ನವದೆಹಲಿ: ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ಐಎಸ್ಎಸ್ಎಫ್) ಮಾನ್ಯತೆ ಪಡೆದ ಶಾಟ್‌ಗನ್ ವಿಶ್ವಕಪ್ ಮಾರ್ಚ್ 4ರಿಂದ 13ರವರೆಗೆ ಸೈಪ್ರಸ್‌ನ ನಿಕೋಸಿಯಾದಲ್ಲಿ ನಡೆಯಲಿದ್ದು, ಈ ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳದಿರಲು ನಿರ್ಧರಿಸಿದೆ.
ಚೀನಾದಿಂದ ಆರಂಭಗೊಂಡು ವಿಶ್ವದ ಇತರ ದೇಶಗಳಿಗೂ ಹಬ್ಬುತ್ತಿರುವ ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸೈಪ್ರಸ್‌ನಲ್ಲಿ ನಡೆಯಲಿರುವ ಐಎಸ್‌ಎಸ್ಎಫ್ ಶಾಟ್‌ಗನ್ ವಿಶ್ವಕಪ್‌ನಿಂದ ದೂರವಿರಲು ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್‌ಆರ್‌ಎಐ) ತೀರ್ಮಾನಿಸಿದೆ.
ಕ್ರೀಡಾಪಟುಗಳ ಆರೋಗ್ಯ ಮತ್ತು ಯೋಗಕ್ಷೇಮ ಗಮನದಲ್ಲಿಟ್ಟುಕೊಂಡು ಎನ್‌ಆರ್‌ಎಐ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ. ಇನ್ನು ಭಾರತವು ಮಾರ್ಚ್ 16ರಿಂದ 26 ರವರೆಗೆ ಸಂಯೋಜಿತ ವಿಶ್ವಕಪ್ ಟೂರ್ನಿ ಆಯೋಜಿಸಲಿದೆ.