ನವದೆಹಲಿ: 2020ರಲ್ಲಿ ಚೀನಾಕ್ಕೆ ಸರಕುಗಳ ಜಾಗತಿಕ ರಫ್ತು ಶೇಕಡಾ 46ರಷ್ಟು ಕುಸಿಯಬಹುದು ಎಂದು ಯುಎನ್‌ಸಿಟಿಎಡಿ ಸಂಶೋಧನೆಯೊಂದು ತಿಳಿಸಿದೆ.
ಇಂಧನ ಉತ್ಪನ್ನಗಳು, ಅದಿರುಗಳು ಮತ್ತು ಧಾನ್ಯಗಳಂತಹ ಪ್ರಾಥಮಿಕ ಸರಕುಗಳ ರಫ್ತು ಕಡಿಮೆಯಾಗಬಹುದು. ಆ ಮೂಲಕ ಅವುಗಳನ್ನೇ ಅವಲಂಬಿಸಿರುವ ಆರ್ಥಿಕತೆಗೆ ಸಮಸ್ಯೆಯಾಗಬಹುದು ಎಂದು ಸಂಶೋಧನೆ ತಿಳಿಸಿದೆ.
ಯುಎನ್‌ಸಿಟಿಎಡಿ ದತ್ತಾಂಶದ ಪ್ರಕಾರ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮೂರನೇ ಎರಡರಷ್ಟು ಸರಕು ಅವಲಂಬಿತವಾಗಿದೆ. ಸರಕು ಅವಲಂಬಿತ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಆರ್ಥಿಕತೆ ಮೇಲೆ ಇದು ಪರಿಣಾಮ ಬೀರಲಿದೆ.