ಕೋಲ್ಕತ್ತಾ(ಪಶ್ಚಿಮ ಬಂಗಾಳ): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ ಸಂಬಂಧ ಬಂಗಾಳ ಸರ್ಕಾರ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಕೇಂದ್ರ ಗೃಹ ಸಚಿವಾಲಯದ ಮುಂದೆ ಹಾಜರಾಗಲು ಕಳುಹಿಸದಿರಲು ಸಿಎಂ ಮಮತಾ ಸರ್ಕಾರ ನಿರ್ಯಣ ಕೈಗೊಂಡಿದೆ.
ಬೆಂಗಾವಲು ವಾಹನದ ಮೇಲೆ ಕಲ್ಲು ಎಸೆದ ಸಂಬಂಧ ವಿವರಣೆ ನೀಡಲು ಇದೇ 14 ರಂದು ತಮ್ಮ ಮುಂದೆ ಹಾಜರಾಗಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಸಮನ್ಸ್ ನೀಡಿತ್ತು. ಆದರೆ, ಇದಕ್ಕೆ ಸಾವಲೊಡ್ಡಿರುವ ದೀದಿ ಸರ್ಕಾರ, ಕೇಂದ್ರಕ್ಕೆ ಪತ್ರ ಬರೆದು ಸ್ಪಷ್ಟನೆ ನೀಡಿದೆ.
ಘಟನೆ ಸಂಬಂಧ ಈವರಿಗೆ 3 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 7 ಮಂದಿಯನ್ನು ಬಂಧಿಸಲಾಗಿದೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾಳ್‌ಗೆ ಪತ್ರ ಬರದಿದ್ದಾರೆ. ನಡ್ಡಾ ಅವರು ಸಂಚರಿಸುತ್ತಿದ್ದ ಮಾರ್ಗದಲ್ಲಿ ನಾಲ್ವರು ಹೆಚ್ಚುವರಿ ಎಸ್ಪಿಗಳು, 8 ಮಂದಿ ಡಿವೈಎಸ್ಪಿಗಳು, 14 ಮಂದಿ ಇನ್‌ಸ್ಪೆಪ್ಟಕರ್‌ಗಳು, 70 ಮಂದಿ ಎಸ್‌ಐಗಳು, 40 ಮಂದಿ ಆರ್‌ಐಎಫ್ ಸಿಬ್ಬಂದಿ, 259 ಕಾನ್ಸ್‌ಟೇಬಲ್‌ಗಳ ಸಹಿತ ಸೂಕ್ತ ಭದ್ರತೆ ಒದಗಿಸಲಾಗಿತ್ತು ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.