ETV Bharat / bharat

ವಿಶೇಷ ಅಂಕಣ: ನಕಲಿ ಬಿತ್ತನೆ ಬೀಜ ದಂಧೆಗೆ ಹಾಕಬೇಕಿದೆ ಕಡಿವಾಣ..! - Control fake seed rackets!

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಇತ್ತೀಚೆಗೆ ಕಲಬೆರಕೆ ಬೀಜ ವ್ಯಾಪಾರಿಗಳು ಅಕ್ಷರಶಃ ರೈತರ ಕೊಲೆಗಾರರು. ಈ ಸಮಾಜ ವಿರೋಧಿ ಶಕ್ತಿಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಜೈಲಿಗೆ ಕಳಿಸಬೇಕು ಎಂದಿದ್ದರು. ಇವರಂತೆಯೇ ಕಳಪೆ ಬೀಜಗಳನ್ನು ರೈತರಿಗೆ ಒದಗಿಸುವ ದಂಧೆಯಲ್ಲಿ ತೊಡಗಿರುವ ಕಂಪನಿಗಳಿಗೆ ಕಡಿವಾಣ ಬೀಳಬೇಕಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

Control fake seed rackets!
ನಕಲಿ ಬೀಜ ದಂಧೆಗೆ ಹಾಕಬೇಕಿದೆ ಕಡಿವಾಣ
author img

By

Published : Jun 4, 2020, 4:44 PM IST

ಹೈದರಾಬಾದ್: ಬಿತ್ತನೆಗಾಗಿ ಮಣ್ಣನ್ನು ಹದ ಮಾಡುವಂತೆ ಮುಂಗಾರಿನ ವರ್ಷಧಾರೆಯು ರೈತರಿಗೆ ಬಿತ್ತನೆಗೆ ಆಹ್ವಾನ ನೀಡುತ್ತದೆ. ಎಂದಿನಂತೆ, ಈ ವರ್ಷ ಕೂಡ, ರೈತರು ತಾವು ಖರೀದಿಸುವ ಬೀಜಗಳ ಗುಣಮಟ್ಟದ ಬಗ್ಗೆ ಚಿಂತಿತರಾಗಿದ್ದಾರೆ. ಗಡುವಿನೊಳಗೆ ಬಿತ್ತನೆ ಪೂರ್ಣ ಮಾಡಬೇಕಾದ ಅನಿವಾರ್ಯತೆ ರೈತರಿಗೆ ಇರುತ್ತದೆ. ಇದರ ಲಾಭ ಪಡೆದು, ಮೋಸಗಾರರು ಮತ್ತೆ ಮಾರುಕಟ್ಟೆಯಲ್ಲಿ ತಮ್ಮ ದುಷ್ಟ ಜಾಲ ವಿಸ್ತರಿಸುತ್ತಿದ್ದಾರೆ.

ಮಂಚಿರ್ಯಾಲ್, ಕಾಗಜ್ ನಗರ ಮತ್ತು ಶಾದ್‌ನಗರದಲ್ಲಿ ನಕಲಿ ಹತ್ತಿ ಬೀಜದ ದಂಧೆ ಬಹಿರಂಗಗೊಂಡ ಮರುದಿನವೇ, ಕರೀಂನಗರದಲ್ಲಿ ಈ ನಾಟಕ ಪುನರಾವರ್ತನೆ ಆಗಿದೆ. ಹೈದರಾಬಾದ್‌ನಿಂದ ಬೇರೆ ಬೇರೆ ಊರುಗಳಿಗೆ ಕಲಬೆರಕೆ ದಾಸ್ತಾನು ಸರಬರಾಜು ಮಾಡುತ್ತಿರುವ ಮಾಹಿತಿ ಪಡೆದ, ಕರೀಂನಗರ ಪೊಲೀಸರು 18 ಕ್ವಿಂಟಾಲ್ ನಕಲಿ ಹತ್ತಿ ಬೀಜಗಳನ್ನು ಪತ್ತೆ ಮಾಡಿದ್ದಾರೆ.

ಕಳೆದ ಜುಲೈನಲ್ಲಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಮೂಲಕ ತೆಲಂಗಾಣದ ವಿವಿಧ ಭಾಗಗಳಿಗೆ ರೈಲುಗಳಲ್ಲಿ ನಕಲಿ ಬೀಜಗಳನ್ನು ಸರಬರಾಜು ಮಾಡಿರುವುದು 14 ಟಾಸ್ಕ್ ಫೋರ್ಸ್ ದಾಳಿಗಳಿಂದ ಬೆಳಕಿಗೆ ಬಂದಿತ್ತು. ಮಹಾರಾಷ್ಟ್ರ. ಗುಂಟೂರು, ಪ್ರಕಾಶಂ, ಖಮ್ಮಂ, ನಲ್ಗೊಂಡ, ವಾರಂಗಲ್ ಹಾಗೂ ಅನಂತಪುರ ಜಿಲ್ಲೆಗಳಲ್ಲಿ ನಕಲಿ ಬೀಜಗಳ ವಿತರಣೆ ಬಗ್ಗೆ ಅನೇಕ ವರ್ಷಗಳಿಂದ ದೂರುಗಳು ಹೆಚ್ಚು ಬರುತ್ತಿವೆ. ಈ ಸಮಸ್ಯೆ ಕೇವಲ ಎರಡು ತೆಲುಗು ರಾಜ್ಯಗಳಿಗೆ ಮಾತ್ರ ಸೀಮಿತ ಆಗಿಲ್ಲ. ಪ್ರತಿ ಕೆಜಿಗೆ ರೂ.125 ರ ಬದಲು 200 ರೂಪಾಯಿಯಷ್ಟು ಅಧಿಕ ಬೆಲೆಗೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಪಂಜಾಬಿನ ರೈತರೊಬ್ಬರು ಲಿಖಿತ ದೂರು ನೀಡಿದ್ದರು.

ಇದರ ಆಧಾರದಲ್ಲಿ ಲೂಧಿಯಾನ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿದಾಗ ಭಾರೀ ಪ್ರಮಾಣದ ನಕಲಿ ಬೀಜಗಳು ಪತ್ತೆ ಆಗಿದ್ದವು. ಕಳೆದ ತಿಂಗಳು ಕರ್ನಾಟಕದ ಧಾರವಾಡ, ಬಳ್ಳಾರಿ ಮತ್ತು ಹಾವೇರಿ ಪ್ರದೇಶಗಳಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಕಲಬೆರಕೆ ಬೀಜಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದು ವಂಚಕರ ದುಷ್ಕೃತ್ಯದ ಜಾಲ ಗಡಿಗಳನ್ನು ಮೀರಿ ವಿವಿಧ ರಾಜ್ಯಗಳಿಗೆ ಹರಡಿಕೊಂಡಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ನಕಲಿ ಬೀಜ ಮಾರಾಟಗಾರರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂಬ ಎಲ್ಲ ಕಾನೂನುಗಳ ಹೊರತಾಗಿಯೂ, ಈ ವಾರ್ಷಿಕ ದುರಂತ ದೇಶದಲ್ಲಿ ಅಬಾಧಿತವಾಗಿ ಪುನರಾವರ್ತನೆ ಆಗುತ್ತಿದೆ!

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಇತ್ತೀಚೆಗೆ, ಕಲಬೆರಕೆ ಬೀಜ ವ್ಯಾಪಾರಿಗಳು ಅಕ್ಷರಶಃ ರೈತರ ಕೊಲೆಗಾರರು. ನಕಲಿ ಬೀಜ ವ್ಯವಹಾರ ಸಂಪೂರ್ಣವಾಗಿ ನಿಷೇಧಿಸಬೇಕು ಎಂಬುದರಲ್ಲಿ ಎರಡನೇ ಮಾತಿಲ್ಲ. ಈ ಸಮಾಜ ವಿರೋಧಿ ಶಕ್ತಿಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಜೈಲಿಗೆ ಕಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು. ವಾಸ್ತವವಾಗಿ ದೇಶದ ಎಲ್ಲೆಡೆ ಉತ್ತಮ ಗುಣಮಟ್ಟದ ಬೀಜದ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಜಾರಿಗೆ ತರುವ ಮತ್ತು ಈಗಾಗಲೇ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಯತ್ನ 1966ರಿಂದಲೂ ನಡೆದಿದೆ.

ಬಲವಾದ ಶಾಸಕಾಂಗ ಕಾಯ್ದೆ ರೂಪಿಸುವ ಗುರಿ ಹೊತ್ತ ಮಸೂದೆ ಕಳೆದ ಹದಿನಾರು ವರ್ಷಗಳಿಂದಲೂ ಪ್ರಸ್ತಾವನೆಯ ಹಂತದಲ್ಲಿಯೇ ಉಳಿದಿದೆ! ದೇಶೀಯವಾಗಿ ಗುಣಮಟ್ಟದ ಬೀಜಗಳನ್ನು ಒದಗಿಸುವ ಬಗ್ಗೆ ಇನ್ನೂ ಯಾವುದೇ ಭರವಸೆ ದೊರೆತಿಲ್ಲ. ರೈತರಿಗೆ ನಷ್ಟ ಆದಾಗ ಅವರಿಗೆ ಪರಿಹಾರ ದೊರೆಯುವ ಖಾತ್ರಿ ಇಲ್ಲ. ಯಾವುದೇ ಮೂಲಸೌಕರ್ಯ ಹೊಂದಿರದೆ ಅಥವಾ ಬೀಜಗಳ ಸಂಶೋಧನೆ ಮತ್ತು ಇತರ ತಾಂತ್ರಿಕ ವಿಷಯಗಳ ಬಗ್ಗೆ ಬೌದ್ಧಿಕ ಹಕ್ಕು ಪಡೆಯದೆ ಅನೇಕ ಮಂದಿ ಕಂಪನಿಗಳನ್ನು ಸ್ಥಾಪಿಸಿ ಬೀಜ ವ್ಯವಹಾರಕ್ಕೆ ಇಳಿಯುತ್ತಿದ್ದಾರೆ.

ಮತ್ತೊಂದೆಡೆ, ತಕ್ಷಣ ಹಣ ಗಳಿಸಬೇಕೆಂಬ ದುರಾಸೆಯ ಮತ್ತು ಜವಾಬ್ದಾರಿ ಇಲ್ಲದ ವ್ಯಾಪಾರಿಗಳು ಕಳಪೆ ಮತ್ತು ನಕಲಿ ಬೀಜಗಳನ್ನು ಉತ್ತಮ ಗುಣಮಟ್ಟದ್ದು ಎಂದು ಮಾರಾಟ ಮಾಡುವ ಮೂಲಕ, ರೈತರಿಗೆ ಮೋಸ ಮಾಡುತ್ತಿದ್ದಾರೆ. ಈ ಮೂಲಕ ರೈತರಿಗೆ ನಷ್ಟ ಉಂಟುಮಾಡುವ ಜೊತಗೆ ಕೃಷಿಗೆ ಕೂಡ ಆಪತ್ತು ತರುತ್ತಿದ್ದಾರೆ. ಬೆಳೆಗಳನ್ನು ನಾಶಪಡಿಸುವ ಮಿಡತೆಗಳನ್ನು ಹಿಮ್ಮೆಟ್ಟಿಸಲು ವಿವಿಧ ರಾಜ್ಯಗಳು ತಯಾರಿ ನಡೆಸುತ್ತಿವೆ. ಆದರೆ ಪ್ರತಿ ವರ್ಷ ನಕಲಿ ಬೀಜಗಳ ವ್ಯವಹಾರದ ರೂಪದಲ್ಲಿ ಉಂಟಾಗುವ ನಷ್ಟ ಮತ್ತು ಅಪಾಯ ಮಿಡತೆ ದಾಳಿಯಿಂದ ಉಂಟಾಗುವ ತೊಂದರೆಗಿಂತಲೂ ಕಡಿಮೆ ಏನಲ್ಲ.

ನಕಲಿ ಬೀಜಗಳನ್ನು ಖರೀದಿಸುವ ರೈತರು ತಮ್ಮ ಹೂಡಿಕೆಗೆ ತಕ್ಕಂತೆ ಇಳುವರಿ ಪಡೆಯದೇ ನಷ್ಟ ಅನುಭವಿಸಿ ಸಾಲದ ಸುಳಿಗೆ ಸಿಲುಕುವ ಜೊತೆಗೆ ಉತ್ಪನ್ನಗಳ ನಷ್ಟದಿಂದಾಗಿ, ದೇಶದ ಆರ್ಥಿಕ ಪ್ರಗತಿ ಮತ್ತು ಆಹಾರ ಸುರಕ್ಷತೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಅಂತಹ ವಿಪತ್ತುಗಳಿಗೆ ಕಾರಣವಾದ ಜನರನ್ನು ಅತ್ಯಂತ ಕ್ರೂರ ಅಪರಾಧಿಗಳು ಎಂದು ಪರಿಗಣಿಸಬೇಕು ಮತ್ತು ಕಠಿಣ ಶಿಕ್ಷೆ ವಿಧಿಸಬೇಕು.

ಕಠಿಣ ಕಾಯ್ದೆ, ನಿಯಮ ಮತ್ತು ನಿಬಂಧನೆಗಳನ್ನು ದೇಶದ ಎಲ್ಲೆಡೆ ಅಂಗೀಕರಿಸಬೇಕು ಮತ್ತು ಜಾರಿಗೆ ತರಬೇಕು. ಇದರಿಂದ ನಕಲಿ ಬೀಜಗಳ ಸೃಷ್ಟಿ ಅಥವಾ ಮಾರಾಟದ ಬಗ್ಗೆ ಆಲೋಚನೆ ಮಾಡಲು ಕೂಡ ಭಯಪಡುವಂತೆ ಆಗಬೇಕು. ರೈತರಿಗೆ ನಷ್ಟ ಉಂಟಾದಲ್ಲಿ, ಬೀಜ ಉತ್ಪಾದಕ ಕಂಪನಿ ಮತ್ತು ಗುಣಮಟ್ಟ ಪ್ರಮಾಣೀಕರಿಸುವ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಮತ್ತು ಅವರಿಂದ ನಷ್ಟ ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭ ಆಗಬೇಕು. ಆಗ ಮಾತ್ರ ಕೃಷಿ ಕ್ಷೇತ್ರದ ವಿಪತ್ತುಗಳು ನಿವಾರಣೆ ಆಗುತ್ತವೆ ಮತ್ತು ಪರಿಸ್ಥಿತಿ ತಹಬಂದಿಗೆ ಬರುತ್ತದೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.