ಫಿರೋಜಾಬಾದ್(ಯುಪಿ): ಇಂಧನ ಇಲಾಖೆ ಅಧಿಕಾರಿಗೆ ಹೆಲ್ಮೆಟ್ ಇಲ್ಲದ ಪ್ರಯಾಣಕ್ಕೆ ದಂಡ ವಿಧಿಸಿದ ಕಾರಣಕ್ಕೆ ಆ ಅಧಿಕಾರಿ ವಿಶೇಷ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಂಡ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ನಡೆದಿದೆ.
ಇಂಧನ ಇಲಾಖಾಧಿಕಾರಿ ಶ್ರೀನಿವಾಸ್ ಮಂಗಳವಾರದಂದು ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ನಡೆಸಿ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದರು. ನಿಯಮ ಉಲ್ಲಂಘನೆಯಲ್ಲಿ ಪೊಲೀಸರು ₹ 500ರೂ. ದಂಡ ವಿಧಿಸಿದ್ದರು. ಆತ ಪರಿಪರಿಯಾಗಿ ಬೇಡಿಕೊಂಡರೂ ಕೇಳದ ಪೊಲೀಸರು ಆತನಿಂದ ದಂಡ ವಸೂಲು ಮಾಡಿಕೊಂಡಿದ್ದರು.
ಇದರಿಂದ ಕೋಪಗೊಂಡ ಶ್ರೀನಿವಾಸ್ ಅದೇ ದಿನ ಸಂಜೆ ದಂಡ ವಿಧಿಸಿದ ಪೊಲೀಸ್ ಸ್ಟೇಷನ್ನ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾನೆ. ಇದಕ್ಕೆ ಆತ ಸೂಕ್ತ ಕಾರಣವನ್ನೂ ಒದಗಿಸಿದ್ದಾನೆ.
ಪೊಲೀಸ್ ಸ್ಟೇಷನ್ನ ವಿದ್ಯುತ್ ಬಿಲ್ ಆರು ಲಕ್ಷ ದಾಟಿದ್ದರೂ ಪಾವತಿ ಮಾಡಿರಲಿಲ್ಲ. ಹಲವಾರು ಬಾರಿ ನೋಟಿಸ್ ಕಳುಹಿಸಿದರೂ ಪ್ರಯೋಜನವಾಗಿಲ್ಲ, ಹೀಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ ಎಂದು ಶ್ರೀನಿವಾಸ್ ಕಾರಣ ನೀಡಿದ್ದಾರೆ.