ತಿರುವನಂತಪುರಂ (ಕೇರಳ): ಕೇರಳವನ್ನು ಸಾರ್ವಜನಿಕ ಶಿಕ್ಷಣದಲ್ಲಿ ಡಿಜಿಟಲೀಜಿಕರಣಗೊಂಡ ಮೊದಲ ರಾಜ್ಯ ಎಂದು ಸಿಎಂ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಣರಾಯಿ ವಿಜಯನ್, ಡಿಜಿಟಲೀಕರಣದ ಭಾಗವಾಗಿ ರಾಜ್ಯದ ಎಲ್ಲ ಸಾರ್ವಜನಿಕ ಶಾಲೆಗಳಲ್ಲಿ ಹೈಟೆಕ್ ತರಗತಿ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಸ್ಮಾರ್ಟ್ ತರಗತಿ ಯೋಜನೆಗಾಗಿ 16,027 ಶಾಲೆಗಳಿಗೆ 3,74,274 ಡಿಜಿಟಲ್ ಸಾಧನಗಳನ್ನು ವಿತರಿಸಲಾಗಿದೆ. ಮೊದಲ ಹಂತದಲ್ಲಿ 1 ರಿಂದ 7ನೇ ತರಗತಿಗೆ ಹೈಟೆಕ್ ಲ್ಯಾಬ್ ಹಾಗೂ 8 ರಿಂದ 12 ತರಗತಿಗಳಿಗೆ ಹೈಟೆಕ್ ತರಗತಿ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ.
ಈ ಯೋಜನೆಗೆ ಪ್ರಮುಖವಾಗಿ ಕೆಐಐಎಫ್ಬಿ ಅನುದಾನ ನೀಡಿದ್ದು, ಇದರ ಹೊರತಾಗಿ ಸಾರ್ವಜನಿಕ ಆಸ್ತಿ ಅಭಿವೃದ್ಧಿ ನಿಧಿ ಮತ್ತು ಸ್ಥಳೀಯ ಸರ್ಕಾರದ ಹಣವನ್ನು ಬಳಸಿಕೊಳ್ಳಲಾಗಿದೆ ಎಂದರು.