ETV Bharat / bharat

ಎನ್​ಡಿಎ ಸೇರಿಕೊಳ್ಳುತ್ತಾ ವೈಎಸ್​ಆರ್​ ಕಾಂಗ್ರೆಸ್​?: ಕುತೂಹಲ ಮೂಡಿಸಿದ ಜಗನ್​ ದೆಹಲಿ ಪ್ರವಾಸ! - ವೈಎಸ್​ಆರ್​ ಕಾಂಗ್ರೆಸ್​ ಸುದ್ದಿ

ಬಿಜೆಪಿ ನೇತೃತ್ವದ ಎನ್​ಡಿಎ ಜೊತೆ ವೈಎಸ್​ಆರ್​ ಕಾಂಗ್ರೆಸ್​ ಕೈ ಜೋಡಿಸಲಿದೆ ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿದ್ದು, ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಆಂಧ್ರ ಸಿಎಂ ಜಗನ್​ ಮೋಹನ್​ ರೆಡ್ಡಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.

CM YS Jagan Mohan Reddy meet PM
CM YS Jagan Mohan Reddy meet PM
author img

By

Published : Oct 5, 2020, 6:41 PM IST

Updated : Oct 5, 2020, 7:22 PM IST

ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್​​ ಜಗನ್​ ಮೋಹನ್​ ರೆಡ್ಡಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್​ಡಿಎ ಸೇರಿಕೊಳ್ಳುತ್ತಾರೆಂಬ ಗುಸುಗುಸು ಕೇಳಿ ಬರುತ್ತಿದ್ದು, ಅವರ ದೆಹಲಿ ಪ್ರವಾಸ ಇದೀಗ ಮತ್ತಷ್ಟು ಕೂತುಹಲ ಮೂಡಿಸಿದೆ.

ಕೃಷಿ ಮಸೂದೆ ವಿರೋಧಿಸಿ ಕಳೆದ ವಾರ ಶಿರೋಮಣಿ ಅಕಾಲಿ ದಳ ಹಾಗೂ ಮಹಾರಾಷ್ಟ್ರ ಮೈತ್ರಿ ವಿಚಾರವಾಗಿ ಕಳೆದ ವರ್ಷ ಶಿವಸೇನೆ ಎನ್​ಡಿಎ ಜತೆಗಿನ ಮೈತ್ರಿ ಮುರಿದುಕೊಂಡಿದ್ದು, ಇದೀಗ ಜಗನ್​ ಮೋಹನ್​ ರೆಡಿ ಎನ್​ಡಿಎ ಜತೆ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರಲು ಶುರುವಾಗಿದೆ.

ವೈಎಸ್​ಆರ್​ ಕಾಂಗ್ರೆಸ್​ನ ಹಿರಿಯ ಮುಖಂಡ ಕೂಡ ಇದೇ ವಿಚಾರವಾಗಿ ಮಾತನಾಡಿದ್ದು, ಇಂತಹ ಬೆಳವಣಿಗೆ ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿರುವ ಜಗನ್ ಮೋಹನ್​​ ರೆಡ್ಡಿ ನಾಳೆ ಬೆಳಗ್ಗೆ 10:30ಕ್ಕೆ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಲಿದ್ದು, ಈ ವೇಳೆ, ಮೋದಿ ಖುದ್ದಾಗಿ ಎನ್​ಡಿಎ ಸೇರಿಕೊಳ್ಳಲು ಆಹ್ವಾನ ನೀಡಲಿದ್ದಾರೆ ಎಂದು ಪಕ್ಷದ ಮುಖಂಡರು ಮಾಹಿತಿ ನೀಡಿದ್ದಾರೆ.

CM YS Jagan Mohan Reddy meet PM
ಪ್ರಧಾನಿ ಭೇಟಿ ಮಾಡಲಿರುವ ಜಗನ್​ ಮೋಹನ್ ರೆಡ್ಡಿ

ಕಳೆದ ಎರಡು ವಾರದಲ್ಲಿ ಜಗನ್ ಮೋಹನ್​ ಅವರ ದೆಹಲಿ ಅವರ ಎರಡನೇ ಪ್ರವಾಸ ಇದಾಗಿದ್ದು, ಸೆಪ್ಟೆಂಬರ್​​ 22ರಂದು ಜಗನ್​ ಮೋಹನ್​ ರೆಡ್ಡಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ, ಈ ವೇಳೆ ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಲು ಸಮಯವಕಾಶ ಸಿಕ್ಕಿರಲಿಲ್ಲ. ಆದರೆ ಇದೀಗ ಮಾತುಕತೆ ನಡೆಸಲಿದ್ದಾರೆ.

ಎರಡು ಕೇಂದ್ರ ಸಚಿವ ಸ್ಥಾನ, ಒಂದು ಕೇಂದ್ರ ರಾಜ್ಯ ಖಾತೆ ಸ್ಥಾನ!?

ಲಭ್ಯವಾಗಿರುವ ಮಾಹಿತಿ ಪ್ರಕಾರ ಎನ್​ಡಿಎ ಜತೆ ವೈಎಸ್​ಆರ್​ ಕಾಂಗ್ರೆಸ್​ ಮೈತ್ರಿ ಮಾಡಿಕೊಂಡರೆ ಎರಡು ಕೇಂದ್ರ ಸಚಿವ ಸ್ಥಾನ ಹಾಗೂ ಒಂದು ರಾಜ್ಯ ಖಾತೆ ಸ್ಥಾನ ನೀಡಲು ಬಿಜೆಪಿ ಒಪ್ಪಿಕೊಂಡಿದೆ ಎಂದು ತಿಳಿಸಿದೆ. ವೈಎಸ್​ಆರ್ ಕಾಂಗ್ರೆಸ್​​ನಲ್ಲಿ 22 ಸಂಸದರಿದ್ದು, ಆರು ಸಂಸದರು ರಾಜ್ಯಸಭೆಯಲ್ಲಿದ್ದಾರೆ. ವಿಶೇಷವೆಂದರೆ ಎನ್​ಡಿಎ ಸರ್ಕಾರದೊಂದಿಗೆ ಜಗನ್ ಉತ್ತಮ ಸಂಬಂಧವಿಟ್ಟುಕೊಂಡಿದ್ದಾರೆ.

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮೋದಿ ಸರ್ಕಾರದ ಪರವಾಗಿ ವೈಎಸ್​ಆರ್​ ಕಾಂಗ್ರೆಸ್​ ಸಂಸದರು ಬೆಂಬಲ ನೀಡ್ತಿದ್ದು, ಕೃಷಿ ಮಸೂದೆಗೆ ವಿರೋಧ ವ್ಯಕ್ತವಾಗಿದ್ದ ವೇಳೆ ವೈಎಸ್​ಆರ್​ ಸಪೋರ್ಟ್​ ಮಾಡಿತ್ತು.

Last Updated : Oct 5, 2020, 7:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.