ನವದೆಹಲಿ: ಪ್ರಧಾನಿ ಮೋದಿಯ ಆಡಳಿತ ಅವಧಿಯಲ್ಲಿ 3.2 ಕೋಟಿಯಷ್ಟು ಸಾಂದರ್ಭಿಕ ಕಾರ್ಮಿಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದು, ಬಿಜೆಪಿಯ ಈ ಮೂರ್ಖತನದ ವಿರುದ್ಧ ಜನರು ದನಿ ಎತ್ತಿ ಚುನಾವಣೆಯಲ್ಲಿ ಸೋಲಿಸಲಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
2011-12 ಮತ್ತು 2017-18ರ ನಡುವೆ 3.2 ಕೋಟಿಯಷ್ಟು ಸಾಂದರ್ಭಿಕ ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ 3 ಕೋಟಿ ಗ್ರಾಮೀಣ ಭಾಗದವರು ಇದ್ದಾರೆ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್‌ಎಸ್‌ಎಸ್‌ಒ) ಸಮೀಕ್ಷೆಯ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಪ್ರಮುಖ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಅಣಕಿಸಿದ್ದಾರೆ.
ಬಿಜೆಪಿ ಭಾರತೀಯರ ಕೆಲಸವನ್ನು ಕಸಿದುಕೊಂಡಿದೆ. ಮೋದಿ ಆಡಳಿತದಲ್ಲಿ 3.2 ಕೋಟಿಯಷ್ಟು ಸಾಂದರ್ಭಿಕ ಕಾರ್ಮಿಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಅದರಲ್ಲಿ 3 ಕೋಟಿ ಕೃಷಿ ಕಾರ್ಮಿಕರಿದ್ದಾರೆ ಎಂದು ಟ್ವೀಟಿಸಿ ವ್ಯಂಗ್ಯವಾಡಿದ್ದಾರೆ.
ಜೊತೆಗೆ, 4.7 ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇದು ವಾಸ್ತವದ ಸತ್ಯವನ್ನು ಪ್ರಧಾನಿ ಮೋದಿ ಅಡಗಿಸಿಕೊಂಡಿದ್ದಾರೆ. ಭಾರತದ ಜನರ ಈ ವಿಶ್ವಾಸಘಾತಕಕ್ಕೆ ಬಿಜೆಪಿಯನ್ನು ಸೋಲಿಸುತ್ತಾರೆ ಎಂದು ಅಣುಕಿಸಿದ್ದಾರೆ.
ಬುಧವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ಮೋದಿ ನೀತಿಯಿಂದ ಕಳೆದ ವರ್ಷ ಒಂದು ಕೋಟಿ ಉದ್ಯೋಗಗಳು ನಾಶವಾಗಿವೆ. ಇದು ಭಾರತದ ಪ್ರಧಾನಿಯ ಹಾಸ್ಯ ಎಂದಿದ್ದರು.
ಇದನ್ನು ಪ್ರಸ್ತಾಪಿಸಿದ ಸುರ್ಜೆವಾಲಾ, 'ಭಾರತದಲ್ಲಿ ನಿತ್ಯ 450 ಉದ್ಯೋಗಗಳು ಸೃಷ್ಟಿಯಾಗಿದೆ. ಮೋದಿ ನೀತಿಯೂ 2018ರಲ್ಲಿ 1 ಕೋಟಿ ಉದ್ಯೋಗಗಳನ್ನು ನಾಶಪಡಿಸಿದೆ. 2018ರಲ್ಲಿ ನಿತ್ಯ 27,ಸಾವಿರ ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಇದು ಪ್ರಧಾನಿ ಮೋದಿಯ ತಮಾಷೆ' ಎಂದು ಕಾಲೆಳೆದು ಸರಣಿ ಟ್ವೀಟ್ ಮಾಡಿದ್ದಾರೆ.