ETV Bharat / bharat

ಡಿ.8ರ ಭಾರತ್ ಬಂದ್​ಗೆ 'ಆಪ್‌'‌ಬಾಂಧವ ಕೇಜ್ರಿ.. ಕೃಷಿ ಕಾಯ್ದೆಗಳ ವಿರುದ್ಧ ಪೊರಕೆಯಿಂದಲೂ ಹೋರಾಟ

ರೈತರು ಇಂದು ತೊಂದರೆಯಲ್ಲಿದ್ದಾರೆ, ನಾವು ಅವರೊಂದಿಗೆ ನಿಲ್ಲಬೇಕು. ಎಎಪಿ ಡಿಸೆಂಬರ್ 8ರ ಭಾರತ್ ಬಂದ್‌ ಬೆಂಬಲಿಸುತ್ತದೆ. ಹಾಗೆಯೇ ಪಕ್ಷದ ಕಾರ್ಯಕರ್ತರು ರಾಷ್ಟ್ರಾದ್ಯಂತ ಭಾಗವಹಿಸಲಿದ್ದಾರೆ..

CM Kejriwal
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
author img

By

Published : Dec 7, 2020, 1:30 PM IST

ದೆಹಲಿ : ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನಾ ಸ್ಥಳ ಸಿಂಘು ಗಡಿಗೆ (ದೆಹಲಿ-ಹರಿಯಾಣ ಗಡಿ) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರತಿಭಟನಾ ನಿರತ ರೈತರನ್ನು ಭೇಟಿಯಾದರು. ರೈತರ ಅನುಕೂಲಕ್ಕಾಗಿ ಮಾಡಿದ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು '"ನಾವು ರೈತರ ಎಲ್ಲಾ ಬೇಡಿಕೆಗಳನ್ನು ಬೆಂಬಲಿಸುತ್ತೇವೆ. ಅವರ ಸಮಸ್ಯೆಗಳು ಮತ್ತು ಬೇಡಿಕೆಗಳು ಮಾನ್ಯವಾಗಿವೆ. ನಮ್ಮ ಪಕ್ಷ ಮತ್ತು ನಾನು ಮೊದಲಿನಿಂದಲೂ ಅವರೊಂದಿಗೆ ನಿಂತಿದ್ದೇವೆ. ಅವರ ಪ್ರತಿಭಟನೆಯ ಆರಂಭದಲ್ಲಿ ದೆಹಲಿ ಪೊಲೀಸರು ಒಂಬತ್ತು ಕ್ರೀಡಾಂಗಣಗಳನ್ನು ಜೈಲುಗಳಾಗಿ ಪರಿವರ್ತಿಸಲು ಅನುಮತಿ ಕೋರಿದ್ದರು.

ನನಗೆ ಈ ಬಗ್ಗೆ ಒತ್ತಡವು ಬಂದಿತ್ತು. ಆದರೆ, ಅನುಮತಿ ನೀಡಲಿಲ್ಲ. ನಮ್ಮ ಪಕ್ಷ, ನಮ್ಮ ಶಾಸಕರು ಮತ್ತು ಮುಖಂಡರು ಅಂದಿನಿಂದಲೂ ರೈತರಿಗಾಗಿ 'ಸೇವಾದಾರರಂತೆ' ಸೇವೆ ಸಲ್ಲಿಸುತ್ತಿದ್ದಾರೆ. ನಾನು ಇಲ್ಲಿಗೆ ಸಿಎಂ ಆಗಿ ಬಂದಿಲ್ಲ 'ಸೇವಾದಾರ'ನಾಗಿ ಬಂದಿದ್ದೇನೆ.

ರೈತರು ಇಂದು ತೊಂದರೆಯಲ್ಲಿದ್ದಾರೆ, ನಾವು ಅವರೊಂದಿಗೆ ನಿಲ್ಲಬೇಕು. ಎಎಪಿ ಡಿಸೆಂಬರ್ 8ರ ಭಾರತ್ ಬಂದ್‌ ಬೆಂಬಲಿಸುತ್ತದೆ. ಹಾಗೆಯೇ ಪಕ್ಷದ ಕಾರ್ಯಕರ್ತರು ರಾಷ್ಟ್ರಾದ್ಯಂತ ಭಾಗವಹಿಸಲಿದ್ದಾರೆ' ಎಂದು ಹೇಳಿದರು.

ಓದಿ:ರೈತರ ಪರ ವಿಜೇಂದರ್ 'ಬಾಕ್ಸಿಂಗ್': ಖೇಲ್ ರತ್ನ ವಾಪಸ್​ 'ಪಂಚ್'!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.