ETV Bharat / bharat

ತೆಲಂಗಾಣ: ಸೋದರ ಸಂಬಂಧಿಗೆ ಹಣಕಾಸು ಖಾತೆ ನೀಡಿದ ಸಿಎಂ ಕೆಸಿಆರ್ - ತೆಲಂಗಾಣ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್ ಅವರ ಸಲಹೆ ಮೇರೆಗೆ, ತೆಲಂಗಾಣ ರಾಜ್ಯಪಾಲೆ ಡಾ. ತಮಿಳಿಸಾಯಿ ಸೌಂದರ್​ರಾಜನ್​ ಅವರು 6 ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದಾರೆ. ಕೆಸಿಆರ್​ ತಮ್ಮ ಸೋದರ ಸಂಬಂಧಿಗೆ ಹಣಕಾಸು ಖಾತೆಯನ್ನು ನೀಡಿದ್ದಾರೆ.

ಹಣಕಾಸು ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ಟಿ ಹರೀಶ್​​ ರಾವ್
author img

By

Published : Sep 9, 2019, 10:38 AM IST

ಹೈದರಾಬಾದ್​: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಸಚಿವ ಸಂಪುಟ ವಿಸ್ತರಿಸಿದ್ದು, ತಮ್ಮ ಸೋದರ ಸಂಬಂಧಿ ಹರೀಶ್​ ರಾವ್​ಗೆ ಹಣಕಾಸು ಖಾತೆ ನೀಡಿದ್ದಾರೆ.

ಭಾನುವಾರ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು, ನೂತನ 6 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​, ತಮ್ಮ ಸೋದರಳಿಯನಾದ ಟಿ ಹರೀಶ್​​ ರಾವ್​ಗೆ ಹಣಕಾಸು ಖಾತೆ ನೀಡಿದ್ದಾರೆ.

ಹಣಕಾಸು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಟಿ. ಹರೀಶ್​​ ರಾವ್

ಸಿಎಂ ಕೆಸಿಆರ್​ ಶಿಫಾರಸಿನ ಮೇರೆಗೆ, ತೆಲಂಗಾಣ ರಾಜ್ಯಪಾಲೆ ಡಾ. ತಮಿಳಿಸಾಯಿ ಸೌಂದರ್​ರಾಜನ್​ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

ಇದರೊಂದಿಗೆ ಸಿಎಂ ತಮ್ಮ ಪುತ್ರ ಕೆ. ತಾರಕ ರಾಮರಾವ್ ಅವರಿಗೆ ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಉಸ್ತುವಾರಿ, ಕೈಗಾರಿಕೆಗಳು- ಐಟಿ ಮತ್ತು ಕಮ್ಯುನಿಕೇಷನ್​ ಹೊಣೆ ನೀಡಿದ್ದಾರೆ. ಇದರೊಂದಿಗೆ ಸತ್ಯವತಿ ರಾಥೋಡ್​ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪುವ್ವಾಡ ಅಜಯ್​ ಕುಮಾರ್​ಗೆ ಸಾರಿಗೆ ಇಲಾಖೆ, ಜಿ ಜಗದೀಶ್​ ರೆಡ್ಡಿಗೆ ಇಂಧನ ಇಲಾಖೆಯ ಜವಾಬ್ದಾರಿ ವಹಿಸಿದ್ದಾರೆ. ಇನ್ನು, ಸಬಿತಾ ಇಂದ್ರಾ ರೆಡ್ಡಿ ಅವರನ್ನು ಶಿಕ್ಷಣ ಸಚಿವರಾನ್ನಾಗಿ ಮಾಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.