ನವದೆಹಲಿ: ಪೌರತ್ವ ಮಸೂದೆ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರವನ್ನು ಟೀಕಿಸಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ನಾಯಕರಾದವರು ಜನಸಾಮಾನ್ಯರನ್ನು ಹಿಂಸಾಚಾರ ಕೃತ್ಯದೆಡೆಗೆ ಕರೆದೊಯ್ಯುವುದಿಲ್ಲ ಎಂದು ಹೇಳಿದ್ದಾರೆ.
-
#WATCH Army Chief Gen Bipin Rawat: Leaders are not those who lead ppl in inappropriate direction. As we are witnessing in large number of universities&colleges,students the way they are leading masses&crowds to carry out arson&violence in cities & towns. This is not leadership. pic.twitter.com/iIM6fwntSC
— ANI (@ANI) December 26, 2019 " class="align-text-top noRightClick twitterSection" data="
">#WATCH Army Chief Gen Bipin Rawat: Leaders are not those who lead ppl in inappropriate direction. As we are witnessing in large number of universities&colleges,students the way they are leading masses&crowds to carry out arson&violence in cities & towns. This is not leadership. pic.twitter.com/iIM6fwntSC
— ANI (@ANI) December 26, 2019#WATCH Army Chief Gen Bipin Rawat: Leaders are not those who lead ppl in inappropriate direction. As we are witnessing in large number of universities&colleges,students the way they are leading masses&crowds to carry out arson&violence in cities & towns. This is not leadership. pic.twitter.com/iIM6fwntSC
— ANI (@ANI) December 26, 2019
ನಾಯಕತ್ವ ಎನ್ನುವುದು ಮುನ್ನಡೆಸುವ ವಿಷಯವಾಗಿದೆ. ನೀವು ಮುಂದೆ ನಡೆದಾಗ ಎಲ್ಲರೂ ನಿಮ್ಮನ್ನ ಅನುಸರಿಸುತ್ತಾರೆ. ಆದರೆ ಜನರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವರೇ ನಾಯಕರಾಗುತ್ತಾರೆ. ಜನರನ್ನ ತಪ್ಪುದಾರಿಯಲ್ಲಿ ಮುನ್ನಡೆಸುವವರು ನಾಯಕರಲ್ಲ ಎಂದು ಬಿಪಿನ್ ರಾವತ್ ಹೇಳಿದ್ದಾರೆ. ವಿಶ್ವವಿದ್ಯಾಲಯ ಮತ್ತು ಕಾಲೇಜು ವಿದ್ಯಾರ್ಥಿಗಳು ನಗರ ಪಟ್ಟಣಗಳಲ್ಲಿ ಬೆಂಕಿ ಹಚ್ಚುವುದು ಮತ್ತು ಹಿಂಸಾಚಾರವನ್ನು ನಡೆಸಲು ಜನಸಮೂಹವನ್ನು ಮುನ್ನಡೆಸುತ್ತಿದ್ದಾರೆ. ಇದು ನಾಯಕತ್ವವಲ್ಲ ಎಂದು ಬಿಪಿನ್ ರಾವತ್ ಬೇಸರ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 31 ರಂದು ನಿವೃತ್ತಿ ಹೊಂದಲಿರುವ ಭೂಸೇನೆ ಮುಖ್ಯಸ್ಥ ಜನರಲ್ ರಾವತ್ ಅವರು ಪೌರತ್ವ ಕಾಯ್ದೆಯ ವಿರುದ್ಧ ನಡೆದ ಪ್ರತಭಟನೆ ಕುರಿತು ಮೊದಲಬಾರಿಗೆ ಪ್ರತಿಕ್ರಿಯೆ ನಿಡಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.
-
Army Chief Bipin Rawat speaking against #CAAProtests is wholly against Constitutional democracy. If Army Chief is allowed to speak on Political issues today, it also permits him to attempt an Army takeover tomorrow!!
— Brijesh Kalappa (@brijeshkalappa) December 26, 2019 " class="align-text-top noRightClick twitterSection" data="
">Army Chief Bipin Rawat speaking against #CAAProtests is wholly against Constitutional democracy. If Army Chief is allowed to speak on Political issues today, it also permits him to attempt an Army takeover tomorrow!!
— Brijesh Kalappa (@brijeshkalappa) December 26, 2019Army Chief Bipin Rawat speaking against #CAAProtests is wholly against Constitutional democracy. If Army Chief is allowed to speak on Political issues today, it also permits him to attempt an Army takeover tomorrow!!
— Brijesh Kalappa (@brijeshkalappa) December 26, 2019
'ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಿಎಎ ಪ್ರತಿಭಟನೆ ವಿರುದ್ಧ ಮಾತನಾಡುವುದು ಸಂಪೂರ್ಣವಾಗಿ ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಇಂದು ರಾಜಕೀಯ ವಿಷಯಗಳ ಕುರಿತು ಮಾತನಾಡಲು ಸೇನಾ ಮುಖ್ಯಸ್ಥರಿಗೆ ಅವಕಾಶ ನೀಡಿದರೆ, ನಾಳೆ ಸೈನ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಲು ಇದು ಅನುಮತಿ ನೀಡುತ್ತದೆ' ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಟ್ವೀಟ್ ಮಾಡಿದ್ದಾರೆ.