ETV Bharat / bharat

ಮಹಿಳೆಯರಿಗೆ ಕಿರುಕುಳ ಆರೋಪ:ಪೊಲೀಸ್ ಸಬ್ ಇನ್ಸ್​​ಪೆಕ್ಟರ್ ಬಂಧನ - ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಟ್ರಾಫಿಕ್​ ಎಸ್​ಐ ಬಂಧನ

ಮಹಿಳೆಯರಿಗೆ ಹಾಗೂ ಅಪ್ರಾಪ್ತೆಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದ ಆರೋಪದಡಿ ದ್ವಾರಕಾ ಪೊಲೀಸರು ಸಬ್​ ಇನ್ಸ್​​ಪೆಕ್ಟರ್​​ ಒಬ್ಬರನ್ನು ಬಂಧಿಸಿದ್ದು, ಪೋಕ್ಸೊ ಕಾಯ್ದೆಯಡಿ ಸೇರಿ ಒಟ್ಟು ಈತನ ಮೇಲೆ 4 ವಿವಿಧ ಕೇಸ್​ಗಳು ದಾಖಲಾಗಿವೆ ಎಂದು ದೆಹಲಿ ಪೋಲಿಸರು ತಿಳಿಸಿದ್ದಾರೆ.

dwarka
ಪೊಲೀಸ್​ ಇನ್ಸ್​​ಪೆಕ್ಟರ್ ಬಂಧನ
author img

By

Published : Oct 26, 2020, 1:40 PM IST

ನವದೆಹಲಿ:ಮಹಿಳೆಯರಿಗೆ ಹಾಗೂ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಆರೋಪದಡಿ ದ್ವಾರಕಾ ಪೊಲೀಸರು, ಸಬ್​ ಇನ್ಸ್​​ಪೆಕ್ಟರ್​​ ಒಬ್ಬರನ್ನು ಬಂಧಿಸಿದ್ದು, ಪೋಕ್ಸೊ ಕಾಯ್ದೆಯಡಿ ಸೇರಿ ಒಟ್ಟು ಈತನ ಮೇಲೆ 4 ವಿವಿಧ ಕೇಸ್​ಗಳು ದಾಖಲಾಗಿವೆ ಎಂದು ದೆಹಲಿ ಪೋಲಿಸರು ತಿಳಿಸಿದ್ದಾರೆ.

ಟ್ರಾಫಿಕ್​ ಸಬ್ ಇನ್ಸ್‌ಪೆಕ್ಟರ್‌ ಪುನೀತ್​ ಗ್ರೇವಾಲ್​ ಕಿರುಕುಳ ನೀಡುತ್ತಿದ್ದ ಆರೋಪಿಯಾಗಿದ್ದು, ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ದ್ವಾರಕಾ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಸರಣಿ ದೂರುಗಳು ದಾಖಲಿಸಲಾಗಿತ್ತು. ದ ಆರೋಪಿ ವಿರುದ್ಧ ಎಫ್​ಐಆರ್​ ಕೂದ ದಾಖಲಾಗಿತ್ತು. ನಂತರ ಆ ಪ್ರದೇಶದ ಕೆಲವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದು ಸಬ್​ ಇನ್ಸ್​ಪೆಕ್ಟರ್​​ ಪುನೀತ್​ ಗ್ರೇವಾಲ್ ಎಂದು ತಿಳಿದು ಬಂತು. ಪುನೀತ್​ ಗ್ರೇವಾಲ್ ವಿರುದ್ಧ ಒಟ್ಟು 4 ಪ್ರಕರಣಗಳು ದಾಖಲಾಗಿವೆ. ಸೆ.354ಡಿ,ಐಪಿಸಿ ಸೆಕ್ಷನ್​ 354 ರ ಅಡಿ ಕೇಸ್​​ ದಾಖಲಿಸಲಾಗಿದೆ ಎಂದು ಎಂದು ದೆಹಲಿ ಪೊಲೀಸ್​ ಮೂಲಗಳು ತಿಳಿಸಿವೆ.

ಅಕ್ಟೋಬರ್​ 17 ರಂದು ಸಂತ್ರಸ್ತ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಎಸ್​ಐ ಕಿರುಕುಳದ ವಿರುದ್ಧ ವಿಡಿಯೋ ಮಾಡಿ ಅಪ್​ಲೋಡ್​ ಮಾಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.