತು ಮಲಿನಗೊಳ್ಳದ ಮೋಡಗಳಿಂದ ದೊರೆಯಲಿರುವ ಮಳೆ ನಮಗೆ ಸಂತಸ ನೀಡಲು ಸಿದ್ಧವಾಗಿದೆ. ಆಮ್ಲಜನಕದಿಂದ ತುಂಬಿದ ಗಾಳಿ ನಮ್ಮ ಶ್ವಾಸಕೋಶಕ್ಕೆ ವಿಮೆಯ ರೂಪದಲ್ಲಿ ಒದಗಿ ಬಂದಿದೆ. ಮಾನವ ಜೀವನದ ಭರವಸೆಯನ್ನು ಮರಳಿ ಪಡೆಯಲು ಶಾಂತ ಸ್ವಭಾವ ಯತ್ನಿಸುತ್ತಿದೆ. ' ಸರ್ವೇಜನಾಃ ಸುಖಿನೋ ಭವಂತು ' ಅರ್ಥಾತ್ ' ಇಡೀ ಭೂಮಿಯ ಜನರೆಲ್ಲಾ ಸುಖವಾಗಿ ಬದುಕಲಿ ’ ಎಂಬ ಮಾತಿನಲ್ಲಿ ಬಲವಾದ ನಂಬಿಕೆ ಇಡುವುದರೊಂದಿಗೆ ' ನಾವು ಒಳ್ಳೆಯವರಾಗಲು ಬಯಸಿದರೆ, ನಮ್ಮ ಸುತ್ತಮುತ್ತಲಿನವರಿಗೆ ನಾವು ಒಳ್ಳೆಯವರಾಗಿ ಇರಬೇಕು ' ಎಂಬ ಶಾಶ್ವತ ಸತ್ಯ ಮನುಷ್ಯನನ್ನು ಸಾರ್ವತ್ರಿಕ ಜೀವಿಯನ್ನಾಗಿ ಪರಿವರ್ತನೆ ಮಾಡುತ್ತಿದೆ. 'ನಾನು, ನನಗೆ ಮತ್ತು ನಾನೇ' ಎಂದು ನಮ್ಮ ಬಗ್ಗೆ ಯೋಚಿಸುವ ಹಂತದಿಂದ ನಾವು ಏಕತೆಯ ಈ ಸಾರ್ವತ್ರಿಕ ಅಸ್ತಿತ್ವಕ್ಕೆ ನಮ್ಮನ್ನು ಬದಲಿಸಿಕೊಳ್ಳುತ್ತಿದ್ದೇವೆ. ನಾವು ಭಾರತದ ಮೂಲ ನಾಗರಿಕರಾಗುತ್ತಿದ್ದೇವೆ, ಭಾರತದ ಮಹಾನ್ ಋಷಿಮುನಿಗಳು ತಮ್ಮ ಅಸ್ತಿತ್ವದ ಮೂಲಕ ಭಾರತೀಯರನ್ನು ಮಹಾ ಭಾರತೀಯರನ್ನಾಗಿ ಪರಿವರ್ತನೆ ಮಾಡಿದ್ದಾರೆ. ಅಂತಹ ಮಹಾನ್ ದಾರ್ಶನಿಕರಿಗೆ ಸರಿಯಾದ ಉತ್ತರಾಧಿಕಾರಿಗಳು ಎಂದು ನಾವು ಈಗ ಸಾಬೀತುಪಡಿಸಬಹುದಾಗಿದೆ. ಒಂದು ತಂಡವಾಗಿ ಮಾಡಲಾಗುತ್ತಿರುವ ಈ ವೈಯಕ್ತಿಕ ಬೆಳವಣಿಗೆಯಿಂದಾಗಿ, ಜಗತ್ತು ಭಾರತವನ್ನು ಎದುರು ನೋಡುವಂತೆ ಆಗಿದೆ. ಪ್ರಸ್ತುತ ಮತ್ತು ಮುಂದಿನ ದಿನಗಳಲ್ಲಿ ತಿರುವು ಮುರುವಾದ ಘಟ್ಟಗಳನ್ನು ಹುದುಗಿಸಿಕೊಳ್ಳುವ ಮೂಲಕ ನಾವು ಒಟ್ಟಿಗೆ ನೇಯ್ಗೆ ಮಾಡಲು ಹೊರಟಿರುವ ಈ ಹೊಸ ಯುಗ, ಸುಂದರ ಕವಿತೆಯ ರೀತಿಯಲ್ಲಿ ಕಾಯುತ್ತಿದೆ.

- ವೈ. ಶ್ರೀಲಕ್ಷ್ಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.