ETV Bharat / bharat

ರೈಲ್ವೆ ಬೋಗಿಯ ಐಸೋಲೇಷನ್ ವಾರ್ಡ್​ ಉತ್ತಮ ವ್ಯವಸ್ಥೆ ಹೊಂದಿದೆ: ಅನುಭವ ಹಂಚಿಕೊಂಡ ವ್ಯಕ್ತಿ - ಕೋವಿಡ್-19 ಶಂಕಿತರನ್ನಿರಿಸಲು ಐಸೋಲೇಷನೆ ವಾರ್ಡ್

ಕೋವಿಡ್-19 ಶಂಕಿತರನ್ನ ಇರಿಸಲು ತಯಾರಾದ ರೈಲ್ವೆ ಬೋಗಿಯ ಐಸೋಲೇಷನ್ ವಾರ್ಡ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬೋಗಿಯ ವಾರ್ಡ್​ನಲ್ಲಿದ್ದು ಹೊರಬಂದ ಮೊದಲ ವ್ಯಕ್ತಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

railway coach
railway coach
author img

By

Published : Jun 23, 2020, 5:20 PM IST

ನವದೆಹಲಿ: ಕೋವಿಡ್-19 ಶಂಕಿತರನ್ನು ಇರಿಸಲು ಐಸೋಲೇಷನ್​ ವಾರ್ಡ್​ಗಳಾಗಿ ಪರಿವರ್ತನೆಗೊಂಡಿರುವ ರೈಲ್ವೆ ಬೋಗಿಗಳು ಉತ್ತಮ ವ್ಯವಸ್ಥೆಗಳನ್ನು ಒಳಗೊಂಡಿವೆ ಎಂದು ರೈಲ್ವೆ ಬೋಗಿಯ ಐಸೋಲೇಷನ್ ವಾರ್ಡ್​ನಲ್ಲಿದ್ದು ಹೊರಬಂದ ಮೊದಲ ವ್ಯಕ್ತಿ ಹೇಳಿದ್ದಾರೆ.

ಸ್ವಚ್ಛ ಶೌಚಾಲಯಗಳು, ಬಣ್ಣ ಬಳಿದ ಡಸ್ಟ್‌ ಬಿನ್‌ಗಳು, ಆರಾಮದಾಯಕವಾದ ಹಾಸಿಗೆಗಳು, ಆಮ್ಲಜನಕದ ಸಿಲಿಂಡರ್‌ಗಳು ಮತ್ತು ಉನ್ನತ ದರ್ಜೆಯ ಆಸ್ಪತ್ರೆಯಲ್ಲಿ ನಿರೀಕ್ಷಿಸಬಹುದಾದ ಎಲ್ಲಾ ಸೌಲಭ್ಯಗಳು ಅಲ್ಲಿವೆ ಎಂದಿದ್ದಾರೆ.

ನಾನು ಈ ಹಿಂದೆ ರೈಲುಗಳಲ್ಲಿ ಬಹಳಷ್ಟು ಪ್ರಯಾಣಿಸಿದ್ದೇನೆ. ಆದರೆ ಐಸೋಲೇಷನ್​ ವಾರ್ಡ್​ಗಳಾಗಿ ಪರಿವರ್ತನೆಗೊಂಡ ರೈಲ್ವೆ ಬೋಗಿಯನ್ನು ಪ್ರವೇಶಿಸಿದಾಗ ಅದರ ಮಾರ್ಪಾಡುಗಳನ್ನು ನೋಡಿ ನನ್ನ ಊಹೆಗಳೆಲ್ಲಾ ಸುಳ್ಳಾಯಿತು. ಸೊಳ್ಳೆಗಳ ಸಮಸ್ಯೆ ಬಿಟ್ಟರೆ ಅಲ್ಲಿ ಉತ್ತಮ ವ್ಯವಸ್ಥೆಗಳನ್ನು ಮಾಡಲಾಗಿತ್ತು. ವಾಸ್ತವ್ಯ ಆರಾಮದಾಯಕವಾಗಿತ್ತು ಎಂದು ಉತ್ತರ ಪ್ರದೇಶದ ಮಾವು ಪ್ರದೇಶದ ಕೃಷ್ಣಕಾಂತ್ ಶರ್ಮಾ ಹೇಳಿದ್ದಾರೆ.

ಹಾಸಿಗೆಗಳ ಕೆಳಗೆ ಸೊಳ್ಳೆಗಳು ಕಂಡುಬರುತ್ತಿದ್ದವು. ಅದಕ್ಕಾಗಿ ಆಸನಗಳ ಕೆಳಗೆ ನಿವಾರಕವನ್ನು ಸಿಂಪಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಕೃಷ್ಣಕಾಂತ್, ಅವರ ಪತ್ನಿ ನೀತು, ಅವರ 11 ತಿಂಗಳ ಮಗಳು ವನ್ಶಿಕಾ, ಅವರ ಕುಟುಂಬದ ಸದಸ್ಯರು ಸೇರಿದಂತೆ 59 ಶಂಕಿತರನ್ನು ಕೋವಿಡ್-19 ರೈಲ್ವೆ ಬೋಗಿಯ ಐಸೋಲೇಷನ್ ವಾರ್ಡ್​ನಲ್ಲಿ ಇರಿಸಲಾಗಿತ್ತು. ಬೋಗಿಯ ಐಸೋಲೇಷನ್ ವಾರ್ಡ್​ನಲ್ಲಿದ್ದ ಮೊದಲ ತಂಡ ಇದಾಗಿತ್ತು. ಉತ್ತರ ಪ್ರದೇಶದಲ್ಲಿ ಇಂತಹ 372 ಬೋಗಿಗಳನ್ನು ನಿಯೋಜಿಸಲಾಗಿದೆ.

ಮುಂಬೈನಿಂದ ಹಿಂದಿರುಗಿದ ಕೃಷ್ಣಕಾಂತ್ ಮತ್ತು ಅವರ ಕುಟುಂಬದ ಗಂಟಲು ದ್ರವದ ಮಾದರಿಗಳನ್ನು ಮಾವು ಪ್ರದೇಶದ ಕೇಂದ್ರವೊಂದರಲ್ಲಿ ಸಂಗ್ರಹಿಸಲಾಗಿತ್ತು. ಫಲಿತಾಂಶ ಬರುವ ತನಕ ರೈಲ್ವೆ ಬೋಗಿಯ ಐಸೋಲೇಷನ್ ವಾರ್ಡ್​ನಲ್ಲಿರುವಂತೆ ಅವರಿಗೆ ಸೂಚಿಸಲಾಗಿತ್ತು. ಅವರ ಕುಟುಂಬದ ಎಲ್ಲಾ ಆರು ಸದಸ್ಯರ ವರದಿ ನೆಗೆಟಿವ್ ಬಂದ ಕಾರಣ ಮರುದಿನ ಅವರನ್ನು ಸ್ಪೆಷಲ್ ಕೋಚ್​ನಿಂದ ಬಿಡುಗಡೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.