ETV Bharat / bharat

ಮುಂದುವರೆದ ರಾಜಕೀಯ ಹೈಡ್ರಾಮಾ : 22ಕ್ಕೆ ಬಂದು ತಲುಪಿದ ಶಾಸಕರ ರಾಜೀನಾಮೆ

author img

By

Published : Mar 10, 2020, 12:25 PM IST

Updated : Mar 10, 2020, 5:35 PM IST

CONGRESS
ಸಿಂದಿಯಾ ರಾಜೀನಾಮೆ

16:14 March 10

ಕುತೂಹಲ ಘಟ್ಟದತ್ತ ಮಧ್ಯಪ್ರದೇಶದ ರಾಜ್ಯರಾಜಕಾರಣ..!

  • Another Madhya Pradesh Congress MLA, Manoj Choudhary (Hatpipliya constituency in Dewas) has tendered his resignation as member of legislative Assembly. Total Congress MLAs who have resigned are 22 now. https://t.co/8n02rFI2wX

    — ANI (@ANI) March 10, 2020 " class="align-text-top noRightClick twitterSection" data=" ">

ಅಂತಿಮ ಹಂತಕ್ಕೆ ಬಂದು ತಲುಪಿದ ಮಧ್ಯಪ್ರದೇಶದ ರಾಜಕೀಯ ಹೈಡ್ರಾಮಾ

ರಾಜ್ಯ ರಾಜಕಾರಣದಲ್ಲಿ ಮುಂದುವರೆದ ರಾಜೀನಾಮೆ ಪರ್ವ

ಮತ್ತಿಬ್ಬರು ಕಾಂಗ್ರೆಸ್​ ಶಾಸಕರಿಂದ ರಾಜೀನಾಮೆ

ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೈ ಶಾಸಕರು

ಶಾಸಕ ಅದಾಲ್ ಸಿಂಗ್ ಕನ್ಸಾನಾ ಹಾಗೂ ಶಾಸಕ ಮನೋಜ್​ ಚೌದರಿ ಅವರಿಂದ ರಾಜೀನಾಮೆ

22ಕ್ಕೆ ಬಂದು ತಲುಪಿದ ಶಾಸಕರ ರಾಜೀನಾಮೆ ಸಂಖ್ಯೆ 

15:50 March 10

ಶಾಸಕರ ಭೇಟಿಗೆ ಬಣ್ಣ ಬಳಿಯಬೇಡಿ : ಶಿವರಾಜ್​ ಸಿಂಗ್​ ಚೌಹಾಣ್​

ಶಾಸಕರು ಹೋಳಿ ಹಬ್ಬದ ನಿಮಿತ್ತ ನನ್ನನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದರು

ಈ ಭೇಟಿಯಲ್ಲಿ ಯಾವುದೇ ರಾಜಕೀಯವಿಲ್ಲ - ಶಿವರಾಜ್ ಸಿಂಗ್ ಚೌಹಾಣ್

ಶಾಸಕರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ಶಿವರಾಜ್ ಸಿಂಗ್ ಚೌಹಾಣ್

15:41 March 10

ಮಾಜಿ ಸಿಎಂ ನಿವಾಸಕ್ಕೆ ಆಗಮಿಸಿದ ಇಬ್ಬರು ಶಾಸಕರು

  • Madhya Pradesh: SP MLA Rajesh Shukla and BSP MLA Sanjeev Kushwaha arrive at the residence of BJP leader Shivraj Singh Chouhan. pic.twitter.com/YaNT1EJ5Gj

ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿವಾಸಕ್ಕೆ ಆಗಮಿಸಿದ ಕೈ ಶಾಸಕರು

ಶಾಸಕ (ಎಸ್​ಪಿ) ರಾಜೇಶ್ ಶುಕ್ಲಾ ಹಾಗೂ ಶಾಸಕ (ಬಿಎಸ್ಪಿ) ಸಂಜೀವ್ ಕುಶ್ವಾಹ ಭೇಟಿ ಆದ ಶಾಸಕರು

ಶಾಸಕರ ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​  

13:21 March 10

ಮಧ್ಯಪ್ರದೇಶ:6 ಸಚಿವರು ಸೇರಿದಂತೆ 19 ಕಾಂಗ್ರೆಸ್ ಶಾಸಕರ ರಾಜೀನಾಮೆ

MP news
ರಾಜೀನಾಮೆ ನೀಡಿರುವ ಸಚಿವರು ಮತ್ತು ಶಾಸಕರು

ಬೆಂಗಳೂರಿನಲ್ಲಿರುವ ಮಧ್ಯಪ್ರದೇಶದ ಆರು ರಾಜ್ಯ ಸಚಿವರು ಸೇರಿದಂತೆ 19 ಕಾಂಗ್ರೆಸ್ ಶಾಸಕರು ವಿಧಾನಸಭೆಗೆ ರಾಜೀನಾಮೆ ನೀಡಿದ್ದಾರೆ.

13:02 March 10

ಕೆ.ಸಿ.ವೇಣುಗೋಪಾಲ್

12:15 March 10

24 ಶಾಸಕರು ಇಂದೇ ರಾಜೀನಾಮೆ ಸಾಧ್ಯತೆ..!

ನವದೆಹಲಿ: ಮಹತ್ವದ ಬೆಳವಣಿಗೆ ಒಂದರಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಕಾಂಗ್ರೆಸ್​ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ರಾಜೀನಾಮೆ ನೀಡಿದ್ದಾರೆ. ಈ ಸಂಬಂದ ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.  

ಕಾಂಗ್ರೆಸ್ ಯುವ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಪ್ರಧಾನಿ ಮೋದಿ ಹಾಗೂ ಅಮಿತ್​ ಶಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಹಲವು ಅಚ್ಚರಿಗೆ ಕಾರಣವಾಗಿತ್ತು  ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದ ಜ್ಯೋತಿರಾದಿತ್ಯ ಸಿಂದಿಯಾ ಈಗ ಪಿಎಂ ನಿವಾಸದಿಂದ ವಾಪಸ್​ ಆದ ಬಳಿಕ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.  

ಪಕ್ಷದಿಂದಲೇ ಸಿಂದಿಯಾ ಉಚ್ಛಾಟನೆ:

ಇನ್ನೊಂದೆಡೆ ಕಮಲನಾಥ್​ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ ಅತ್ತ ಪಕ್ಷದ ಅಧ್ಯಕ್ಷೆಗೆ ಜ್ಯೋತಿರಾದಿತ್ಯ ಸಿಂದಿಯಾ ರಾಜೀನಾಮೆ ನೀಡುತ್ತಿದ್ದಂತೆ ಅವರನ್ನ ಪಕ್ಷದಿಂದ ಉಚ್ಛಾಟಿಸಲಾಗಿದೆ. 

ಈ ಸಂಬಂಧ ಮಾತನಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ, ಕೆ ಸಿ ವೇಣುಗೋಪಾಲ್​, ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸಿಂದಿಯಾ ಅವರನ್ನ ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಪಕ್ಷದಿಂದ ಉಚ್ಛಾಟನೆ ಮಾಡಲು ಅನುಮತಿ ನೀಡಿದ್ದಾರೆ ಎಂದು ಪ್ರಕಟಿಸಿದರು. 

ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಿದ 19 ಶಾಸಕರು?

ಮಧ್ಯಪ್ರದೇಶ ರಾಜಕೀಯ ಈಗ ದೆಹಲಿ ಅಂಗಳವನ್ನ ತಲುಪಿದೆ. 25 ಕ್ಕೂ ಹೆಚ್ಚು ಶಾಸಕರು ಕಮಲನಾಥ್​ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಹಲವರು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಈ ಮಧ್ಯೆ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಎಲ್ಲ 24 ಶಾಸಕರು ಇಂದೇ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದು ಮೂಲದ ಪ್ರಕಾರ 19 ಶಾಸಕರು ಸ್ಪೀಕರ್​ಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ.  

ಇಂದೇ ಭೋಪಾಲ್​ಗೆ ತೆರಳಿ ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಈ ಸಂಬಂಧ ಶಾಸಕರು ಸ್ಪೀಕರ್​ಗೆ ಮಾಹಿತಿ ನೀಡಿದ್ದಾರೆ.  

ಮತ್ತೊಂದೆಡೆ, ಭೋಪಾಲ್​ ಬಿಜೆಪಿ ಕಚೇರಿಯಲ್ಲಿ ಕಮಲ ನಾಯಕರು ಮೀಟಿಂಗ್​ ನಡೆಸುತ್ತಿದ್ದಾರೆ.  ಸಭೆಯಲ್ಲಿ ಮಾಜಿ ಸಿಎಂ ಶಿವರಾಜ ಸಿಂಗ್​ ಚೌಹಾಣ್​, ವಿಡಿ ಶರ್ಮಾ, ವಿನಯ್​​ ಸಹಸ್ರಬುದ್ಧಿ ಹಾಜರಿದ್ದಾರೆ. ಈ ನಡುವೆ, ಮಧ್ಯಪ್ರದೇಶ ಕಾಂಗ್ರೆಸ್​ ನಾಯಕ ಪಿ.ಸಿ. ಶರ್ಮಾ ಮಾತನಾಡಿ, ನಾವು ನಮ್ಮ ನಾಯಕರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ನಮ್ಮ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಸರ್ಕಾರ ಐದು ವರ್ಷ ಪೂರ್ಣಗೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Last Updated : Mar 10, 2020, 5:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.